ಲೋಕದರ್ಶನ ವರದಿ
ವಿಜಯಪುರ 17: ನಗರದ ಸಿಕ್ಯಾಬ್ ಮಹಾವಿದ್ಯಾಲಯದ ವತಿಯಿಂದ ವಿಜಯಪುರದಲ್ಲಿ ಹಮ್ಮಿಕೊಳ್ಳಲಾದ 'ಟ್ರಾಫಿಕ್ ಸವರ್ೆ ಒಂದು ದಿನದ ವಾಹನ ಗಣತಿ ಮತ್ತು ಪಾದಚಾರಿಗಳ ಸುರಕ್ಷಾ ವ್ಯವಸ್ಥೆಗಳ ಪರಿಶೀಲನೆ ಯಶಸ್ವಿಯಾಗಿ ಜರುಗಿಸಲಾಯಿತು.
ಈ ಗಣತಿಯ ನೇತೃತ್ವ ವಹಿಸಿದ್ದ ಪ್ರೋ ನೂರುದ್ದೀನ್ ಜಂಗಿ ಆಧುನಿಕತೆ ಬೆಳೆದಂತೆ ವಾಹನಗಳ ಸಂಖ್ಯೆ ಅತ್ಯಂತ ಹೆಚ್ಚಳವಾಗುತ್ತಿವೆ. ಯುವಜನಾಂಗವಂತೂ ವಾಹನಗಳಿಲ್ಲದೆ ಸಂಚರಿಸದಂತಾಗಿದೆ. ವಿದ್ಯಾಥರ್ಿಗಳು ವಿಶೇಷವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವುದನ್ನು ಅಳವಡಿಸಿಕೊಳ್ಳಬೇಕು. ವಿದ್ಯಾಥರ್ೀಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಗಣತಿಯ ಮೂಲ ಉದ್ದೇಶವಾಗಿದೆ. ವಿಜಯಪುರ ನಗರದ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ರಸ್ತೆ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು.
ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಚ್. ಕೋಲ್ಹಾರ್ ಮಾತನಾಡಿ, ವಿದ್ಯಾಥರ್ಿಗಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ನಮ್ಮ ಸಂಸ್ಥೆಯ ಈ ಗಣತಿ ಮತ್ತು ಸುರಕ್ಷಾ ಅಭಿಯಾನದಲ್ಲಿ 140 ಕ್ಕೂ ಹೆಚ್ಚು 3ನೇ ವರ್ಷದ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ವಾಹನ ಗಣತಿ ಮಾಡುವುದರ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು, ಉಪನ್ಯಾಸಕರು ಸಾರ್ವಜನಿಕರು ಪಾಲ್ಗೊಂಡಿದ್ದರು.
ಈ ಗಣತಿಯನ್ನು ಯಶಸ್ವಿಯಾಗಿ ಸಂಘಟಿಸಲು ಸಹಾಯ ಮಾಡಿದ ಸಂಸ್ಥೆಯ ಸ್ಥಾಪಕರಾದ ಶ್ರೀ. ಎಸ್.ಎ. ಪುಣೇಕರ್, ನಿದರ್ೆಶಕರಾದ ಶ್ರೀ.ಸಲಾವುದ್ದೀನ್ ಎಸ್. ಪುಣೇಕರ್ ಹಾಗೂ ವಲಯದ ಸರ್ಕಲ್ ಇನ್ಸಪೆಕ್ಟಸರ್್ ಮತ್ತು ಸಬ್ ಇನ್ಸಪೆಕ್ಟರ್ ಇವರಿಗೆ ವಿಭಾಗದ ಮುಖ್ಯಸ್ಥರಾದ ಪ್ರೋ.ಎಂ.ಎಚ್. ಕೋಲ್ಹಾರ್ ಅಭಿನಂದಿಸಿದ್ದಾರೆ.