ಎಚ್ಎಎಲ್ಗೆ 1ಲಕ್ಷ ಕೋಟಿ ರೂ. ಗುತ್ತಿಗೆ: ನಿರ್ಮಲಾ
ಹೊಸದಿಲ್ಲಿ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಜತೆಗೆ ನಡೆದಿದ್ದ ಒಪ್ಪಂದದ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಬ್ಯಕ್ಷ ರಾಹುಲ್ ಗಾಂ ದೇಶದ ಜನತೆಯ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ನಾಚಿಗೇಡಿನ ಸಂಗತಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಕರ್ಾರ ಎಚ್ಎಎಲ್ಗೆ ಒಂದು ಲಕ್ಷ ಕೋಟಿ ರೂ.ಮೊತ್ತದ ಗುತ್ತಿಗೆ ನೀಡಿರುವ ಬಗ್ಗೆ ರಕ್ಷಣಾ ಸಚಿವರು ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂ ಟ್ವಿಟ್ಟರ್ನಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ಸೀತಾರಾಮನ್, ಕಾಂಗ್ರೆಸ್ ಅಬ್ಯಕ್ಷ ರಾಹುಲ್ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ಅತ್ಯಂತ ನಾಚಿಗೇಡಿನ ಸಂಗತಿ ಎಂದು ತಿರುಗೇಟು ನೀಡಿದ್ದಾರೆ. ತಮ್ಮ ಟ್ವೀಟ್ ಜತೆಗೆ 2014ರಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಎಚ್ಎಎಲ್ಗೆ ನೀಡಿರುವ ಗುತ್ತಿಗೆಯ ವಿವರಣಾತ್ಮಕ ವರದಿಯನ್ನೂ ಪ್ರಕಟಿಸಿದ್ದಾರೆ.
2014 ಮತ್ತು 2018ರ ನಡುವೆ ಎಚ್ಎಎಲ್ 26,570 ಕೋಟಿ ರೂ. ಹಾಗೂ 73,000 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಇದಕ್ಕೆ ಸಾಕ್ಷಿ ಈ ವರದಿ. ಸುಳ್ಳು ಮಾಹಿತಿಗಳನ್ನು ನೀಡುತ್ತಾ ಜನರನ್ನು ದಾರಿ ತಪ್ಪಿಸುತ್ತಿರುವ ರಾಹುಲ್ ಸಂಸತ್ನಲ್ಲಿ ಕ್ಷಮೆಯಾಚಿಸಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಎಚ್ಎಎಲ್ಗೆ ಕೇಂದ್ರ ಸಕರ್ಾರ 1 ಲಕ್ಷ ಕೋಟಿ ರೂ. ಮೊತ್ತದ ಗುತ್ತಿಗೆಯನ್ನು ನೀಡಿದೆ ಎಂದು ಸಂಸತ್ನಲ್ಲಿ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ ತನಗೆ ಒಂದು ಪೈಸೆಯ ಗುತ್ತಿಗೆ ಬಂದಿಲ್ಲ ಎಂದು ಎಚ್ಎಎಲ್ ಹೇಳುತ್ತಿದೆ. ಹೀಗಾಗಿ ಅವರು ತಮ್ಮ ಹೇಳಿಕೆಗೆ ಪೂರಕವಾದ ದಾಖಲೆಗಳನ್ನು ಸಲ್ಲಿಸಲೇಬೇಕು ಇಲ್ಲವೇ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ರಾಹುಲ್ ಭಾನುವಾರ ಟ್ವೀಟ್ ಮಾಡಿದ್ದರು.2 ಪ್ರಶ್ನೆಗಳಿಗೆೆ ಉತ್ತರ ಸಿಕ್ಕಿಲ್ಲ:ರಾಹುಲ್
ಸಂಸತ್ತಿನಲ್ಲಿ 2 ಗಂಟೆಗಳ ಕಾಲ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನಾನು ಕೇಳಿದ್ದ 2 ಸರಳ ಪ್ರಶ್ನೆಗಳಿಗೆ ಉತ್ತರ ನೀಡಲೇ ಇಲ್ಲ ಎಂದು ರಾಹುಲ್ ಗಾಂಯವರು ಟ್ವೀಟ್ ಮಾಡಿದ್ದಾರೆ.
ರಾಫೆಲ್ ಒಪ್ಪಂದ ಕುರಿತು ರಕ್ಷಣಾ ಸಚಿವರು ಸ್ಪಷ್ಟನೆ ನೀಡಿದ್ದರು. ಆದರೆ, ಇಡೀ ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳುತ್ತಿರುವ 2 ಸರಳ ಪ್ರಶ್ನೆಗಳಿಗೆ ಮಾತ್ರ ಅವರು ಉತ್ತರಿಸಲೇ ಇಲ್ಲ ಎಂದು ಹೇಳಿದ್ದಾರೆ
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 