ಪಟ್ಟಣದ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ ಹಮ್ಮಿಕೊಂಡ ರೇವಣಸಿದ್ದೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ
ಸಿಂದಗಿ 21: ಗುರುವಿನ ಗುಲಾಮನಾಗುವುತನಕ ದೊರೆದಣ್ಣ ಮುಕ್ತಿ ಎನ್ನುವಂತೆ ಗುರುಗಳ ಸೇವೆ ಎಷ್ಟು ಮಾಡುತ್ತಿರಿ ಅಷ್ಟು ಜೀವನ ಪ್ರಾಪ್ತಿಯಾಗುತ್ತದೆ ಮಠ-ಮಾನ್ಯಗಳು ಊರಿನ ಹೊರಗೆ ಪ್ರಶಾಂತ ಸ್ಥಳದಲ್ಲಿದ್ದು ಶ್ರೀಗಳಿಗೆ ಜಪ-ತಪ ಯೋಗಾಬ್ಯಾಸಗಳನ್ನು ಮಾಡುವ ಮೂಲಕ ಜನರ ಕಷ್ಠ ಕಾರ್ಪಣಯಗಳಿಗೆ ಸ್ಪಂದಿಸುವ ಶ್ರೀಮಠವು ಬಡವರ ಮಠವಾಗಿದ್ದು ಮಾನವ ಜನ್ಮದ ಉದ್ಧಾರಕ್ಕೆ ಅನೇಕ ಮಹಾಪುರಷ ಪುರಾಣ ಪ್ರವಚನಗಳನ್ನು ಹಾಕಿಕೊಳ್ಳುತ್ತಿದು ಮಾನವ ಆದ್ಯಾತ್ಮಿಕ ಜ್ಞಾನವನ್ನು ಪಡೆದುಕೊಂಡು ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕು. ಎಂದು ಮನಗೂಳಿಯ ಹಿರೇಮಠದ ಪೂಜ್ಯಶ್ರೀ ಸಂಗನಬಸವ ಶ್ರೀಗಳು ಹೇಳಿದರು. ಪಟ್ಟಣದ ಬಸ್‌ಡಿಪೋ ಹತ್ತಿರದಲ್ಲಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ಆವರಣದಲ್ಲಿ ಹಮ್ಮಿಕೊಂಡ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 29ನೆಯ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡ ಶ್ರೀ ರೇವಣಸಿದ್ದೇಶ್ವರ ಪುರಾಣ ಪ್ರವಚನ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ. ಮನುಷ್ಯನಿಗೆ ಆಕ್ಸಿಜನ್ ನೀಡುವ ಗೀಡ-ಮರಗಳನ್ನು ಮನೆ ಕಟ್ಟುವ ಮುನ್ನವೇ ಹಚ್ಚಿ ನೈಸರ್ಗಿಕವಾದ ಗಾಳಿ ಪಡೆದುಕೊಂಡು ಆಯುಷ್ಯ ವೃದ್ಧಿಪಡಿಸಿಕೊಳ್ಳಬೇಕು ಎಂದರು. ಆದಿಶೇಷ ಶ್ರೀಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಜ.22 ರಂದು ಶ್ರೀಮಠದ ಸುತ್ತಮುತ್ತ ಆಧಿಶೇಷರ ಮೇರವಣಿಗೆ ಬರುತ್ತಿದ್ದು ಎಲ್ಲ ತಾಯಂದಿರು ಮನೆ ಮುಂದೆ ಅಲಂಕಾರ ಮಾಡುವ ಮೂಲಕ ಸ್ವಚ್ಚತೆ ಕಾಪಾಡಿ ಪ್ರತಿ ಮನೆಯ ನೀರು ಹೂವು ಹಣ್ಣು ಕಾಯಿ ಹಿಡಿದುಕೊಂಡು ಸ್ವಾಗತಿಸಿಕೊಂಡು ತಮ್ಮ ಜೀವನ ಪಾವನಗೊಳೀಸಿಕೊಳ್ಳಬೇಕು ಮತ್ತು ಜ.23 ರಂದು ನಾಲವಾರ ಶ್ರೀಮಠದ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳ 54ನೇ ಅನುಷ್ಠಾನ ಸುವರ್ಣ ಮಹೋತ್ವ ಹಾಗೂ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಶಿರ್ವಾದ ಪಡೆಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು. ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಜ್ಞಾನವನ್ನು ನೀಡಿದರೆ ಮಠ-ಮಂದಿರಗಳಲ್ಲಿ ಸಂಸ್ಕಾರದ ಜೊತೆಗೆ ಆಧ್ಯಾತ್ಮ ದೊರೆಯುತ್ತದೆ ಕಾರಣ ತಾಯಂದಿರು ಮಕ್ಕಳನ್ನು ಪುರಾಣ ಪುಣ್ಯಕತೆಗಳಲ್ಲಿ ತೊಡಗಿಸಬೇಕು ಇದರಿಂದ ಆದ್ಯಾತ್ಮೀಕ ಚಿಂತನೆ ಬೆಳೆಯುತ್ತದೆ ಅಲ್ಲದೆ ನಿತ್ಯ ಕೇಳುವ ಪುರಾಣದ ತುಣುಕುಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದಕ್ಕೂ ಸ್ವಾರ್ಥಕವಾಗುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು. ದಿವ್ಯ ಸಾನಿಧ್ಯ ವಹಿಸಿದ ನಾಲವಾರ ಶ್ರೀಮಠದ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು, ಬಾಜಪ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಪೂಜಾರ, ಅಶೋಕ ಕಮರಡ್ಡಿ, ದುಂಡಪ್ಪಗೌಡ ಆನಗೊಂಡ, ಪ್ರವಚನಕಾರ ಮೈಂದರಗಿ ಗುರುಹಿರೇಮಠದ ಷ.ಬ್ರ ಅಭಿನವ ರೇವಣಸಿದ್ದ ಗುರುಗಳು, ಸಂಗೀತಗಾರ ಶಾಂತಲಿಂಗ ಹೊನ್ನಕಿರಣಗಿ, ತಬಲಾ ಆಕಾಶ ಹೈದ್ರಾ, ಸೇರಿದಂತೆ ಶ್ರೀಮಠದ ಭಕ್ತರು ಇದ್ದರು. ಪೂಜಾ ಹಿರೇಮಠ ನಿರೂಪಿಸಿದರು. ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು.