ಸಕರ್ಾರಿ ಶಾಲೆಗಳಲ್ಲಿ ಯೋಗ ತರಬೇತಿ ಅವಶ್ಯ: ಮುಶೆಣ್ಣವರ

ಧಾರವಾಡ 03: ಸಕರ್ಾರ ಶಾಲೆಗಳಲ್ಲಿ ಯೋಗ ತರಬೇತಿ ಅವಶ್ಯವಿದೆ. ಅದೇ ರೀತಿ ಸಕರ್ಾರಿ ಶಾಲೆಗೆ ಬರುವ ಮಕ್ಕಳು ಬಡ ಕುಟುಂಬದಂತ ಹಾಗೂ ಮಕ್ಕಳ ಮೇಲೆ ಪ್ರೋತ್ಸಾಹ ನೀಡದ ಮಕ್ಕಳಿಗೆ ಯೋಗ ಬಹಳ ಮುಖ್ಯವೆಂದು ಡೈಯಟ್  ಶಾಲೆಯ ಮುಖ್ಯೋಪಾಧ್ಯಾಯಿಣಿ ಮುಶೆಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಕನರ್ಾಟಕ ವಿಶ್ವವಿದ್ಯಾಲಯ ಮತ್ತು ಪಾಠಾಭ್ಯಾಸ ಆದರ್ಶ ಪ್ರಾಥಮಿಕ ಶಾಲೆ ಡೈಯಟ್ ಇವರ ಸಂಯುಕ್ತ ಆಶ್ರಯದಲ್ಲಿ 15 ದಿನಗಳ ಉಚಿತ ಯೋಗ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಂಗ ಚೇತನ ಪುರಸ್ಕೃತ ಯಮನಪ್ಪ ಜಾಲಗಾರ ಮಾತನಾಡಿ ಜಗತ್ತಿಗೆ ಭಾರತ ಕೊಟ್ಟಿರುವ ಅನೇಕ ವಿದ್ಯೆಗಳಲ್ಲಿ ಯೋಗವು ಒಂದು. ಯೋಗದಿಂದ ಆರೋಗ್ಯ, ಅರಿವು ಮತ್ತು ಹೇಗೆ ಬದುಕಬೇಕೆಂದು ಕಲಿಸಿಕೊಡುತ್ತದೆ. ಅದರಲ್ಲಿ ವಿದ್ಯಾಥರ್ಿಗಳಿಗೆ ಓದಲು ಏಕಾಗ್ರತೆ, ಜ್ಞಾಪಕ ಶಕ್ತಿ, ಗ್ರಹಣ ಶಕ್ತಿ, ಇವೆಲ್ಲ ಯೋಗದಿಂದ ನಮ್ಮಲ್ಲಿ ಉಳಿದುಕೊಳ್ಳುವ ಅಂಶ ಎಂದು ಹೇಳಿದರು.

ಸಹಶಿಕ್ಷಕ ಆರ್ಯನ್ ನಿಲೋಗಲ್ ಮಾತನಾಡಿ ಎಲ್ಲ ವಿದ್ಯಾಥರ್ಿಗಳು ಓದಿನ ಜೊತೆಯಲ್ಲಿ ಯೋಗ ಕಲಿತುಕೊಂಡರೆ ಯಾವ ರೋಗಗಳು ಬರುವುದಿಲ್ಲ ಎಂದು ಹೇಳಿದರು. 

ಎಲ್ಲಾ ಶಾಲೆಯ ವಿದ್ಯಾಥರ್ಿಗಳು ಇಂತಹ ಯೋಗ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಾರ್ಗದರ್ಶಕರು ಮತ್ತು ಮೇಲ್ವಿಚಾರಕಿ ಲಕ್ಷ್ಮೀದೇವಿ ಪಾಂಡುರಂಗಿ ಅವರು ಹೇಳಿದರು.

.  ಶಾಲೆಯ ಶಿಕ್ಷಕರಾದ ಜೆ.ಬಿ. ಆಲಗಿ ಕೆ.ಎಸ್ ಬರಮಗೌಡ್ರ, ಕೆ.ಟಿ ಹುಣಸಿಕಟ್ಟಿ, ಎಮ್. ಆರ್. ಬಂಕಾಪೂರ, ಸಿ.ಬಿ. ಬಾಳಿಕಾಯಿ, ಎಮ್.ಎಚ್. ಕದರಮಂಡಲಗಿ ಎಲ್ಲ ಶಾಲಾ ಶಿಕ್ಷಕರು ಈ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹಿಸಿದರು. ವಿರೇಶ ಅಂಬಿ ನಿರೂಪಿಸಿದರು. ರಾಘವೇಂದ್ರ ಶೆಟ್ಟಿದಾರ ಸ್ವಾಗತಿಸಿದರು. ತರುಣ ಕಟ್ಟಿ ಮತ್ತು ಪ್ರಮೋದಕುಮಾರ ಕೆಂಗೇರಿ ವಂದಿಸಿದರು.