ಕಾಗವಾಡ 27: ಉಗಾರ ಖುರ್ದ ಪುರಸಭೆ ಕಚೇರಿಯ ಎದುರು ಪೌರಕಾಮರ್ಿಕರು ಅನಿಧರ್ಿಷ್ಠ ಪ್ರತಿಭಟನೆ ಹಮ್ಮಿಕೊಂಡಿದ್ದು, 7ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ದಿ. 26ರಂದು ನಮ್ಮ ಬೇಡಿಕೆಗಳು ಈಡೇರಿಸಿರಿ ಎಂದು ಕಾಗವಾಡ ಉಪತಹಸೀಲ್ದಾರ ವಿಜಯ ಚೌಗುಲೆ ಇವರಿಗೆ ಮನವಿ ಅಪರ್ಿಸಿದರು.
ಉಗಾರ ಖುರ್ದ ಪುರಸಭೆ ಪೌರಕಾಮರ್ಿಕರು ಹಮ್ಮಿಕೊಂಡ ಪ್ರತಿಭಟನೆ ಸ್ಥಳಕ್ಕೆ ಉಪತಹಸೀಲ್ದಾರ ವಿಜಯ ಚೌಗುಲೆ, ಕಂದಾಯ ನೀರಿಕ್ಷಕ ಬಿ.ಬಿ.ಬೋರಗಲ, ಗ್ರಾಮ ಲೆಕ್ಕಾಧಿಕಾರಿ ಎಂ.ಎಂ.ಕನಕನ್ನವರ ಭೇಟಿನೀಡಿ ಸಮಸ್ಯೆಗಳು ಆಲಿಸಿದರು.
ಉಗಾರದಲ್ಲಿ 17 ಪೌರಕಾಮರ್ಿಕರಿದ್ದು, ಇವರಿಗೆ ಕಳೇದ 11 ತಿಂಗಳಗಳಿಂದ ಸಂಬಳ ದೊರೆತಿಲ್ಲಾ. ದಿನನಿತ್ಯ ಬೇರೆಯವರಿಂದ ಸಾಲಸುಲಮಾಡಿ ಜೀವನ ಸಾಗಿಸುತ್ತಿದ್ದಾರೆ. ರಾಜ್ಯ ಸಕರ್ಾರ ಈ ಸಮಸ್ಯೆ ಯತ್ತ ಗಮನ ಹರಿಸಿ, ಅವರಿಗೆ ಸಂಬಳ ನೀಡುವ ವ್ಯವಸ್ಥೆ ಮಾಡುವಂತೆ ನಾನು ಸಕರ್ಾರ ಗಮನಕ್ಕೆ ತಂದು ಪ್ರಯತ್ನಿಸುತ್ತೇನೆ ಎಂದು ಉಪತಹಸೀಲ್ದಾರ ವಿಜಯ ಚೌಗುಲೆ ಹೇಳಿದರು.
ಸಂಬಳ ದೊರೆಯುವವರೆಗೆ ಸೇವೆಯಿಲ್ಲ:
ಪೌರಕಾಮರ್ಿಕರ ಮುಖಂಡರಾದ ಪ್ರಕಾಶ ಕಾಂಬಳೆ, ಸುರೇಶ ಕಾಂಬಳೆ, ಸಂಜಯ ಕಾಂಬಳೆ, ರಾಜು ಮಾಂಗ, ಮಹಾದೇವ ಮಾಂಗ, ಲಕ್ಕವ್ವಾ ಮಾಂಗ, ರತ್ನವ್ವಾ ಮಾಂಗ, ದರ್ಯಪ್ಪಾ ಖಟಾಂವಿ, ಶಂಕರ ದೊಡ್ಮನಿ, ಮಧುಕರ ಚಾಂಬಾರ, ಯುವರಾಜ ಕಾಂಬಳೆ, ಶಹಾಜಿ ಶಿಂಗೆ ಇವರು ನಮ್ಮ ಕೈಗೆ ರಾಜ್ಯ ಸಕರ್ಾರ ಸಂಬಳ ನೀಡುವರೆಗೆ ಪಟ್ಟಣದಲ್ಲಿಯ ಯಾವುದೇ ಸೇವೆ ನಾವು ಮಾಡುವದಿಲ್ಲಾ ಎಂದು ತಮ್ಮ ನಿಧರ್ಾರ ವ್ಯಕ್ತಪಡಿಸಿದರು.
ಆಧ್ಯಕ್ಷ, ಮುಖ್ಯಾಧಿಕಾರಿಗಳ ಅನುಪಸ್ಥಿತಿ:
ಪೌರಕಾಮರ್ಿಕರ ಪ್ರತಿಭಟನಾ ಸ್ಥಳಕ್ಕೆ ಉಪತಹಸೀಲ್ದಾರ ಭೇಟಿನೀಡಿ ಸಮಸ್ಯೆ ಆಲಿಸುತ್ತಿರುವಾಗ ಉಗಾರ ಪುರಸಭೆ ಆಧ್ಯಕ್ಷ ಶಶೀಕಾಂತ ಕಾಂಬಳೆ, ಒಂದೆ ಹುದ್ದೆಗೆ ಇಬ್ಬರು ಮುಖ್ಯಾಧಿಕಾರಿಗಳಾದ ಮೋಹನ ರಾಜಾಪುರೆ, ಶ್ರೀಮತಿ ಕಮಲೌವ್ವಾ ಭಾಗೋಜಿ ಗೈರು ಹಾಜರಿದ್ದರು. ಇದನ್ನು ಕಂಡ ಅನೇಕ ಹಿರಿಯರು ಸಂತಾಪ ವ್ಯಕ್ತಪಡಿಸಿದರು.ಮ್ಯಾನೇಜರ ಉದಯ ಘಟಕಾಂಬಳೆ ಇವರಿಗೆ ಮನವಿ ಅಪರ್ಿಸಿದರು.
ಫೋಟೊ ಶಿಷರ್ಿಕೆ: 26 ಕಾಗವಾಡ 4 ಉಗಾರ ಖುರ್ದ ಪುರಸಭೆ ಪೌರಕಾಮರ್ಿಕರು ಉಪತಹಸೀಲ್ದಾರ ವಿಜಯ ಚೌಗುಲೆ ಇವರು ಮನವಿ ಅಪರ್ಿಸುತ್ತಿರುವಾಗ ಬಿ.ಬಿ.ಬೋರಗಲ, ಎಂ.ಎಂ.ಕನಕನ್ನವರ, ಉದಯ ಘಟಕಾಂಬಳೆ ಮತ್ತಿತರರು.