ಲೋಕದರ್ಶನ ವರದಿ
ಗದಗ 13: ಶ್ರೀಕ್ಷೇತ್ರ ಮೈಲಾರ ಗುಡ್ಡದ ಕಾಣರ್ಿಕ ನುಡಿಯುವ ಗೊರವಯ್ಯನವರಿಗೆ ವಿಶೇಷ ಗೌರವ ಸ್ಥಾನಮಾನಗಳಿರುತ್ತವೆ. ಆದರೆ, ದೇವಾಲಯದ ಧರ್ಮದಶರ್ಿ ವೆಂಕಪ್ಪಯ್ಯ ಒಡೆಯರ್ ಅವರು ಸವರ್ಾಧಿಕಾರಿ ಧೋರಣೆಯಿಂದ ಕಾಣರ್ಿಕ ನುಡಿಯುವ ಗೊರವಯ್ಯನವರನ್ನು ಪದೇ ಪದೇ ಬದಲಾಯಿಸುವ ಮೂಲಕ ಭಕ್ತರ ನಂಬಿಕೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಹೇಳಿದರು.
ನಗರದ ವಿದ್ಯಾನಿಧಿ ಪ್ರಕಾಶನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಭಕ್ತರ ಕಷ್ಟಗಳನ್ನು ಪರಿಹರಿಸುವ ಏಳುಕೋಟಿ ಮೈಲಾರ ದೇವರ ಕಾಣರ್ೀಕೋತ್ಸವವು ಪ್ರತಿವರ್ಷವು ಫೆಬ್ರವರಿ ತಿಂಗಳ ಭರತ ಹುಣ್ಣಿಮೆಯ ದಿನ ನೇರವೇರುತ್ತದೆ. ಕಾಣರ್ಿಕೋತ್ಸವದಲ್ಲಿ "ಕಾಣರ್ಿಕ ನುಡಿ"ಯನ್ನು ಆಲಿಸಲು ಲಕ್ಷಾಂತರ ಭಕ್ತರು ದೇಶದೆಲ್ಲೆಡೆಯಿಂದ ಶ್ರೀಕ್ಷೇತ್ರಕ್ಕೆ ಆಗಮಿಸುತ್ತಾರೆ. ಕಾಣರ್ಿಕ ನುಡಿಯುವ ಗೊರವಯ್ಯನವರು ವಿಧಿವಿಧಾನಗಳಿಂದ ಕಠಿಣ ವ್ರತಾಚರಣೆ ಮಾಡಿ, ಭಕ್ತಿ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದಾರೆ. ಲಕ್ಷಾಂತರ ಭಕ್ತರ ನಂಬಿಕೆಗಳಿಗೆ ಧಕ್ಕೆಯಾಗದಂತೆ, ಕಾಣರ್ಿಕ ನುಡಿಯುವ ಗೊರವಯ್ಯನವರಿಗೆ ವಿಶೇಷ ಗೌರವ ಸ್ಥಾನಮಾನಗಳಿರುತ್ತವೆ. ಆದರೆ, ಶ್ರೀಕ್ಷೇತ್ರ ಮೈಲಾರ ದೇವಾಲಯದ ಧರ್ಮದಶರ್ಿ ವೆಂಕಪ್ಪಯ್ಯ ಒಡೆಯರ್ರವರು ಪದೇಪದೇ ಗೊರವಯ್ಯನವರನ್ನು ಬದಲಾಯಿಸುತ್ತಿರುವದರಿಂದ ಭಕ್ತರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಕಾಣರ್ಿಕ ನುಡಿಯುವ ವಂಶಸ್ಥರಾದ ರಾಮಪ್ಪ ಮಲ್ಲಪ್ಪ ಕಾಣರ್ಿಕದರವರು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದಾರೆ.
ಇವರನ್ನೇ ನೇಮಕ ಮಾಡಬೇಕೆಂದು ದೇವಾಲಯದ ಧರ್ಮದಶರ್ಿಗಳಿಗೆ, ತಹಸೀಲ್ದಾರರಿಗೆ, ಉಪವಿಭಾಗಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮೈಲಾರ ಗ್ರಾಮಸ್ಥರು, ಭಕ್ತರುಗಳು ಮನವಿ ಮಾಡಿದ್ದರಿಂದ, ಜಿಲ್ಲಾಧಿಕಾರಿಗಳು ಜನಾಭಿಪ್ರಾಯ ಸಭೆ ನಡೆಸಿ, ಸಭೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಮಪ್ಪನವರ ಪರವಾದ ಒಲವು ವ್ಯಕ್ತವಾಗಿದ್ದರಿಂದ ಉತ್ತಮ ಚಾರಿತ್ರ್ಯವನ್ನು ಹೊಂದಿರುವ ಜನಾನುರಾಗಿಗಳಾಗಿರುವ ರಾಮಪ್ಪ ಮಲ್ಲಪ್ಪ ಕಾಣರ್ಿಕರ ಇವರನ್ನೇ ನೇಮಕ ಮಾಡುವಂತೆ ಆದೇಶ ಹೊರಡಿಸಿರುತ್ತಾರೆ. ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿ, ತಾನು ಹೇಳಿದ್ದೇ ನಡೆಯಬೇಕು ಎಂಬ ಉದ್ದಟತನದಿಂದ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ, ಮೇಲ್ಮನವಿಯನ್ನು ಸಲ್ಲಿಸಿರುತ್ತಾರೆ. ಮೇಲ್ಮನವಿಯನ್ನು ಪುರಸ್ಕರಿಸಿ, ಭಕ್ತರ ಅಭಿಪ್ರಾಯವನ್ನು ಆಲಿಸಿ, ಭಕ್ತರ ನಂಬಿಕೆಗಳಿಗೆ ಧಕ್ಕೆಯುಂಟಾಗದಂತೆ, ಉತ್ತಮ ಚಾರಿತ್ರ್ಯವನ್ನು ಹೊಂದಿರುವ, ವ್ಯಕ್ತಿಯನ್ನು ನೇಮಕ ಮಾಡುವಂತೆ ಆದೇಶ ಹೊರಡಿಸಲಾಗಿದ್ದರೂ ವೆಂಕಪ್ಪಯ್ಯ ಒಡೆಯರ್ರವರು ಭಕ್ತರ ವಿರೋಧದ ನಡುವೆ ತನಗೆ ಇಷ್ಟಬಂದ ಹಾಗೆ ಸವರ್ಾಧಿಕಾರಿಯಾಗಿ ಬೇರೆಯವರನ್ನು ನೇಮಕ ಮಾಡಲು ಮುಂದಾಗಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದೇವರಿಗಿಂತ ದೊಡ್ಡವರು
ಯಾರೂ ಇಲ್ಲ, ಭಕ್ತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಸವರ್ಾಧಿಕಾರಿ ಧೋರಣೆಯನ್ನು ಕೈ ಬಿಟ್ಟು, ಜನರ ಅಭಿಪ್ರಾಯದಂತೆ ರಾಮಪ್ಪ ಮಲ್ಲಪ್ಪ ಕಾಣರ್ಿಕದ ಅವರನ್ನೇ ನೇಮಕ ಮಾಡುವಂತೆ ಹಾಲುಮತ ಮಹಾಸಭಾದದಿಂದ ಒತ್ತಾಯಿಸುತ್ತಿದ್ದೇವೆ. ವಾರದೊಳಗೆ ರಾಮಪ್ಪ ಮಲ್ಲಪ್ಪ ಕಾಣರ್ಿಕದ ಇವರನ್ನು ನೇಮಕ ಮಾಡದೇ ಹೋದರೆ ರಾಜ್ಯಾದ್ಯಂತ ಭಕ್ತರ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ನಾಗರಾಜ ಮೆಣಸಗಿ, ಜಿಲ್ಲಾ ಸಂಚಾಲಕ ಪ್ರಲ್ಹಾದ ಹೊಸಳ್ಳಿ, ಸಂಘಟನಾ ಕಾರ್ಯದಶರ್ಿಗಳಾದ ರಮೇಶ ಹೊನ್ನಿನಾಯ್ಕರ, ಮುತ್ತು ಜಡಿ, ಜಗದೀಶ ಕಣವಿ,ಮಲ್ಲೇಶಪ್ಪ ಕೊಣ್ಣೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.