ಧಾರವಾಡ 21: ಕೇಂದ್ರ ಸಕರ್ಾರದ ವಿಶೇಷ ಅನುದಾನದಲ್ಲಿ ನಿಮರ್ಾಣಗೊಳ್ಳುತ್ತಿರುವ ಜುಬ್ಲಿವೃತ್ತದಿಂದ ನರೇಂದ್ರ ಬೈಪಾಸ್ವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಡಿಸೆಂಬರ್-19ರೊಳಗೆ ಪೂರ್ಣಗೊಳ್ಳಲಿದ್ದು, ಅವಳಿ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ರೂ.300ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮುಂದಿನ ವಾರದಿಂದ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಂದು ಸಂಜೆ ಜಿಲ್ಲಾ ಪಂಚಾಯತ ವಿಡಿಯೋ ಕಾನ್ಫರೆನ್ಸ್ ಹಾಲ್ದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ, ಅವರು ಮಾತನಾಡಿದರು.
ಜುಬ್ಲಿವೃತ್ತದಿಂದ ನರೇಂದ್ರ ಬೈಪಾಸ್ವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗೆ 7109.48 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿತ್ತು. ಅದರಲ್ಲಿ 5227.00ಲಕ್ಷ ರೂ. ಗಳಿಗೆ ಟೆಂಡರ್ ಆಗಿ ಮುಕ್ತಾಯ ಹಂತಕ್ಕೆ ಬಂದಿದೆ. ಉಳಿದ ಸುಮಾರು 2 ಕಿ.ಮೀ ರಸ್ತೆ ಕಾಮಗಾರಿ ಡಿಸೆಂಬರದೊಳಗೆ ಮುಗಿಯಲಿದೆ. ಕೆಬಲ್, ಪೂಲ್ ಶಿಪ್ಟಿಂಗ್ನಿಂದಾಗಿ ಕಾಮಗಾರಿ ಸ್ವಲ್ಪ ತಡವಾಗಿದೆ. ಎಸ್ಪಿ ಕಚೇರಿ, ಡಿಮ್ಹಾನ್ಸ್ ಸೇರಿದಂತೆ ಕೆಲವು ಸಕರ್ಾರಿ ಕಟ್ಟಡಗಳ ಆವರಣಗೋಡೆ ಸ್ಥಳಾಂತರವಾಗಬೇಕಿದೆ. ಇಂದಿನ ಸಭೆಯಲ್ಲಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಈ ಕುರಿತು ಶೀಘ್ರ ಕ್ರಮ ಜರುಗಿಸುವಂತೆ ನಿದರ್ೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ಅವಳಿ ನಗರದ ಪ್ರಮುಖ ನಾಲ್ಕೈದು ರಸ್ತೆಗಳ ಅಭಿವೃದ್ಧಿಗಾಗಿ ಸಿಆರ್ಎಫ್ ನಿಧಿಯಿಂದ 300 ಕೋಟಿ ರೂ. ಬಿಡುಗಡೆಯಾಗಿದೆ. ಎಲ್ಓಇ (ಲೇಟರ್ ಆಪ್ ಎಕ್ಸಪೆಟ್ನ್ಸ್) ವಿತರಿಸಲಾಗಿದೆ. ಮುಂದಿನ ವಾರದಿಂದ ಕಾಮಗಾರಿಗಳ ಭೂಮಿ ಪೂಜೆ ನೆರವೇರಸಿ, ಕಾಯರ್ಾರಂಭ ಮಾಡಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವತರ್ಿಕಾ ಕಟಿಯಾರ್, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ, ಉಪ ಪೊಲೀಸ್ ಆಯುಕ್ತ ಡಾ: ಶಿವಕುಮಾರ ಗುಣಾರೆ, ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅಭಿಯಂತರರು ಉಪಸ್ಥಿತರಿದ್ದರು.