ನವದೆಹಲಿ 16: ದೇಶದಲ್ಲಿ ಕುಷ್ಠರೋಗ ನಿರ್ಮೂಲನೆ ಮಾಡಲು ಬಿಜೆಪಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ಸಮಯ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಬಿಜೆಪಿ ಎಲ್ಲ ಚುನಾಯಿತ ಸದಸ್ಯರು ಸಾಮಾಜಿಕ ಸೇವೆಗೆ ತಮ್ಮನ್ನು ತಾವು ಸಮಪರ್ಿಸಿಕೊಳ್ಳಬೇಕೆಂದು ಅವರು ಮಂಗಳವಾರ ಒತ್ತಾಯಿಸಿದರು.
ಕುಷ್ಠರೋಗವನ್ನು ನಿಮರ್ೂಲನೆ ಮಾಡಲು ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಇಂದು ಸಂಸದರಿಗೆ ಸ್ಪಷ್ಟ ಕರೆ ನೀಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನಂತರ ಸುದ್ದಿಗಾರರಿಗೆ ತಿಳಿಸಿದರು. ಕುಷ್ಠರೋಗ ಆಸ್ಪತ್ರೆಯೊಂದನ್ನು 'ಉದ್ಘಾಟಿಸಲು' ಒಮ್ಮೆ ಆಹ್ವಾನಿಸಿದ್ದ ಮಹಾತ್ಮ ಗಾಂಧಿಯವರ ಉದಾಹರಣೆಯನ್ನು ಪ್ರಧಾನಿ ಸ್ಮರಿಸಿದ್ದಾರೆ ಎಂದೂ ಜೋಶಿ ಹೇಳಿದರು.
ಭಾರತ, ಕುಷ್ಠರೋಗ ಮುಕ್ತವಾಗಿರಬೇಕು ಎಂಬುದು ಗಾಂಧಿ ಅವರ ಚಿಂತನೆ, ಧ್ಯೇಯವಾಗಿತ್ತು ಎಂದು ಮೋದಿ ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ. ಚುನಾಯಿತ ಸಂಸದರು ಸಂಸತ್ತಿನ ಕೆಲಸದ ಹೊರತಾಗಿಯೂ ಹೆಚ್ಚುವರಿಯಾಗಿ ಇದನ್ನು ಮಾಡಬಹುದು ಎಂದು ಅವರು ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಭೆಯು ದೇಶದ ನೀರಿನ ಬಿಕ್ಕಟ್ಟಿನ ಬಗ್ಗೆಯೂ ಗಮನಹರಿಸಿದೆ, ಶಾಸಕರು "ತಮ್ಮ ಕ್ಷೇತ್ರಗಳಲ್ಲಿನ ಅಧಿಕಾರಿಗಳೊಂದಿಗೆ ಕುಳಿತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು. ಕುಷ್ಟರೋಗದಂತಹ ಇತರೆ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಕ್ಷೇತ್ರದಲ್ಲಿ ಕೆಲಸ ಮಾಡಲು ಎಲ್ಲರೂ ಸಂಘಟಿತರಾಗಿ ಹೊಸ ಅಭಿಯಾನಕ್ಕೆ ಚುನಾಯಿತ ಪ್ರತಿನಿಧಿಗಳು ಕೈಜೋಡಿಸಿ ಕಂಕಣಬದ್ಧರಾಗಿ ನಿಲ್ಲಬೇಕೆಂದು ಪ್ರಧಾನಿ ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.