ಬೆಳಗಾವಿ: 13:- ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳಸಿಕೊಂಡು ಹೋಗುವುದರ ಜೊತೆಗೆ ಅನೇಕ ವೀರರು ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ ಅದರಲ್ಲಿ ರಾಯಣ್ಣ ಅವರು ಒಬ್ಬರು ಎಂದು ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರು ಹೇಳಿದರು.
ಸಂಗೊಳ್ಳಿ ಗ್ರಾಮದಲ್ಲಿ ಎರಡು ದಿನಗಳ ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು. ಯುವ ಪೀಳಿಗೆಯಲ್ಲಿ ರಾಷ್ಟ್ರಭಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಉತ್ಸವು ಪ್ರೇರಣೆಯಾಗಿ ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ, ಹಾಗೂ ಅವರ ಶೂರತ್ವವನ್ನು ಎಂದು ಅವರು ತಿಳಿಸಿದರು.
ಈಗಾಗಲೇ ಸಂಗೊಳ್ಳಿಯಲ್ಲಿ 150 ಕೋಟಿ ರೂ.ದಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆಗೆ ಚಾಲನೆ ನೀಡಲಾಗಿದೆ.
ಅಲ್ಲದೆ 14ಕೋಟಿ ರೂ.ಗಳಲ್ಲಿ ರಾಕ್ ಗಾರ್ಡನ್ ನಿಮರ್ಾಣ ಹಾಗೂ 70 ಕೋಟಿ ರೂ.ದಲ್ಲಿ ನಂದಗಡದಲ್ಲಿ ಅತ್ಯಾಧುನಿಕ ಟೆಕ್ನಾಲಜಿಯನ್ನು ಉಪಯೋಗಿಸಿ ರಾಯಣ್ಣನ ಇತಿಹಾಸವನ್ನು ತಿಳಿಸಲು
ಪ್ರಾರಂಭ ಮಾಡಿದೆವೆ ಎಂದು ತಿಳಿಸದರು.
ಜಿಲ್ಲಾಧಿಕಾರಿಗಳಾದ ಎಸ್. ಬಿ. ಬೋಮ್ಮನಹಳ್ಳಿ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಕಿತ್ತೂರು ಸಾಮ್ರಾಜ್ಯದ ಕೀತರ್ಿಯನ್ನು ಬೆಳಗಿಸುವಲ್ಲಿ ಸಂಗೊಳ್ಳಿ ರಾಯಣ್ಣ ಅವರು ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಇಂದಿನ ಯುವ ಪೀಳಿಗೆಗಳು ಹಾಗೂ ಮುಂದಿನ ಪೀಳಿಗೆಗೆಗಳು ಅವರ ತ್ಯಾಗ ಬಲಿದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತಿದೆ. ಪ್ರತಿಯೊಂದು ಮನೆಯಲ್ಲಿ ಸಂಗೊಳ್ಳಿ ರಾಯಣ್ಣನಂತಹ ಮಕ್ಕಳು ಹುಟ್ಟಲ್ಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ಸಂಗೊಳ್ಳಿಯ ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಶ್ರೀ.ಷ.ಭ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸುವರು. ಸಕರ್ಾರದ ಮುಖ್ಯ ಸಚೇತಕರಾದ ಗಣೇಶ ಹುಕ್ಕೇರಿ,ಬೈಲಹೊಂಗಲ ತಾಲೂಕಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಶೈಲಾ ಬ. ಶಿದ್ರಾಮಣಿ, ಜಿಲ್ಲಾ ಪಂಚಾಯತ ಸದಸ್ಯರಾದ ಅನಿಲ ಮೇಕಲಮರಡಿ, ತಾಲೂಕು ಪಂಚಾಯತ ಸದಸ್ಯರಾದ ಗೌಸಸಾಬ ಬುಡ್ಡೆಮುಲ್ಲಾ, ಸಂಗೊಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಯಲ್ಲವ್ವ ಹಳೆಮನಿ ಅವರು ಉಪಸ್ಥಿತರಿದ್ದರು.
ಲಕ್ಷ್ಮಣ ಚಿಂಗಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬೈಲಹೊಂಗಲ ಉಪವಿಭಾಗದಿಕಾರಿಗಳಾದ ಎಸ್.ವಾಯ್.ಭಜಂತ್ರಿ ಅವರು ಸ್ವಾಗತಿಸಿದರು.
ಬೈಲಹೊಂಗಲ ತಹಶಿಲ್ದಾರರಾದ ಪ್ರಕಾಶ ಗಾಯಕವಾಡ ಅವರು ವಂದಿಸಿದರು.