ಲೋಕದರ್ಶನವರದಿ
ಶಿಗ್ಗಾವಿ22 : ದೇಶದ ಮೂಲ ಸಂಸ್ಕೃತಿ ಉಳಿಯಬೇಕು, ವಿದ್ಯೆ, ವಿನಯ, ಸ್ವಾಭಿಮಾನ, ನಿಭರ್ಿತಿ ಇವುಗಳನ್ನ ಒಳಗೊಂಡಂತೆ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಬೇಕು ಎಂದು ಗಂಜೀಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
ಶುಕ್ರವಾರ ತಾಲೂಕಿನ ಗಂಜೀಗಟ್ಟಿ ಚರಂತಪ್ಪಜ್ಜನ ಮಠದಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಕನರ್ಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರ ಹಾಗೂ ಕಿತ್ತೂರಾಣಿ ಚನ್ನಮ್ಮ ವಸತಿ ಶಾಲೆ ಶಿಗ್ಗಾವಿಯ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಸಾನಿದ್ಯವಹಿಸಿ ಮಾತನಾಡಿದ ಶ್ರೀಗಳು, ವಿದ್ಯೆ ಗುಪ್ತ ನಿಧಿಯಿದ್ದಂತೆ ಅದನ್ನು ಬೇಧಿಸಿ ಪಡೆಯಬೇಕು, ವಿದ್ಯೆ ಎಂಬ ಸಂಪತ್ತನ್ನ ಯಾರೂ ಹಾಳು ಮಾಡಲಾಗುವುದಿಲ್ಲ ಇಂದಿನ ವಿದ್ಯಾಥರ್ಿಗಳು ಸರಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ನಿಭರ್ಿತಿಯಿಂದ, ಸ್ವಾಭಿಮಾನದಿಂದ ಜೀವಿಸುವುದನ್ನು ಕಲಿಯಬೇಕು, ಶಿಕ್ಷಕರು ಶಿಕ್ಷಣ ಕೊಟ್ಟರೆ ಮಕ್ಕಳ ಪಾಲಕರು ಅವರ ಜವಾಬ್ದಾರಿಯನ್ನು ತಿಳಿಯುವ ಸಂಸ್ಕೃತಿಯನ್ನು ಕಲಿಸಬೇಕು.
ಬ್ಯಾಡಗಿಯ ಪುರಸಭೆ ಮುಖ್ಯಾಧಿಕಾರಿ ವಿ ಎಮ್ ಪೂಜಾರ ಮುಖ್ಯ ಅಥಿತಿಯಾಗಿ ಮಾತನಾಡಿ ಅವಕಾಶಗಳು ಬಂದಾಗ ವಿದ್ಯಾಥರ್ಿಗಳು ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು, ಪೋಷಕರ ಖಾಳಜಿ ವಿದ್ಯಾಥರ್ಿಗಳಿಗೆ ಪೂರಕವಾಗಿರಬೇಕೇ ವಿನಹ ಮಾರಕವಾಗರಬಾರದು, ಎಲ್ಲಿ ಪ್ರಯತ್ನ ಕಡಿಮೆ ಇರುತ್ತದೆಯೋ ಅಲ್ಲಿ ಶ್ರೇಯಸ್ಸು ಇರುವುದಿಲ್ಲ ಮಕ್ಕಳು ಶಾಲೆ, ಶಿಕ್ಷಕ, ಪಾಲಕರಿಗೆ ಕೀತರ್ಿ ತರುವ ಕೆಲಸಗಳನ್ನು ಮಾಡಬೇಕು, ನಮ್ಮ ಭವಿಷ್ಯ ಅದರ ಫಲಿತಾಂಶ ನಮ್ಮ ಕೈಲಿದೆ, ಗುರಿ ಮತ್ತು ಛಲ ಇದ್ದವರು ಮೇಲೆ ಬರುತ್ತಾರೆ ಮಕ್ಕಳಿ ಟಿ ವಿ ಮತ್ತು ಮೋಬೈಲ್ಗಳಿಂದ ದೂರ ಇದ್ದು ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಉದ್ದಿಮೆಗಳಾದ ಉಮೇಶ ಗೌಳಿ, ರಾಜೇಶ ಹಾಗೂ ಹಿರಿಯರಾದ ಬಸನಗೌಡ ಪಾಟೀಲ ಮಾತನಾಡಿದರು.
ಶಿಕ್ಷಕ ಪರಶುರಾಮ ಹಿರೂಲಾಲ್ ಪ್ರಾಸ್ಥಾವಿಕವಾಗಿ ಮಾತನಾಡಿದರು, ಮುಖ್ಯೋಪಾದ್ಯಾಯಿನಿ ಸುಮಂಗಲಾ ದುರ್ಗದ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು, ಗುತ್ತಿಗೆದಾರ ನಾಗರಾಜ ಕುರುಬರ, ಪತ್ರಕರ್ತರಾದ ವಿಶ್ವನಾಥ ಬಂಡಿವಡ್ಡರ, ಬಸವರಾಜ ವೀ ಹಡಪದ, ಕ್ರೀಡಾ ಸಾಧಕರಾದ ಶಂಕರ್ ಧಾರವಾಡ, ರಮೇಶ ಇಂಗಳಗಿ, ವಿಜಯಕುಮಾರ, ಮಾರುತಿ, ಶಾಲೆಯ ಶಿಕ್ಷಕರಾದ ಎಸ್ ಎಸ್ ಹೆಬ್ಬಳ್ಳಿ, ಕವಿತಾ ಗೊಟಗೋಡಿ, ರಾಜೇಶ ದುಂಡಪ್ಪನವರ, ಪ್ರಿಯಾಂಕಾ ವಾಯ್, ಕೆ ಸಿ ತಿಪ್ಪನಾಯ್ಕರ್, ವಿದ್ಯಾಥರ್ಿ ಪ್ರತಿನಿಧಿ ರೇವತಿ ಗುಂಡಣ್ಣವರ ಸೇರಿದಂತೆ ಶಾಲೆಯ ವಿದ್ಯಾಥರ್ಿಗಳು ಮತ್ತು ಪಾಲಕರು ಹಾಜರಿದ್ದರು, ಶಿಕ್ಷಕ ಸಂತೋಷ ಕುಮಾರ ಸ್ವಾಗತಿಸಿ ವಂದಿಸಿದರು.