ಬಡ್ಡಿ ದಂಧೆಕೊರರಿಗೆ ಮುಳ್ಳಾದ ಎಸ್. ಪಿ ನಾರಾಯಣ್ ತಂಡ
ಮುಂಡಗೋಡ 04: ಮುಂಡಗೋಡಿನ ಪಾಲಿಗೆ ಬಡ್ಡಿ ದಂಧೆ ಕುಟುಕು ಮುಳ್ಳಾಗಿ ಪರಿಣಮಿಸಿದ್ದು ಇದಕ್ಕೆ ಆಪರೇಶನ್ ಮಾಡಲು ನಿನ್ನೆ ವಿಶೇಷ ವ್ಯಕ್ತಿಗಳ ಆಗಮನವಾಗಿತ್ತು! ಅವರ್ಯಾರು ಅಂತೀರಾ? ಜಿಲ್ಲೆಯ ಖಡಕ್ ಎಸ್. ಪಿ ಎಂದೇ ಖ್ಯಾತರಾದ ಎಮ್. ನಾರಾಯಣ್ ಹಾಗೂ ಅವರ ತಂಡ ನಿನ್ನೆಯಿಂದಲೇ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬೀಡು ಬಿಟ್ಟಿದೆ!
ತಡರಾತ್ರಿಯಿಂದಲೇ ಪೋಲೀಸ್ ಬೇಟೆ ಶುರುವಾಗಿದ್ದು ಪೋಲೀಸರ ವಿವಿಧ ತಂಡಗಳು ಆರೋಪಿತರ ಮನೆಗೆ ಹೋಗಿ ಶಂಕಿತರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯಲ್ಲಿ ಹೆಚ್ಙುವರಿ ಪೋಲೀಸ್ ವರಿಷ್ಠಾಧಿಕಾರಿ ಜಗದೀಶ್ ನಾಯ್ಕ್, ಶಿರಸಿ ಡಿವೈಎಸ್ಪಿ ಗಣೇಶ್ ಕೆ. ಎಲ್ ಹಾಜರಿದ್ದರು. ಹಾಗೆಯೇ ಸ್ಥಳೀಯ ಪೋಲೀಸ್ ಅಧಿಕಾರಿಗಳು, ಠಾಣೆಗಳ ಸಿಬ್ಬಂದಿಗಳು ಮತ್ತು ಹೊರ ತಾಲೂಕಿನ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ ಭಾಗವಹಿಸಿದೆ.