ಎಸ್‌ಸಿ., ಎಸ್‌ಟಿ. ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸಿ: ಅಧಿಕಾರಿಗಳಿಗೆ ದಲಿತ ಮುಖಂಡರ ಆಗ್ರಹ

Respond to the problems of SC, ST communities: Dalit leaders urge officials

ಎಸ್‌ಸಿ., ಎಸ್‌ಟಿ. ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸಿ: ಅಧಿಕಾರಿಗಳಿಗೆ ದಲಿತ ಮುಖಂಡರ ಆಗ್ರಹ 

ಕಾಗವಾಡ  22 : ತಾಲೂಕಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನರ ಸಮಸ್ಯೆಗಳು ಬಹಳಷ್ಟಿದ್ದು ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡಬೇಕೆಂದು ದಲಿತ ಮುಖಂಡರು ಸಮುದಾಯಗಳ ಕುಂದುಕೊರತೆ ಸಭೆಯಲ್ಲಿ ಒತ್ತಾಯಿಸಿದರು. ಶುಕ್ರವಾರ ದಿ. 21 ರಂದು ಪಟ್ಟಣದ ಬಸವ ನಗರದ ಅಂಬೇಡ್ಕರ ಸಭಾ ಭವನದಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಚುನಾಯಿತ ಸದಸ್ಯರ ಪ.ಜಾ. ಪ.ಪಂ. ಮುಖಂಡರ ಸಮಾಜ ಬಾಂಧವರ ಕುಂದುಕೊರತೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆದುಕೊಂಡ ದಲಿತ ಮುಖಂಡರು ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.  ಜುಗೂಳ ಗ್ರಾಮದ ಎಸ್‌ಸಿ ಸಮುದಾಯದ ಸ್ಮಶಾನ ಭೂಮಿ ವಿವಾದ ತಾರಕಕ್ಕೇರಿದ್ದು ಕಳೆದ ಅನೇಕ ತಿಂಗಳುಗಳಿಂದ ಈ ಕುರಿತು ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದಿರುವುದು ಅಧಿಕಾರಿಗಳ ಕರ್ತವ್ಯ ಪ್ರಜ್ಞೆಗೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಗ್ರಾಮದ ಸ್ಮಶಾನ ಸಮಸ್ಯೆ ಬಗೆಹರಿಸಬೇಕೆಂದು ಎಸ್‌ಸಿ ಸಮುದಾಯದವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇನ್ನೂ ತಾಲೂಕಿನಾದ್ಯಂತ ಅಕ್ರಮ ಸರಾಯಿ ಮಾರಾಟಾ ಜೋರಾಗಿದ್ದು ಅಬಕಾರಿ ಅಧಿಕಾರಿಗಳೇ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿತು. ಸಭೆಯಲ್ಲಿ ಕೆಲ ಇಲಾಖೆಯ ಅಧಿಕಾರಿಗಳು ಗೈರ ಆಗಿರುವುದನ್ನು ಗಂಭೀರವಾಗಿ ಪರೀಗಣಿಸಿ  ನೋಟಿಸ್ ನೀಡುವ ಕುರಿತು ನಿರ್ಣಯಿಸಲಾಯಿತು. ತಳವಾರ ಸಮಾಜಕ್ಕೆ ಸಿಕ್ಕಿರುವ ಎಸ್‌ಟಿ ಕೆಟಗರಿಯಿಂದಾಗಿ ನಮ್ಮ ಹಕ್ಕುಗಳು ಚ್ಯುತಿ ಉಂಟಾಗುತ್ತಿದೆ ಎಂದು ಮುಖಂಡರು ಆರೋಪಿಸಿದರು. ಅಲ್ಲದೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದೆ. ಅದಕ್ಕೆ ಕಡಿವಾಣ ಹಾಕಬೇಕೆಂದು ಸೂಚಿಸಿದರು. ಸರ್ಕಾರದ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ತಹಶೀಲ್ದಾರ ನೀಡಿದರು. ಅಧ್ಯಕ್ಷತೆಯನ್ನು ತಹಶೀಲ್ದಾರ ರಾಜೇಶ ಬುರ್ಲಿ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ಯಾದವಾಡ ಡಿಎಸ್‌ಪಿ ಪ್ರಶಾಂತ ಮುನ್ನೋಳ್ಳಿ ಸಿಪಿಐ ಸಂತೋಶ ಹಳ್ಳೂರ ತಾ.ಪಂ. ಎಓ ವೀರಣ್ಣಾ ವಾಲಿ ಬಿಇಓ ಎಂ.ಆರ್‌. ಮುಂಜೆ ಉಪತಹಶೀಲ್ದಾರ ರಷ್ಮಿ ಜಕಾತಿ ಟಿಎಚ್‌ಓ ಡಾ. ಬಸಗೌಡಾ ಕಾಗೆ ಅಣ್ಣಾಸಾಬ ಕೋರೆ ಅಬಕಾರಿ ಇಲಾಖೆಯ ಮಹಾಂತೇಶ ಬಂಡಗಾರ ಪಶು ಇಲಾಖೆಯ ಜ್ಞಾನೇಶ್ವರ ಕಾಂಬಳೆ ಬಿಸಿಯೂಟದ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ ಹೆಸ್ಮಾಂ ಎಇಇ ದುರ್ಯೋಧನ ಮಾಳಿ ಅರಣ್ಯ ಇಲಾಖೆಯ ರಾಕೇಶ ಅರ್ಜುನವಾಡ ಆಹಾರ ಇಲಾಖೆಯ ಸಂಗಮೇಶ ಬಾಗೇವಾಡಿ ಕೃಷಿ ಇಲಾಖೆಯ ಕಾಂತಿನಾಥ ಬಿರಾದರ ಕಾಗವಾಡ ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ ಸಿಡಿಪಿಓ ಮೇಲ್ವಿಚಾರಕಿ ಸುಜಾತಾ ಪಾಟೀಲ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ದಲಿತ ಮುಖಂಡರಾದ ಸಂಜಯ ತಳವಳಕರ ವಿವೇಕ ಕರಪೆ ವಿದ್ಯಾಧರ ಧೊಂಡಾರೆ ಪ್ರಕಾಶ ಧೊಂಡಾರ ಉಮೇಶ ಮನೋಜ ಮಹಾದೇವ ಕಾಂಬಳೆ ಪ್ರತಾಪ ಕಾಂಬಳೆ ಹೇಮಂತ ಹಿರೇಮನಿ ರಾಜು ಹಿರೇಮನಿ ಪ್ರಮೋದ ಕಾಂಬಳೆ ಗೋಪಾಲ ಕಾಂಬಳೆ ರವಿ ಕುರಣೆ ಬಾಳಾಸಾಬ ಕಾಂಬಳೆ ಸೇರಿದಂತೆ ತಾಲೂಕಿನ ದಲಿತ ಮುಖಂಡರು ಉಪಸ್ಥಿತರಿದ್ದರು. ಸಭೆಯಲ್ಲಿ ಕೆಲ ಅಧಿಕಾರಿಗಳು ನಿದ್ರೆಗೆ ಜಾರಿದ್ದು ಸಭೆಯ ಕುರಿತು ಅವರಿಗಿರುವ ಕಾಳಜಿಯನ್ನು ಪ್ರದರ್ಶಿಸಿದಂತೆ ಭಾಸವಾಯಿತು.