ಬೆಳಗಾವಿ : ಸೋಮವಾರದಂದು ನಗರಕ್ಕೆ ಭೆಟ್ಟಿ ನೀಡಿದ್ದ ರಾಜ್ಯ ಗಡಿ ರಕ್ಷಣೆ ಹಾಗೂ ಜಲವಿವಾದ ಆಯೋಗದ ಅಧ್ಯಕ್ಷ ಕೆ.ಎಲ್. ಮಂಜುನಾಥ ಅವರು ಕನ್ನಡ ಸಂಘಟನೆಗಳ ಜೊತೆಗೆ ಹಾಗೂ ಹೋರಾಟಗಾರರ ಜೊತೆಗೆ ನಡೆಸಿದ ಚಚರ್ೆ ಹಾಗೂ ಸಭೆಯ ರೀತಿಯ ಕುರಿತು ಬೆಳಗಾವಿಯ ಕನ್ನಡಪರ ಸಂಘಟನೆಗಳು ತೀವ್ರ ಅಸಮಾಧಾನ ಮತ್ತು ಅತೃಪ್ತಿಯನ್ನು ವ್ಯಕ್ತಪಡಿಸಿವೆ.
2015ರಲ್ಲಿ ದಿ. ವ್ಹಿ.ಎಸ್. ಮಳೀಮಠ ಅವರು ಅಧ್ಯಕ್ಷ ಸ್ಥಾನವನ್ನು ಒಪ್ಪುವ ಮೊದಲು ಗಡಿ ಕಾನೂನು ಸಲಹಾ ಸಮಿತಿಯನ್ನು ಗಡಿ ರಕ್ಷಣಾ ಆಯೋಗ ಎಂದು ಮರುನಾಮಕರಣ ಮಾಡಿಸಿದ್ದರು. ಅಲ್ಲದೇ ಗಡಿಗೆ ಸಂಬಂಧಿಸಿದ ಎಲ್ಲ ವಿಷಯಗಳೂ ಆಯೋಗದ ವ್ಯಾಪ್ತಿಯಲ್ಲಿ ಬರುತ್ತವೆಯಲ್ಲದೇ ಬೆಳಗಾವಿಯಲ್ಲಿ ಆಯೋಗದ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸಬೇಕೆಂಬ ಬೆಳಗಾವಿ ಕನ್ನಡಿಗರ ಬೇಡಿಕೆಯನ್ನು ಒಪ್ಪಿ ಸರಕಾರಕ್ಕೆ ಪ್ರಸ್ತಾವನೆಯನ್ನೂ ಸಹ ಕಳಿಸಿದ್ದರು. ಸುಪ್ರೀಂ ಕೋಟರ್ಿನ ಮುಂದಿರುವ ಗಡಿವಿವಾದ ಪ್ರಕರಣದ ಸಂಬಂಧ ಕಾನೂನು ಸಲಹೆ ಕೊಡುವದಷ್ಟೇ ಆಯೋಗದ ಕೆಲಸವೆಂದು ಅಧ್ಯಕ್ಷರು ಇಂದು ನಡೆದ ಸಭೆಯಲ್ಲಿ ಪದೇ ಪದೇ ಸ್ಪಷ್ಟಪಡಿಸಿದ್ದರಿಂದ ಇನ್ನು ಮುಂದೆ ಆಯೋಗದ ಜೊತೆಗೆ ಬೆಳಗಾವಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚಚರ್ಿಸದೇ ಇರಲು ಕನ್ನಡ ಸಂಘಟನೆಗಳು ನಿರ್ಧರಿಸಿವೆ.
ಗಡಿ ರಕ್ಷಣಾ ಆಯೋಗವನ್ನು ಪುನರ್ರಚಿಸಿ ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನೂ ಸಹ ಬೆಳಗಾವಿಗೆ ಸ್ಥಳಾಂತರಿಸುವ ಗಡಿ ಕನ್ನಡಿಗರ ಬೇಡಿಕೆಯು ಅಚಲವಾಗಿದೆ. ಈ ಕಚೇರಿಗಳ ಸ್ಥಳಾಂತರದ ಬಗ್ಗೆ ಅಧ್ಯಕ್ಷರು ಇಂದಿನ ಸಭೆಯಲ್ಲಿ ಯಾವದೇ ಸ್ಪಷ್ಟ ನಿಲುವು ವ್ಯಕ್ತಪಡಿಸದೇ ಇರುವ ಬಗ್ಗೆ ಮತ್ತು ಕನ್ನಡದ ಹಿರಿಯರು ನೀಡಿದ ಸಲಹೆಗಳ ಸಂಬಂಧವೂ ಸಹ ಮೊಂಡತನದ ಉತ್ತರ ನೀಡಿದ ಬಗ್ಗೆಯೂ ಸಹ ಕನ್ನಡ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಅಧ್ಯಕ್ಷರಾದ ಎರಡು ವರ್ಷಗಳ ನಂತರ ಬೆಳಗಾವಿಯಲ್ಲಿ ಸಭೆ ನಡೆಸಿದ ಅಧ್ಯಕ್ಷರು ಬೆಳಗಾವಿಯ ಕನ್ನಡಪರ ಸಂಘಟನೆಗಳ ಜೊತೆಗೆ ನಡೆಸಿದ ಸಭೆಯು ಸಮಾಧಾನಕರ ಆಗಿರಲಿಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಮತ್ತು ಗಡಿ ಉಸ್ತುವಾರಿ ಸಚಿವರ ನೇಮಕದ ವಿಷಯದಲ್ಲಿ ಮುಖ್ಯಮಂತ್ರಿಗಳನ್ನು ನಿಯೋಗದೊಂದಿಗೆ ಭೆಟ್ಟಿಯಾಗಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.