ಅಪರಿಚಿತ ಹೆಂಗಸು ಶವದ ವಾರಸುದಾರರ ಪತ್ತೆಗೆ ಮನವಿ

Request to trace the heirs of the dead body of an unknown woman

ಅಪರಿಚಿತ ಹೆಂಗಸು ಶವದ ವಾರಸುದಾರರ ಪತ್ತೆಗೆ ಮನವಿ  

ಗದಗ 01: ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ಒಬ್ಬ ಅಪರಿಚಿತ ಹೆಂಗಸು ವಯಾ ಸುಮಾರು 40 ವರ್ಷದವಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ದಿನಾಂಕ:30-12-2024 ರಂದು 06:44 ಪಿ.ಎಮ್ ಗಂಟೆಗೆ ಮೃತಪಟ್ಟಿದ್ದು. ಈ ಸಂಬಂಧವಾಗಿ ಗದಗ ರೇಲ್ವೆ ಪೊಲೀಸ ಠಾಣೆ ಯುಡಿಆರ್ ನಂಬರ 72/2024 ಕಲಂ 194 ಬಿ.ಎನ್‌.ಎಸ್‌.ಎಸ್ ಪ್ರಕರಣದಲ್ಲಿ ದಾಖಲಾಗಿ ತನಿಖೆಯಲ್ಲಿರುತ್ತದೆ. 

ಮೃತಳ ಚಹರೆ ಪಟ್ಟಿಯ ವಿವರ: ವಯಾ ಸುಮಾರ 40-45 ವರ್ಷ, ಸಾದಾಗಪ್ಪು ಮೈಬಣ್ಣ, ದುಂಡು ಮುಖ,     ಸಾಧಾರಣ ಮೈಕಟ್ಟು, ತಲೆಯಲ್ಲಿ ಸುಮಾರು 08-10 ಇಂಚು ಕಪ್ಪು ಕೂದಲು, ಎಡಗೈ ಮೇಲೆ ರೇಣು ಅಂತಾ ಅಚ್ಚೆ ಹಾಕಿಸಿರುತ್ತಾಳೆ. ನೋಡಲು ಜೋಗಮ್ಮನ ಹಾಗೆ ಕಾಣುತ್ತಾಳೆ. 

     ಬಟ್ಟೆ ಬರೆಗಳ ವಿವರ: ಮೃತಳ ಮೈಮೇಲೆ ಒಂದು ಚಾಕಲೇಟ ಕಲರಿನ ಜಂಪರ, ಒಂದು ಹಸಿರು ಕಲರಿನ ಲಂಗ, ಕಾಲಲ್ಲಿ ಕಾಲುಂಗರ ಧರಿಸಿರುತ್ತಾಳೆ. 

ಸದರಿ ಮೃತಳ ಪತ್ತೆ ಆದಲ್ಲಿ ಗದಗ ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ನಂ?08372-278744 ಅಥವಾ ಮೊ.ನಂ.?-9480802128 ಇಟಚಿಟ: ರಚಿಜಚಿರಡಿಟಥಿಅಠಿ.ರಠ.ಟಿ ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ ?080- 22871291 ನೇದ್ದಕ್ಕೆ ತಿಳಿಸಿದ್ದಾರೆ.