ಮನೆ ಕಳ್ಳತನ : ಓರ್ವ ಆರೋಪಿ ಬಂಧನ 3.80 ಲಕ್ಷ ರೂ. ಮೌಲ್ಯದ ಆಭರಣ ವಶ

ವಿಜಯಪುರ 08:  ಮನೆ ಕಳ್ಳತನ ಮಾಡಿದ ಓರ್ವ ಆರೋಪಿಯನ್ಮ್ನ ಬಂಧಿಸಿರುವ ವಿಜಯಪ್ಮರ ಪೊಲೀಸರು, ಬಂಧಿತನಿಂದ 3.80 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯಪ್ಮರ ಗಾಂಧಿನಗರ ನಿವಾಸಿ ಮುಖೇಶ ಹಣಮಂತ ವಾಘಮೋರೆ(23) ಎಂಬಾತನೇ ಬಂಧಿತ ಆರೋಪಿ.

ನಗರದ ಸರಾಫ್ ಬಜಾರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿ ಮುಖೇಶನನ್ಮ್ನ ಬಂಧಿಸಿ ಠಾಣೆಗೆ ತಂದು ವಿಚರಣೆಗೊಳಪಡಿಸಿದಾಗ ಆತ ಮನೆಗಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ.

ಆರೋಪಿತನು ವಿಜಯಪುರ ನಗರದ ಅಥಣಿ ರಸ್ತೆಯ ಟೌನ ಪ್ಯಾಲೇಸ್ ಹಿಂದುಗಡೆ ಫಾತಿಮಾ ನಗರ, ಸಂಕೇಶ್ವರ ವಿಲ್ಲಾ ಕಡೆಗೆ ಎರಡು ಮನೆಗಳ  ಬಾಗಿಲ ಕೀಲಿಕೊಂಡಿ ಮುರಿದು 120 ಗ್ರಾಮ ಬಂಗಾರದ ಆಭರಣಗಳು ಮತ್ತು 32ಂ ಗ್ರಾಮ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ ಬಗ್ಗೆ ಹೇಳಿದ್ದು, ಈ ಹಿನ್ನೆಲೆಯಲ್ಲಿ ಅವನಿಂದ 3,80,000 ರೂ ಕಿಮ್ಮತ್ತಿನ ಬಂಗಾರ ಮತ್ತು ಬೆಳ್ಳಿಯ ಆಭರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

      ವಿಜಯಪುರ ನಗರದಲ್ಲಿ ಇತ್ತಿತ್ತಲಾಗಿ ಮನೆ ಕಳ್ಳತನ ವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ  ಕಳ್ಳರ ಪತ್ತೆಗಾಗಿ ಸಿಪಿಐ ವಿಜಯಪುರ ಶಹರ ವೃತ್ತ, ಪಿಎಸ್ಐ ಅಪರಾಧ ವಿಭಾಗ ಗಾಂಧಿಚೌಕ ಠಾಣೆ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತಂಡವು ಆರೋಪಿತರ ತಪಾಸಣೆಯಲ್ಲಿದ್ದಾಗ ಆರೋಪಿ ಮುಖೇಶ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ