ನರೇಗಲ್‌-ತವರಮೆಳ್ಳಿಹಳ್ಳಿ ರಸ್ತೆಯಿಂದ ಗೌಸ್ ಪಾಟೀಲ ಅವರ ಮನೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ

Road construction work started from Naregal-Tavaramellihalli road to Gaus Patila's house

ನರೇಗಲ್‌-ತವರಮೆಳ್ಳಿಹಳ್ಳಿ ರಸ್ತೆಯಿಂದ ಗೌಸ್ ಪಾಟೀಲ ಅವರ ಮನೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ 

ಹಾನಗಲ್ 06 :ತಾಲೂಕಿನ ಹರವಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಕಾರ್ಯಕ್ರಮದಡಿ 40 ಲಕ್ಷ ರೂ.ವೆಚ್ಚದಲ್ಲಿ ಸಿಸಿರಸ್ತೆ ಹಾಗೂ ಪಕ್ಕಾ ಗಟಾರ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. 

         20 ಲಕ್ಷ ರೂ.ವೆಚ್ಚದಲ್ಲಿ ಗ್ರಾಮದ ನರೇಗಲ್‌-ತವರಮೆಳ್ಳಿಹಳ್ಳಿ ರಸ್ತೆಯಿಂದ ಮಸೀದಿವರೆಗೆ ಸಿಸಿರಸ್ತೆ ಹಾಗೂ ಪಕ್ಕಾ ಗಟಾರ ಮತ್ತು 20 ಲಕ್ಷ ರೂ. ವೆಚ್ಚದಲ್ಲಿ ನರೇಗಲ್‌-ತವರಮೆಳ್ಳಿಹಳ್ಳಿ ರಸ್ತೆಯಿಂದ ಗೌಸ್ ಪಾಟೀಲ ಅವರ ಮನೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಮಾನೆ, ಹಂತ, ಹಂತವಾಗಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.ಇದೀಗ 2ನೇ ಹಂತದಲ್ಲಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವಲ್ಲಿ ಗಮನ ಹರಿಸಲಾಗಿದೆ ಎಂದು ತಿಳಿಸಿದರು.  ಗ್ರಾಪಂ ಸದಸ್ಯ ಬಸವರಾಜಪ್ಪ ಭದ್ರಣ್ಣವರ, ಮುಖಂಡರಾದ ಗನಿ ಪಟೇಲ, ಪುಟ್ಟವ್ವ ತಳವಾರ, ಶಂಭುಲಿಂಗ ಭದ್ರಣ್ಣನವರ, ಶೇಕಪ್ಪ ಬಾಣದ, ಸುರೇಶ ಎರೇಶಿಮಿ, ಬಸನಗೌಡ ಪಾಟೀಲ, ಬಸವರಾಜ ಹೊಸಮನಿ, ಮಹೇಶ ಭದ್ರಣ್ಣನವರ, ವೀರಸಂಗಪ್ಪ ಬಾಣದ, ಸಂಗಪ್ಪ ತಳವಾರ, ರಮೇಶ ಎರೇಶಿಮಿ, ಬಸವಣ್ಣೆಪ್ಪ ಹರಿಜನ, ಮಲ್ಲಿಕಾರ್ಜುನಪ್ಪ ಎರೇಶಿಮಿ, ತಿರಕಪ್ಪ ತಳವಾರ, ಶೇಕಪ್ಪ ಹರಿಜನ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.