ಲೋಕದರ್ಶನ ವರದಿ
ಧಾರವಾಡ14 : ಬಿ.ಕೆ. ಪವಿತ್ರ ಮತ್ತು ಇತರರ ಪ್ರಕರಣದಲ್ಲಿ, ಕನರ್ಾಟಕ ಮೀಸಲಾತಿ ಅಧಿನಿಯಮ-2018 ರ ಸಿಂಧುತ್ವವನ್ನು ಮಾನ್ಯ ಮಾಡಿ ಸುಪ್ರೀಂ ಕೋರ್ಟ ತೀಪರ್ು ನೀಡಿದ ಹಿನ್ನೆಲೆಯಲ್ಲಿ ಹಿಂಬಡ್ತಿಗೆ ಒಳಗಾಗಿರುವ ಪರಿಶಿಷ್ಟ ಜಾತಿ (ಎಸ್.ಸಿ.) ಹಾಗೂ ಪರಿಶಿಷ್ಟ ಜನಾಂಗ (ಎಸ್.ಟಿ.) ಬೋಧಕೇತರ ನೌಕರರಿಗೆ ಶೀಘ್ರವೇ ಮತ್ತೆ ಹಿಂದಿನ ಬಡತಿ ಹುದ್ದೆ ಪರಿಗಣಸಿ ಸ್ಥಳ ನಿಯುಕ್ತಿಗೊಳಿಸಲು ಆದೇಶ ನೀಡಬೇಕೆಂದು ರಾಜ್ಯ ಸರಕಾರಿ ಎಸ್.ಸಿ.-ಎಸ್.ಟಿ. ನೌಕರರ ಸಮನ್ವಯ ಸಮಿತಿಯ ಜಿಲ್ಲಾ ಘಟಕ ಆಗ್ರಹಿಸಿದೆ.
ಸಮಿತಿಯ ಪದಾಧಿಕಾರಿಗಳು ಸೋಮವಾರ ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿದರ್ೆಶಕ ಡಾ.ಬಿ.ಕೆ.ಎಸ್. ವರ್ಧನ್ ಅವರಿಗೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿ ಒತ್ತಾಯಿಸಿದರು.
ಈಗಾಗಲೇ ವರದಿಯಾಗಿರುವಂತೆ ಸುಪ್ರೀಂ ಕೋಟರ್ಿನ ನ್ಯಾಯಪೀಠವು ಪರಿಗಣಿಸಿರುವಂತೆ "ಕನರ್ಾಟಕ (ರಾಜ್ಯದ ಸಿವ್ಹಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ-2018" ರ ಅಡಿಯಲ್ಲಿ ಪರಿಗಣಿಸಿ ಪ್ರಸ್ತುತ ಸೇವೆಯಲ್ಲಿ ಹಿಂಬಡತಿಗೊಳ್ಳುವ ಪೂರ್ವದಲ್ಲಿದ್ದ ಹುದ್ದೆ ಮತ್ತು ಅದೇ ಸ್ಥಳಕ್ಕೆ ಪರಿಶಿಷ್ಟ ಜಾತಿ (ಎಸ್.ಸಿ.) ಹಾಗೂ ಪರಿಶಿಷ್ಟ ಜನಾಂಗ (ಎಸ್.ಟಿ.) ಎಲ್ಲ ಬೋಧಕೇತರ ನೌಕರರಿಗೆ ಕೂಡಲೇ ಪುನರ್ ಸ್ಥಳ ನಿಯುಕ್ತಿಗೊಳಿಸುವಂತೆ ಎಸ್.ಸಿ.-ಎಸ್.ಟಿ. ನೌಕರರ ಸಮನ್ವಯ ಸಮಿತಿ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕನರ್ಾಟಕ ರಾಜ್ಯ ಸರಕಾರಿ ಎಸ್.ಸಿ.-ಎಸ್.ಟಿ. ನೌಕರರ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ. ರಾಮದುರ್ಗ, ಪ್ರಧಾನ ಕಾರ್ಯದಶರ್ಿ ಎಸ್.ಬಿ. ಕೇಸರಿ, ಪದಾಧಿಕಾರಿಗಳಾದ ಪಿ.ಎಸ್. ಕುಸಗೂರ, ಮಾಲತೇಶ ಇಂಗಳೇಶ್ವರ ಇತರರು ಇದ್ದರು.