ಲೋಕದರ್ಶನ ವರದಿ
ಬೆಳಗಾವಿ, 6: ಎಸ್ಸಿ,ಎಸ್ಟಿ ಶೊಷೀತರಿಗೆ ಸಾಮಾಜಿಕ ನ್ಯಾಯ ನೀಡಲು ಸಂವಿಧಾನ ಬದ್ದವಾಗಿರಾಜ್ಯಸರಕಾರತಂದಿದ್ದ, ಶಾಸನ ಬದ್ದವಾಗಿ ರೂಪಿಸಿದ ಕಾಯ್ದೆಗಳ ವಿರುದ್ಧ ಸುಪ್ರೀಂಕೊಟರ್್ ನೀಡಿರುವತೀಪರ್ಿನ ವಿರುದ್ಧ ಸುಗ್ರೀವಾಜ್ಞೇಆಗ್ರಹಿಸಿ. ಡಿ.14 ರಂದು ಕನರ್ಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಬೃಹತ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದುರಾಜ್ಯ ಸಂಚಾಲಕರು ಹೆಣ್ಣೂರು ಶ್ರೀನಿವಾಸ ಹೇಳಿದರು.
ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿಗುರುವಾರ ಮಾತನಾಡಿದಅವರು, ಬೆಳಗಾವಿ ಅಧಿವೇಶನದಲ್ಲಿ ಸಕರ್ಾರದ ಪರಮಾಧಿಕಾರ ಬಳಸಿ, ಸುಗ್ರೀವಾಜ್ಞೆತರಬೇಕೆಂದು ಆಗ್ರಹಿಸಿ ಸಮಾವೇಶವನ್ನು ಮಾಡಲಾಗುವುದು ಎಸ್ಸಿ/ಎಸ್ಟಿಜನಾಂಗದವರಿಗೆ ಪ್ರತಿಯೊಂದು ಹಂತದಲ್ಲಿಅನ್ಯಾಯವಾಗುತ್ತಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳು, ಮುಖ್ಯ ಅಧಿಕಾರಿಗಳಿಗೆ ರಾಜ್ಯ ಸರಕಾರ ನಿದರ್ೇಶನ ನೀಡಿ ಸರಿಯಾಗಿ ಕಾರ್ಯನಿರ್ವಸುವಂತೆ ಎಚ್ಚರಿಕೆ ರವಾನೆ ಹೊರಡಿಸಬೇಕೆಂದರು.
ಈಗಾಗಲೇ ಪರಿಶಿಷ್ಟ ಜಾತಿ/ಪ.ಪಂಗಡದವರಿಗೆ ಶೇ.50% ರಷ್ಟು ಭೂಮಿಯನ್ನು ಮೀಸಲಿಟ್ಟುಭೂ ಮಂಜೂರು ಮಾಡಬೇಕು.ಈ ನಿಯಮವನ್ನುಆಯಾ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಳು ಅನುಷ್ಠಾನಗೊಳಿಸಬೇಕಿತ್ತು. ಆದರೆ ಪರಿಶಿಷ್ಟ ಜಾತಿಪ. ಪಂಗಡ ಗಳಿಗಿರುವ ಶೇ.50% ಭೂ ಮಂಜೂರಾತಿಯಲ್ಲಿ ಶೇ.5% ರಿಂದ ಶೇ.10% ರಷ್ಟು ಮಂಜೂರಾತಿಯಾಗಿಲ್ಲ. ಕಾನೂನು ಕಾಯ್ದೆಗಳಲ್ಲಿ ಅವಕಾಶವಿದ್ದರೂಇದು ಅಧಿಕಾರಿಗಳ ಅಸಡ್ಡೆ ಸಂಕುಚಿತಜಾತಿ ಮನಸ್ಸಿನಿಂದಾಗಿ ಶೇ.90% ರಷ್ಟುದಲಿತರು ಭೂ ಹೀನರಾಗಿ ಮೇಲು ವರ್ಗಗಳ ಜಮೀನು ಹೊಲಗದ್ದೆ, ಪ್ಲಾಂಟೇಷನ್ ತೋಟಗಳಲ್ಲಿ ಜೀವನ ಪರ್ಯಂತ ಕೂಲಿಗಾಗಿ ಜೀತಗಾರರಾಗಿ ಗಾಣದ ಎತ್ತಿನಂತೆ ದುಡಿಯುತ್ತಿದ್ದಾರೆ.
ನಾಮಕಾವಸ್ತೆ ಕೆಲವು ದಲಿತರಿಗೆ ಸಣ್ಣ ಪುಟ್ಟ ಭೂಮಿ ನೀಡಿದರೂ ಬೆದರಿಸಿ ಚೂರು ಪಾರು ಹಣ ಹೆಂಡ ನೀಡಿ ಶ್ರೀಮಂತರೇ ಅಕ್ರಮ ಪರಬಾರೆ ಮಾಡಿಸಿಕೊಂಡಿದ್ದಾರೆ ಎಂದರುದೂರಿದರು.
70ರ ದಶಕಆರಂಭದಲ್ಲಿ ಬಹು ದೊಡ್ಡ ಭೂ ಹೋರಾಟವನ್ನು ಕೈಗೆತ್ತಿಕೊಂಡ ಕನರ್ಾಟಕ ದಲಿತ ಚಳವಳಿಯ ಜನಕ ಪ್ರೊ.ಬಿ. ಕೃಷ್ಣಪ್ಪನವರು ಶಿವಮೊಗ್ಗ ಜಿಲ್ಲೆಯ ಸಿದ್ಲಿಪುರ ಗ್ರಾಮದದಲಿತರ ಭೂಮಿ ಆಕ್ರಮಿಸಿಕೊಂಡಿದ್ದ ದೊಡ್ಡ ಭೂಮಾಲೀಕರ ವಿರುದ್ಧ ವಷರ್ಾನುಗಟ್ಟಲೆ ನಿರಂತರ ಧರಣಿ ಸತ್ಯಾಗ್ರಹ ನಡೆಸಿ ಸಕರ್ಾರದಕಣ್ಣು ತೆರೆಸಿದರಿಂದ ಇಂತಹ ಸಾವಿರಾರು ಪ್ರಕರಣಗಳಲ್ಲಿ ದಲಿತರು ಭೂಮಿ ಕಳೆದು ಕೊಂಡಿದ್ದಾರೆ. ಅವರಿಗೆ ನ್ಯಾಯದೊರಕಿಸಲು.
ದಲಿತ ಸಮುದಾಯ ವಷರ್ಾನುಗಟ್ಟಲೆ ಹೋರಾಟ ಮಾಡಿತಮ್ಮರಕ್ತವನ್ನು ಬೆವರಾಗಿ ಸುರಿಸಿದ್ದಾರೆ. ಜೀವತೆತ್ತಿದ್ದಾರೆ. ಇದ್ಯಾವುದರ ಪರಿವೆಇಲ್ಲದ ಮನುವಾದಿ ನ್ಯಾಯಧೀಶರುಗಳು ಸುಪ್ರೀಂಕೋರ್ಟನಲ್ಲಿ ಪಿ.ಟಿ.ಸಿ.ಎಲ್. ಖಅ/ಖಖಿ ಕಾಯ್ದೆ, ಮುಂಬಡ್ತಿ ಕಾಯ್ದೆಗಳ ವಿರುದ್ಧ ತೀಪರ್ುಗಳನ್ನು ನೀಡುವ ಮೂಲಕ ರಾಜ್ಯ ಸಕರ್ಾರಗಳ ಶಾಸನ ಬದ್ಧ ಸ್ವಾಯತ್ತತ್ತೆಯನ್ನೂ ಹತ್ತಿಕ್ಕತ್ತಿವೆಎಂದು ವಿಷಾದ ವ್ಯಕ್ತಪಡಿಸಿದರು.
"ಸಕರ್ಾರಿ ಭೂಮಿ ನಮ್ಮ ಭೂಮಿ" ಎಂಬ ಘೋಷಣೆಯನ್ನು 80ರದಶಕದಲ್ಲಿಸಂಘಟನೆಯಮೂಲಕಕರೆನೀಡಿದರಿಂದದಲಿತರು, ಹಿಂದುಳಿದ ಜಾತಿಗಳು, ಭೂಹೀನಬಡವರು, ಸಕರ್ಾರಿಭೂಮಿಯನ್ನು ಆಕ್ರಮಿಸಿಸಾಗುವಳಿಮಾಡಲಾರಂಭಿಸಿದರು.
ಪರಿಶಿಷ್ಟ ಜಾತಿಗಳೊಳಗಿನ ವಗರ್ೀಕರಣಕ್ಕಾಗಿರಾಜ್ಯ ಸಕರ್ಾರವೇ ರಚಿಸಿದ ನ್ಯಾಯಮೂತರ್ಿಏ.ಜೆ. ಸದಾಶಿವ ಆಯೋಗವು ಸವಿವರವಾದ ವರದಿಯನ್ನುರಾಜ್ಯ ಸಕರ್ಾರಕ್ಕೆ ನೀಡಿ ಸುಮಾರು 5 ವರ್ಷಗಳೆ ಕಳೆದರೂ ಈ ವರದಿಯನ್ನುಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡುವ ಬದಲು ಜಾತಿಗಳೊಳಗಿನ ಒಡೆದಾಳುವ ನೀತಿ ಅನುಸರಿಸುತ್ತಾ ಅಸ್ಪೃಶ್ಯ ಜಾತಿಗಳಿಗೆ ಸಕರ್ಾರ ಘೋರ ಅನ್ಯಾಯ ಮಾಡುತ್ತಿದೆ. ಈ ಕೂಡಲೇಅಧಿವೇಶನದಲ್ಲಿ ವರದಿಯನ್ನು ಅಂಗೀಕರಿಸಿ ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಲೇಬೇಕು.
ಈಗಲಾದರೂಎಚ್ಚೆತ್ತುಕೊಂಡು ವಿದ್ಯಾವಂತರು 70-80ರ ದಶಕದದಲಿತ ಚಳವಳಿಯ ಹೋರಾಟದ ಇತಿಹಾಸವನ್ನು ಮರು ಹುಟ್ಟು ಪಡೆದು, ಹೋರಾಡಿದರೆ ಮಾತ್ರಮುಂದಿನ ಪೀಳಿಗೆಗೆ ಉಳಿಗಾಲವಿದೆ ಎಂದರು.
ಈ ಸಾನಿಧ್ಯವನ್ನು ಮುರಘ ರಾಜೇಂದ್ರಶ್ರೀಗಳು ವಹಿಸಲಿದ್ದು, ಕಾರ್ಯಕ್ರದ ಉದ್ಘಾಟನೆಯನ್ನು ಮಾಜಿ ಸಚಿವರಾದ ಸತೀಶ ಜಾರಕಿಹೊಳಿರವರು ನೇರವೆರಿಸಲ್ಲಿದ್ದಾರೆ. ಅಧ್ಯಕ್ಷತೆಯನ್ನುರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸರವರು ವಹಿಸಲಿದ್ದಾರೆ. ಗೌರವ ಮುಖ್ಯ ಅಥಿತಿಗಳಾಗಿ ಪ್ರಿಯಾಂಕಖಗರ್ೆ ಸಮಾಜಕಲ್ಯಾಣ ಸಚಿವರು, ಕನರ್ಾಟಕ ಸಕರ್ಾರ, ಆರ್.ಬಿ. ತಿಮ್ಮಾಪೂರ ಮಾಜಿ ಸಚಿವರು ಹಾಗೂ ವಿಧಾನ ಸಭೆಗೆ ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮರೀಶ ನಾಗನ್ನವರ ,ಎಸ್ಎನ್.ಮಲ್ಲಪ್ಪ, ಯಲ್ಲಪ್ಪ ಗೊರನ್ನಕೊಳ್ಳ, ಲಕ್ಷ್ಮಣ ಯಳ್ಳೂಕರ, ಪ್ರಕಾಶ ತಳವಾರ ಉಪಸ್ಥಿತಿರಿದ್ದರು.