ಕ್ರಮಣದ ಜಾಗದಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ

ಲೋಕದರ್ಶನ ವರದಿ

ಬೆಳಗಾವಿ 30: ಗೋಕಾಕ ನಗರದ ಹಿಂದೂ ಮುಸ್ಲೀಂ ಭಾವೈಕ್ಯೆತೆಯ ಶ್ರದ್ಧಾ ಕೇಂದ್ರವಾಗಿರುವ ಟೊನ್ನಿಬಾಬಾ (ಬಾಬಾ ಇಮಾಮ ದಗರ್ಾದ)  ಐತಿಹಾಸಿಕ ದಗರ್ಾಕ್ಕೆ ಹೊಂದಿ ಕೊಂಡಿರುವ ಸಿಟಿಎಸ್ ನಂ. 1409/ ಬಿ. ಅತಿಕ್ರಮಣದ ಜಾಗದಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆ ಬಡಾವಣೆಯ ನಿವಾಸಿ ಕರೀಮಶಾ ಎ.ಎನ್. ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ತಮ್ಮ ದಾಯಾದಿಗಳೂ ಆಗಿರುವ ಮೆಹಬೂಬ ಸುಭಾನಿ ಅಬ್ದುಲ ಸತ್ತಾರ ನರಗುಂದಬಾಬಾ ಮತ್ತು ಶಮಶುದ್ದಿನ ಅಬ್ದುಲ ಸತ್ತಾರ ನರಗುಂದಬಾಬಾ ಅವರುಗಳು ಪುರಸಭೆಯ ಅನುಮತಿ ಪಡೆಯದೇ ಅಕ್ರಮವಾಗಿ ಕಟ್ಟಡ ನಿಮರ್ಿಸುತ್ತಿದ್ದಾರೆ. ಅನೇಕ ದೂರುಗಳ ನಡುವೆಯೂ ಕಟ್ಟಡ ನಿಮರ್ಾಣ ಅವ್ಯಾಹತವಾಗಿ ಮುಂದುವರೆದಿದೆ. ಈ ಅಕ್ರಮ ಕಟ್ಟಡದಿಂದ ಅಲ್ಲಿಯ ದಗರ್ಾದ ಪಾವಿತ್ರ್ಯಗೆ ಧಕ್ಕೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಅಕ್ರಮವನ್ನು ತಡೆಯುವಂತೆ ಆ ಅನೇಕ ಬಾರಿ, ಪುರಸಭೆ, ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮನವಿ ಸಲ್ಲಿಸಿದಾಗ ಆಯಾ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಕಚೇರಿಯಿಂದ ಸಂಬಂಧಿಸಿದ ಅಧಿಕಾರಿಗಳಿಗೆ, ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರೂ ಪುರಸಭೆಯ ಅಧಿಕಾರಿಗಳು ಯಾವ ಕ್ರಮವನ್ನು ಜರುಗಿಸದಿರುವದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಆ ಕಟ್ಟಡ ನಿಮರ್ಾಣಕ್ಕೆ ಸಂಬಂಧಿಸಿದ ಇಲಾಖೆಯಿಂದ ಅನುಮತಿ ನೀಡಲಾಗಿಲ್ಲ ಎಂಬುದು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಅಧಿಕೃತ ಮಾಹಿತಿ ಪಡೆದಿದ್ದೇನೆ. ಈ ಅಧಿಕೃತ ಮಾಹಿತಿ ನೀಡಿದ ಅಧಿಕಾರಿಗಳು ಆ ಕಟ್ಟಡ ನಿಮರ್ಿಸುತ್ತಿರುವವರ ವಿರುದ್ಧ ಯಾವ ಕ್ರಮ ಜರುಗಿಸಿಲ್ಲ. ಈ ಅಕ್ರಮ ಕಟ್ಟಡ ನಿಮರ್ಾಣದಲ್ಲಿ ಪುರಸಭೆಯ ಅಧಿಕಾರಿಗಳು ಭಾಗಿಯಾಗಿದ್ದಾರೆಂಬುದು ಸ್ಪಷ್ಟವಾಗಿದೆ.

ಈವರೆಗೆ  ಮಾಡಿರುವ ಮನವಿಗಳು, ಆಯಾ ಅಧಿಕಾರಿಗಳ ಸೂಚನೆ ಮತ್ತು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಪಡೆಯಲಾದ ಮಾಹಿತಿಗಳ ದಾಖಲೆಗಳನ್ನು ಈ ಮನವಿಯೊಂದಿಗೆ ಲಗತ್ತಿಸಲಾಗಿದೆ.

ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ತಾವು ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ. ಕಠಿಣ ಕ್ರಮ ಜರುಗಿಸುವ ಮೂಲಕ ಆ ಅಕ್ರಮ ಕಟ್ಟಡದ ಹತ್ತಿರವಿರುವ ದಗರ್ಾದ ಪಾವಿತ್ಯ್ರತೆ ಕಾಪಾಡದಿದ್ದರೆ, ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾre.