ಲೋಕದರ್ಶನ ವರದಿ
ಬೆಳಗಾವಿ 09: ಮನುಷ್ಯನ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಜೀವನದಲ್ಲಿ ಸಂಯಮ ಧಾರಣೆ ಮಾಡುವುದು ಅಗತ್ಯವಾಗಿದೆ ಎಂದು ಆಚಾರ್ಯ ವರ್ಧಮಾನ ಸಾಗರ ಮುನಿಗಳು ಇಂದಿಲ್ಲಿ ಹೇಳಿದರು.
ದಿ.8ರರಂದು ಸಾಯಂಕಾಲ ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಚಾರಿತ್ರ್ಯ ಚಕ್ರವತರ್ಿ ಆಚಾರ್ಯ ಶಾಂತಿಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ ವತಿಯಿಂದ ಆಯೋಜಿಸಲಾದ ಮುನಿ ದೀಕ್ಷಾ ದಿನ ನಿಮಿತ್ಯ ಆಯೋಜಿಸಲಾಗಿದ್ದ ಶಾಂತಿಸಾಗರ ವಿಧಾನ ಸಾನಿಧ್ಯ ವಹಿಸಿ ಆಶರ್ೀವಚನ ನೀಡಿದರು.
ಆಚಾರ್ಯ ಶಾಂತಿಸಾಗರರು ತಮ್ಮ ಇಡಿ ಜೀವನದಲ್ಲಿ ಸಂಯಮ ಧಾರಣೆ ಮಾಡಿದ್ದರಿಂದ ಅವರು ತಮ್ಮ ಜೀನವದಲ್ಲಿ ಅನೇಕ ಸಾಧನೆಯನ್ನು ಮಾಡಿದರು. 20ನೇ ಶತಮಾನದಲ್ಲಿ ಜೈನ ಧರ್ಮದ ದಿಗಂಬರ ಮುನಿ ಪರಂಪರೆಯು ಅವನತಿ ದಾರಿಯಲ್ಲಿದ್ದಾಗ ದಿಗಂಬರ ಪರಂಪರೆ ಲುಪ್ತವಾಗುವ ಸಂದರ್ಭದಲ್ಲಿ ಆಚಾರ್ಯ ಶಾಂತಿಸಾಗರ ಮುನಿಗಳು ಜೈನ ದಿಗಂಬರ ಮುನಿ ಧರ್ಮವನ್ನು ರಕ್ಷಿಸಿದ ಕೀತರ್ಿ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಆಚಾರ್ಯ ಶಾಂತಿಸಾಗರರು ತಮ್ಮ ಇಡಿ ಜೀವನವನ್ನು ಜೈನ ಧರ್ಮ ಮತ್ತು ಜೈನ ಸಂಸ್ಕೃತಿಯನ್ನು ಕಾಪಾಡುವಲ್ಲಿ ನಿರತರಾಗಿದ್ದರು. ಅಂದು ಮಾಡಿದ ತ್ಯಾಗದ ಫಲವಾಗಿ ಇಂದು ಭಾರತದೆಲ್ಲೆಡೆ ದಿಗಂಬರ ಪರಂಪರೆಯನ್ನು ನಾವು ಕಾಣುತ್ತೇವೆ. ಆಚಾರ್ಯ ಶಾಂತಿಸಾಗರರ ಜೀವನ ಇತಿಹಾಸವನ್ನು ತಿಳಿದುಕೊಂಡು ಅವರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲ ನಡೆಯಬೇಕಾಗಿದೆ ಎಂದು ಶ್ರೀಗಳು ತಿಳಿಸಿದರು.
ಶಾಂತಿಸಾಗರ ವಿಧಾನ ಕಾರ್ಯಕ್ರಮವನ್ನು ಮಾಣಿಕಬಾಗ ದಿಗಂಬರ ಜೈನ ಬೋಡರ್ಿಂಗ ಅಧ್ಯಕ್ಷ ಕೀತರ್ಿಕುಮಾರ ಕಾಗವಾಡ, ಟ್ರಸ್ಟಿ ಅಶೋಕ ಜೈನ, ಭರತೇಶ ಶೀಕ್ಷಣ ಸಂಸ್ಥೆಯ ಖಜಾಂಚಿ ಶ್ರೀಪಾಲ ಖೇಮಲಾಪೂರೆ ಹಾಗೂ ಸುನಿಲ ಹನಮಣ್ಣವರ ಅವರು ಉದ್ಘಾಟಿಸಿದರು.
ಇಂದು ನಡೆದ ಶಾಂತಿಸಾಗರ ವಿಧಾನದಲ್ಲಿ ಸುಮಾರು 500 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಅಮೋಘ ಶಾಸ್ತ್ರೀ ಮತ್ತು ಮಹಾವೀರ ಶಾಸ್ತ್ರೀ ವಿಧಾನದ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುನಿಗಳಾದ ಕ್ಷೇಮಸಾಗರ, ಹಿತೇಂದ್ರಸಾಗರ ಮುನಿಗಳು, ಅಪೂರ್ವಸಾಗರ ಮುನಿಗಳು ಉಪದೇಶ ನೀಡಿದರು. ಈ ಸಂದರ್ಭದಲ್ಲಿ ವಿನೋದ ದೊಡ್ಡಣ್ಣವರ, ಪುಷ್ಪಕ ಹನಮಣ್ಣವರ, ರಾಜು ಕಟಗೆನ್ನವರ, ಪ್ರಕಾಶ ಉಪಾಧ್ಯೆ, ಅಭಿನಂದನ ಜಾಬನ್ನವರ, ಸನ್ಮತಿ ಕಸ್ತೂರಿ, ಭೋಶನ್ ಮಿಜರ್ಿ, ಹೀರಾಚಂದ ಕಲಮನಿ, ಸೇರಿದಂತೆ ಮೊದಲಾದವರು ಉಪಸ್ಥಿರಿದರು. ಡಾ. ಎ.ಆರ್. ರೊಟ್ಟಿ ಕಾರ್ಯಕ್ರಮ ನಿರೂಪಿಸಿದರು.