ಕನ್ನಡ ಹಬ್ಬ ಸಮ್ಮೇಳನ ಯಶಸ್ವಿಯಾಗಲು ಸಂಕಲ್ಪ ಮಾಡಿ : ಶಾಸಕ ಪಠಾಣ
ಶಿಗ್ಗಾವಿ 10 : ತಾಲೂಕ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಶಾಸಕ ಯಾಶೀರಖಾನ ಪಠಾಣ ಬಿಡುಗಡೆಗೋಳಿಸಿದರು.
ಪಟ್ಟಣದ ಅಂಬೇಡ್ಕರ್ ಸಂರ್ಕೀಣದಲ್ಲಿ ನಡೆದ ಶಿಗ್ಗಾವಿ ತಾಲೂಕ 5 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೋಳಿಸಿ ಮಾತನಾಡಿದ ಅವರು ಪಟ್ಟಣದಲ್ಲಿ ಪೆ.11 ರಂದು ನಡೆಯುವ ಸಮ್ಮೇಳನವನನ್ನು ತಾಲೂಕಿನ ಎಲ್ಲಾ ಕನ್ನಡಪರ ಸಂಘಟನೆ, ರೈತ ಪರ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘ-ಸಂಸ್ಥೆಗಳು ಕನ್ನಡ ಹಬ್ಬದಲ್ಲಿ ಪಾಲ್ಗೊಂಡು ಮಾದರಿ ಸಮ್ಮೇಳನವಾಗಿಸಲು ಸಂಕಲ್ಪ ಮಾಡಿ ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ, ಜಾನಪದ ತಜ್ಞ ಬಸವರಾಜ ಶಿಗ್ಗಾವಿ, ಸ್ನೇಹಲತಾ ಕುನ್ನೂರ, ಪಕ್ಕೀರ್ಪ ಕುಂದೂರ, ಎಸ್.ಎಫ್.ಮಣಕಟ್ಟಿ, ಗುಡ್ಡಪ್ಪ ಜಲದಿ, ಬಿ.ಸಿ.ಪಾಟೀಲ, ಮಂಜುನಾಥ ಮಣ್ಣಣ್ಣವರ, ಮಹಾಂತೇಶ ಸಾಲಿ, ಸುಧೀರ ಲಮಾಣಿ, ಮಲ್ಲಿಕಾರ್ಜುನಗೌಡ ಪಾಟೀಲ, ಬಸವರಾಜ ಜೇಕಿನಕಟ್ಟಿ, ಬಸಲಿಂಗಪ್ಪ ನರಗುಂದ, ನಿಂಗಪ್ಪ ಬೆಂಚಳ್ಳಿ, ರಾಮು ಪೂಜಾರ, ಗುರು ಅಣ್ಣಿಗೇರಿ, ಶಿವಾನಂದ ಕುನ್ನೂರ, ಮಂಜುನಾಥ ಮಿರ್ಜಿ, ಮಲ್ಲಮ್ಮ ಸೋಮನಕಟ್ಟಿ, ಸಂಜನಾ ರಾಯ್ಕರ, ಪ್ರತಿಭಾ ಗಾಂಜಿ, ರಾಜೇಶ್ವರಿ, ಕಸಾಪ ತಾಲೂಕ ಘಟಕದ ಕಾರ್ಯದರ್ಶಿ ರಮೇಶ ಹರಿಜನ, ಸಂಘಟನಾ ಕಾರ್ಯದರ್ಶಿ ಶಂಭುಲಿಂಗಪ್ಪ ಕೆರಿ, ಶಿಗ್ಗಾವಿ ಹೋಬಳಿ ಘಟಕದ ಮಹಿಳಾ ಅಧ್ಯಕ್ಷೆ ಲಲಿತಾ ಹಿರೇಮಠ, ತಾಲೂಕ ಹೋಬಳಿ ಘಟಕದ ಅಧ್ಯಕ್ಷ ಈರ್ಪ ಬೋಸ್ಲೆ,ರವಿ ಕಡಕೋಳ. ಮಾಲತೇಶ ನಾಯ್ಕೋಡಿ, ಶಂಕರ ಬಡಿಗೇರ, ಸಂತೋಷ ಕಟ್ಟಿಮನಿ ಇತರರಿದ್ದರು.