ಲೋಕದರ್ಶನ ವರದಿ
ಬೈಲಹೊಂಗಲ 11: ತಾಲೂಕಿನ ಏಣಗಿ ಗ್ರಾಮದಲ್ಲಿ ಸ್ಮಶಾನ ರಸ್ತೆಯನ್ನು ಅತಿಕ್ರಮಣ ತೆರವುಗೊಳಿಸಿ ರಸ್ತೆ ನಿಮರ್ಿಸಲು ಅಗ್ರಹಿಸಿ ನೂರಾರು ರೈತರು ಉಪವಿಭಾಗಾಧಿಕಾರಿಗಳಿಗೆ ದಿ.10ರಂದು ಮನವಿ ಸಲ್ಲಿಸಿದರು.
ಕೃಷಿಕ ಸಮಾಜದ ರಾಜ್ಯ ಕಾರ್ಯದಶರ್ಿ ಮಹಾಂತೇಶ ಕಮತ, ಗ್ರಾಮದ ಹಿರಿಯ ಅರವಿಂದ ಏಣಗಿ ಮಾತನಾಡಿ, ರಸ್ತೆ ಅತಿಕ್ರಮಣ ಕುರಿತು ಜಿಲ್ಲಾಧಿಕಾರಿ ಮತ್ತು ಗೃಹಸಚಿವರಿಗೆ ಮನವಿ ನೀಡಿದ ಫಲವಾಗಿ ಕಾಟಾಚಾರಕ್ಕೆ ಎಂಬವಂತೆ ಒಂದು ದಿನದ ಮಟ್ಟಿಗೆ ಸವದತ್ತಿ ತಾಲೂಕಾ ಆಡಳಿತ ರಸ್ತೆ ನಿಮರ್ಿಸಿ ಕೈ ತೊಳೆದುಕೊಂಡರು. ಸ್ಥಲೀಯವಾಗಿ ರಸ್ತೆ ತೆರವುಗೊಳಿಸಿದ ಮರು ದಿನವೇ ರಸ್ತೆ ನಿಮರ್ಿಸಲಾಯಿತು. ಈ ವಿಷಯ ತಾಲೂಕಿನ ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಎಪಿಎಂಸಿ ಸದಸ್ಯ ಫಕ್ಕಿರಗೌಡ ಸಿದ್ದನಗೌಡರ, ಈರಣ್ಣ ಹುಬ್ಬಳ್ಳಿ ಮಾತನಾಡಿ, ಇಂದಿನ ನಾಗರೀಕ ಸಮಾಜದಲ್ಲಿ ಸ್ಮಶಾನದ ರಸ್ತೆ ತೆರವುಗೊಳಿಸದೆ ಗ್ರಾಮಸ್ಥರ ಮನವಿಗೆ ಕ್ಯಾರೆ ಎನ್ನದ ಅಧಿಕಾರಿಗಳ ನಡೆಯನ್ನು ಉಗ್ರವಾಗಿ ಖಂಡಿಸಿದರು. ಏಣಗಿ ಗ್ರಾಮದ ಭೂಮಿಯಲ್ಲಾ ಮಲಫ್ರಭಾ ಯೋಜನೆಯಡಿಯಲ್ಲಿ ಮುಳುಗಿಹೋಗಿದ್ದು ಆ ಗ್ರಾಮದಲ್ಲಿ ಯಾರಾದರೂ ತೀರಿಹೋದರೆ ಅವರ ಅಂತ್ಯ ಸಂಸ್ಕಾರಕ್ಕೆ ರಸ್ತೆ ಇರದಿರುವುದು ಅತ್ಯಂತ ದುರಾದೃಷ್ಟಕರ ಸಂಗತಿ. ಗ್ರಾಮದಲ್ಲಿ ಮೂರು ದಿನಗಳಲ್ಲಿ ಸಮಸ್ಯೆಗೆ ಕಂಡುಕೊಳ್ಳದಿದ್ದರೇ ರಸ್ತೆಗಿಳಿದು ಹೋರಾಟ ನಡೆಸುತ್ತೆವೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಉಪವಿಭಾಗಾಧಿಕಾರಿ ಮಾರುತಿ ಎಂ.ಪಿ.ಮನವಿ ಸ್ವೀಕರಿಸಿ ಮಾತನಾಡಿ, ಇನ್ನೆರೆಡು ದಿನಗಳಲ್ಲಿ ಗ್ರಾಮದ ನಕಾಶೆಯಂತೆ ಸ್ಮಶಾನದ ರಸ್ತೆಯ ಗುರುತು ಹಾಕಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗವುದು ಎಂದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಂಜು ಪೂಜೇರ, ರಮೇಶ ಸಣ್ಣರ, ಎಮ್.ಎಸ್.ಹಿರೇಮಠ, ಎಸ್,ಎನ್ಮಸಗುಪ್ಪಿ, ಜಿ.ಬಿ.ಪೂಜಾರಿ ನೂರಾರು ಗ್ರಾಮಸ್ಥರು ಇದ್ದರು.