ಲೋಕದರ್ಶನ ವರದಿ
ಹಂಪಿ 23: ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿ ಅಧ್ಯಯನ ವಿಭಾಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಅಬ್ದುಲ್ ನಜೀರ್ಸಾಬ್ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕನರ್ಾಟಕ ಸರಕಾರದ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ 3 ದಿನಗಳ ರಾಷ್ಟ್ರೀಯ ವಿಚಾರಸಂಕಿರಣವನ್ನು 23ನೇ ಫೆಬ್ರವರಿ 2019ರಂದು ಮಂಟಪ ಸಭಾಂಗಣದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ವಿಚಾರಸಂಕಿರಣಕ್ಕೆ ಚಾಲನೆ ನೀಡಿ ಉದ್ಘಾಟನಾ ಭಾಷಣ ಮಾಡಿದರು.
ಕಾನೂನಿನ ಪ್ರಕಾರ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಗ್ರಾಮಸಭೆಗಳು ತಮ್ಮ ಪಾತ್ರ ನಿರ್ವಹಿಸುವ ಅಧಿಕಾರ ಚಲಾಯಿಸುವ ಸುವ್ಯವಸ್ಥೆ ತರುವ ಪ್ರಯತ್ನ ಮಾಡದಿದ್ದರೆ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಇದು ವಾಸ್ತವ ಸಂಗತಿ ನಿಜವಾದ ಪಂಚಾಯತ್ರಾಜ್ ಅಸ್ತಿತ್ವಕ್ಕೆ ಬಂದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಗ್ರಾಮಮಟ್ಟದಲ್ಲಿ ಗ್ರಾಮಸಭೆಗಳಂತೆ ನಗರ ಪ್ರದೇಶಗಳಲ್ಲಿ ವಾಡರ್್ಸಭೆಗಳು ಅಸ್ತಿತ್ವಕ್ಕೆ ಬಂದರೆ ಅನೇಕ ಅನುಕೂಲಗಳಾಗುತ್ತದೆ. ಸಂವಿಧಾನದಲ್ಲಿರುವ ನಿಯಮಗಳಂತೆ ಕೆಲಸಗಳಾಗುತ್ತಿಲ್ಲ. ಗ್ರಾಮಸಭೆಗಳನ್ನು ಸಬಲೀಕರಣಗೊಳಿಸಬೇಕಾಗಿದೆ ಎಂದು ಪಾಟೀಲರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರು ಗ್ರಾಮಾಂತರ ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷ ಸನ್ಮಾನ್ಯ ಸಿ.ನಾರಾಯಣಸ್ವಾಮಿ ಮಾತನಾಡುತ್ತ ಕನ್ನಡ ವಿಶ್ವವಿದ್ಯಾಲಯದ ಬೌದ್ಧಿಕ ಪರಿಸರ, ಕಾರ್ಯಚಟುವಟಿಕೆಗಳು ನಮ್ಮೆಲ್ಲರನ್ನು ವಿಭಿನ್ನ ರೀತಿಯಲ್ಲಿ ಆಕಷರ್ಿಸುತ್ತಿದೆ. ರಾಷ್ಟ್ರದ ಇತರ ರಾಜ್ಯಗಳಿಗೆ ಹೋಲಿಸಿದರೆ ಕನರ್ಾಟಕ ರಾಜ್ಯ ಪಂಚಾಯತ್ರಾಜ್ ಕಾಯ್ದೆಯಲ್ಲಿ ಅತ್ಯುತ್ತಮವಾದ ಅಂಶಗಳಿವೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕುಲಸಚಿವರಾದ ಡಾ. ಅಶೋಕಕುಮಾರ ರಂಜೇರೆ ಅವರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಚಾಲಕರಾದ ಡಾ.ಜನಾರ್ದನ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಗೀತಮ್ಮ ನಿರೂಪಿಸಿದರು. ಡಾ. ಗೋವರ್ಧನ ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು, ವಿದ್ಯಾಥರ್ಿಗಳು ಪ್ರಾಥರ್ಿಸಿದರು.