ಬಾಗಲಕೋಟೆ: ನವನಗರದಲ್ಲಿ ಸ್ಲಂ ಬೋರ್ಡದಿಂದ ನಿರ್ಮಾಣವಾಗಿರುವ ಕಾಲೋನಿ ಹಾಗೂ ಆಶ್ರಯ ಕಾಲೋನಿಗಳಲ್ಲಿ ಇರುವ ಸಮಸ್ಯೆಗಳನ್ನು ಜನರಿಂದ ಆಲಿಸಿ ಖುದ್ದು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕಾಲೋನಿಗಳಲ್ಲಿ ಇರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರಾದ ವೀರಣ್ಣ ಚರಂತಿಮಠ ಸೂಚಿಸಿದರು.
ಬುಧವಾರ ನವನಗರದ ಸ್ಲಂ ಬೋಡರ್್ದಿಂದ ನಿಮ೯ಣವಾಗಿರುವ ಕಾಲೋನಿ,ಆಶ್ರಯ ಕಾಲೋನಿ,ಹುಡ್ಕೋ ಕಾಲೋನಿಗಳಿಗೆ ಭೇಟಿ ನೀಡಿದ ಶಾಸಕರು ಅಲ್ಲಿಯ ಜನರಿಂದ ಸಮಸ್ಯೆಗಳನ್ನು ಆಲಿಸಿದರು. ನಂತರ ಕಾಲೋನಿಗಳಲ್ಲಿ ಪ್ರದಕ್ಷಿಣೆ ಹಾಕಿದ ಶಾಸಕರು ಅಲ್ಲಿಯ ಸ್ವಚ್ಛತೆ ಇಲ್ಲದ್ದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಸ್ಥಳೀಯರು ಕೂಡ ಶಿಸ್ತಿನಿಂದ ಇರಬೇಕು.ಸ್ವಚ್ಛತೆಗೆ ಹೆಚ್ಚು ಆಧ್ಯತೆ ನೀಡಬೇಕು.ಸಕರ್ಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಿಕೊಳ್ಳಬಾರದು.ಇದರಿಂದ ನಿಮಗೆ ಸಕರ್ಾರದ ಸೌಲಭ್ಯಗಳು ಸಿಗುವುದಿಲ್ಲ.ನಿಮ್ಮ ಜಾಗದಲ್ಲಿ ಕಟ್ಟಿಕೊಂಡರೆ ಸಕರ್ಾರದಿಂದ ಮನೆ ಕಟ್ಟಿಕೊಳ್ಳಲು ನೆರವು ಸಿಗಲಿದೆ ಎಂದು ಕಾಲೋನಿಯ ಜನರಿಗೆ ತಿಳಿಸಿದರು.
ಸ್ಲಂ ಬೋಡರ್್ದಿಂದ ಸುಮಾರು 200ಕ್ಕೂ ಹೆಚ್ಚು ಮನೆಗಳು ನಿರ್ಮಾಣ ವಾಗಿವೆ.ಆದರೆ ಇಲ್ಲಿ ಮುಳ್ಳಿನ ಕಂಟೆಗಳು ಅಲ್ಲಲ್ಲಿ ಬೆಳೆದ್ದಿದ್ದು ಇದರಲ್ಲಿ ಜನರು ಯಾವ ರೀತಿ ಸಂಚಾರ ಮಾಡಬೇಕು.ಈ ಸ್ಥಳಕ್ಕೆ ಸ್ಲಂ ಬೋರ್ಡ್ ಅಧಿಕಾರಿಗಳು ಆಗಾಗ ಭೇಟಿ ನೀಡಿದರೆ ಇಲ್ಲಿ ಸ್ವಚ್ಛತೆ ಕಾಣುತ್ತದೆ ಆ ಕೆಲಸವನ್ನು ನೀವು ಮಾಡುತ್ತಿಲ್ಲ ಎಂದು ಸ್ಲಂ ಬೋರ್ಡ್ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು.
ಆಶ್ರಯ ಮತ್ತು ಹುಡ್ಕೋ ಕಾಲೋನಿಗಳಲ್ಲಿ ನೀರಿನ ಸಮಸ್ಯೆ ಕಂಡುಬಂದರೆ ಬೋರವೆಲ್ ಕೊರೆಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.ಇನ್ನೂ ಕಾಲೋನಿಗಳಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಶೀಘ್ರ ದುರಸ್ತಿ ಮಾಡಬೇಕು.ಯಾವ ಕಡೆ ಸರಿಯಾದ ರಸ್ತೆ ಆಗಿಲ್ಲ ಅಲ್ಲಿ ಡಾಂಬರೀಕರಣ ರಸ್ತೆ ಮಾಡಿ ಎಂದು ಬಿಟಿಡಿಎ ಮತ್ತು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಆಶ್ರಯ ಮತ್ತು ಹುಡ್ಕೋ ಕಾಲೋನಿಗಳಲ್ಲಿ ಕೆಲವೊಂದು ಕಡೆ ವಿದ್ಯುತ್ ಟಿಸಿ ಸಮಸ್ಯೆ ಇದ್ದು ಅದನ್ನು ಶೀಘ್ರ ಸರಿಪಡಿಸಿ ಎಂದು ಕೆಇಬಿ ಅಧಿಕಾರಿಗಳಿಗೆ ತಿಳಿಸಿದರು.
ಅಲ್ಪಸಂಖ್ಯಾತರ ಇಲಾಖೆಯ ಮೇಲಿನಮನಿ,ನಗರಸಭೆಯ ಎಇ ನಾಯಕ, ಖಾಜಿ,ಸ್ಲಂ ಬೋರ್ಡನ ಚವ್ಹಾಣ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.