10 ವರ್ಷಗಳಿಂದ ಹದಗೆಟ್ಟ ರಸ್ತೆಗಳಿಗಿಲ್ಲ ಡಾಂಬರಿಕರಣ ಭಾಗ್ಯ ಜನಪ್ರತಿನಿಧಿ, ಅಧಿಕಾರಿಗಳಿಗೆ ಜನರ ಹಿಡಿಶಾಪ : ಹೊಲಗದ್ದೆಗಳಂತಾದ ಪಟ್ಟಣದ ಪ್ರಮುಖ ರ‌್ತಸೆಗಳು

Roads that have deteriorated for 10 years do not have asphalting, people's curse on officials: impo

10 ವರ್ಷಗಳಿಂದ ಹದಗೆಟ್ಟ ರಸ್ತೆಗಳಿಗಿಲ್ಲ ಡಾಂಬರಿಕರಣ ಭಾಗ್ಯ  ಜನಪ್ರತಿನಿಧಿ, ಅಧಿಕಾರಿಗಳಿಗೆ ಜನರ ಹಿಡಿಶಾಪ : ಹೊಲಗದ್ದೆಗಳಂತಾದ ಪಟ್ಟಣದ ಪ್ರಮುಖ ರ‌್ತಸೆಗಳು 

ಸಂಕೇಶ್ವರ 01: ಇದು ಯಾವದಾದರು ಹೊಲಗದ್ದೆಗೆ ಸಾಗುವ ರಸ್ತೆ ಎಂದು ತಪ್ಪಾಗಿ ಭಾವಿಸಬೇಡಿ, ಅಥವಾ ರೈತರ ಜಮೀನು ಗಳಿಗೆ ಹೋಗುವ ಕಾಲುದಾರಿ ಎಂದು ತಿಳಿದಿದ್ದರೆ ನಿಮ್ಮ ತಪ್ಪು ಕಲ್ಪನೆ. ಇದು ಸಂಕೇಶ್ವರ ಪಟ್ಟಣದ ಪ್ರಮುಖ ರಸ್ತೆಗಳ ಅವಸ್ಥೆ ಇದು.   

     ಹೌದು ಓದುಗರೇ.... ಸಂಕೇಶ್ವರ ಪಟ್ಟಣದಲ್ಲಿ ದಿವಂಗತ ಉಮೇಶ ಕತ್ತಿ ಅವರು ಮಂಜೂರು ಮಾಡಿಸಿದ್ದ ಹಳೆ ಪಿಬಿ ರಸ್ತೆ ನಿರ್ಮಾಣ ಕಾರ್ಯವನ್ನು ಹೊರತುಪಡಿಸಿದರೆ ಪಟ್ಟಣದ ಯಾವದೇ ಒಂದು ರಸ್ತೆ ಕೂಡಾ ಕಳೆದ 10 ವರ್ಷಗಳಿಂದ ಡಾಂಬರಿಕರಣ ಕಾಣದೆ ಇರುವದು ದುರ್ಧೈವದ ಸಂಗತಿಯಾಗಿದೆ.   

     ಸಂಕೇಶ್ವರ ಪುರಸಭೆ ವ್ಯಾಪ್ತಿಯ ಯಾವದೇ ಒಂದು ರಸ್ತೆಗೆ ಡಾಂಬರಿಕರಣ ಭಾಗ್ಯ ದೊರೆಯದೆ ವಾಹನ ಸವಾರರು ನರಕ ಅನುಭವಿಸುತ್ತಿರುವದು ಒಂದು ಕಡೆಗೆಯಾದರೆ ಇನ್ನೊಂದು ಕಡೆಗೆ ವಾಹನಗಳ ಸಂಚಾರದಿಂದ ರಸ್ತೆಗಳಲ್ಲಿ ಧೂಳು ಆವರಿಸಿ ಜನರು ಮೂಗು ಬಾಯಿ ಮುಚ್ವಿಕೊಂಡು ಸಾಗುತ್ತ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.   

    ಪುರಸಭೆಯ ಅಧಿಕಾರಿಗಳು ಹದಗೆಟ್ಟಿರುವ ಸಂಕೇಶ್ವರ ರಸ್ತೆಗಳಿಗೂ ಹಾಗೂ ತಮಗು ಯಾವದೇ ರೀತಿಯ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವದು ಇಲ್ಲಿನ ನಾಗರಿಕರ ಆಕ್ರೋಶಕ್ಕೆ ಗುರಿಯಾಗಿದೆ. ಗ್ರಾಮೀಣ ಭಾಗದಲ್ಲಿನ ರೈತರ ಜಮೀನುಗಳಿಗೆ ಹೋಗುವ ರಸ್ತೆಗಳು ಕೂಡಾ ಡಾಂಬರಿಕರಣ ಗಳಿಂದ ಕಂಗೊಳಿಸುತ್ತಿದ್ದರು ತಾಲೂಕಾ ಮಟ್ಟದ ಸ್ಥಾನ ಪಡೆದಿರುವ ಸಂಕೇಶ್ವರ ಪಟ್ಟಣದ ರಸ್ತೆಗಳು ಮಾತ್ರ ಕಳೆದ 10 ವರ್ಷಗಳಿಂದ ಡಾಂಬರಿಕರಣ ಭಾಗ್ಯ ಕಂಡಿಲ್ಲ.   

     ಮನೆಗಳ ಹಾಗೂ ಅಂಗಡಿಗಳ ತೆರಿಗೆ ವಸೂಲಿಗೆ ಮುತುವರ್ಜಿ ವಹಿಸುವ ಪುರಸಭೆ ಅಧಿಕಾರಿಗಳು ಮಾತ್ರ ರಸ್ತೆ ನಿರ್ಮಾಣಕ್ಕೆ ಕವಡೆಕಾಶಿನ ಕಿಮ್ಮತ್ತು ನೀಡುತಿಲ್ಲ ಎನ್ನುವದು ದುರಂತ ಎನ್ನಲಾಗುತ್ತಿದೆ.   

ಬಾಕ್ಸ್‌ :  

ವಿಶೇಷ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ : ಮುಖ್ಯಾಧಿಕಾರಿ ಮಠದ  

ಸಂಕೇಶ್ವರ ಪಟ್ಟಣದ ರಸ್ತೆ ನಿರ್ಮಾಣ ಸೇರಿದಂತೆ ಕೆಲ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ವಿಶೇಷ ಅನುದಾನ ನೀಡುವಂತೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವಣೆ ಕಳಹಿಸಿಕೊಡಲಾಗಿದೆ. ಅನುದಾನ ಮಂಜೂರಾದ ತಕ್ಷಣ ರಸ್ತೆ ಸೇರಿ ಪಟ್ಟಣದ ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎಂದು ಮುಖ್ಯಾಧಿಕಾರಿ ಪ್ರಕಾಶ ಮಠದ ಅವರು ತಿಳಿಸಿದ್ದಾರೆ.