ವಿಜಯಪುರದಲ್ಲಿ ಮಹಷರ್ಿ ವಾಲ್ಮೀಕಿ ಸಮುದಾಯ ಭವನ ನಿಮರ್ಿಸಲು ಮನವಿ

ವಿಜಯಪುರ, 6 : ವಿಜಯಪುರ ನಗರದಲ್ಲಿ ಮಹಷರ್ಿ ವಾಲ್ಮೀಕಿ ಸಮುದಾಯ ಭವನ ನಿಮರ್ಾಣ ಮಾಡುವಂತೆ ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ಸಂಘದಿಂದ ಗುರುವಾರ ಅಪರ ಜಿಲ್ಲಾಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು.

ಸಂಗದ ಜಿಲ್ಲಾಧ್ಯಕ್ಷ ಮಳಸಿದ್ದ ನಾಯಕೋಡಿ ಮಾತನಾಡಿ ಮಹಷರ್ಿ ವಾಲ್ಮೀಕಿ ಸಮುದಾಯ ಭವನ ನಿಮರ್ಿಸುವ ಕುರಿತು ಅನೇಕ ಬಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ. ವಾಲ್ಮಿಕಿ ಜಯಂತಿಯ ಸಮಯದಲ್ಲಿ ಪ್ರತಿ ವರ್ಷ ಮಹಷರ್ಿ ವಾಲ್ಮಿಕಿ ಜಯಂತಿಯ ಸಮಯದಲ್ಲಿ ವಾಲ್ಮಿಕಿ ಸಮುದಾಯ ಭವನ ನಿಮರ್ಾಣ ಮಾಡುವ ಪೊಳ್ಳು ಭರವಸೆ ನೀಡುತ್ತಾರೆ. ಆದರೆ ಇದುವರೆಗೆ  ಅದು ಕಾರ್ಯರೂಪಕ್ಕೆ ಬಂದಿಲ್ಲ. ಬೇರೆ ಜಿಲ್ಲೆಯಲ್ಲಿ ವಾಲ್ಮಿಕಿ ಸಮುದಾಯ ಭವನವನ್ನು  3-4 ಕಿ.ಮಿ. ಅಂತರದಲ್ಲಿ ಕಟ್ಟಿರುವುದರಿಂದ ಆ ಸಮುದಾಯ ಭವನ ಈಗ ಹಾಳು ಬಿದ್ದು ಹೋಗಿರುತ್ತವೆ. ವಸ್ತುಸ್ಥಿತಿ ಹೀಗಿರುವಾಗ ವಿಜಯಪುರ ಜಿಲ್ಲೆಯಲ್ಲಿ ನಗರದ ವಲಯದಲ್ಲಿಯೇ ಸಮುದಾಯ ಭವನಕ್ಕೆ ಜಿಲ್ಲಾಡಳಿತದಿಂದ  ಗುರುತಿಸಿದ ಜಾಗಾದಲ್ಲಿಯೇ ಸಮುದಾಯ ಭವನವನ್ನು ಕಟ್ಟಲು ಒತ್ತಾಯಿಸುತ್ತೇವೆ. 

ಅಖಿಲ ಭಾರತ ವಾಲ್ಮೀಕಿ ಸಮಾಜದ ಸೇವಾ ಸಂಘ ರಾಜ್ಯಾಧ್ಯಕ್ಷ ಮಲ್ಲಿಕಾಜರ್ುನ ಬಟಗಿ ಮಾತನಾಡಿ ನಗರ ವಲಯದಲ್ಲಿ ಗುರುತಿಸಿದ ಜಾಗದಲ್ಲಿಯೇ ಸಮುದಾಯ ಭವನವನ್ನು ನಿಮರ್ಿಸಲು ತಕ್ಷಣ ಕ್ರಮ ಕೈಕೊಳ್ಳಬೇಕು. ನಮ್ಮ ಸಮಾಜಕ್ಕೆ ಕಾರ್ಯಕ್ರಮ ಮಾಡಲು ಯಾವುದೇ ಸ್ಥಳ ಇರದೆ ನಾವು ಪರದಾಡುವಂತಾಗಿದೆ. ಸರಕಾರ ಬಿಡುಗಡೆ ಮಾಡಿಸಿರುವ 3.5 ಕೋಟಿ ರೂ. ಅನುದಾನ ಬಿಡುಗಡೆ ಆಗಿರುವದು ಅಂತಾ ಹೇಳುತ್ತಿದ್ದಾರೆ. ಅದು ಇನ್ನೂ ಕಾರ್ಯರೂಪಕ್ಕೆ  ಬಂದಿರುವುದಿಲ್ಲ. ತಕ್ಷಣ ಸಮುದಾಯ ಭವನವನ್ನು ನಿಮರ್ಿಸಿ ಸಮಾಜಕ್ಕೆ ಅನುಕೂಲ ಮಾಡಿಕೊಡಬೇಕೆಂದು ಲಾಗ್ರಹಿಸಿದರು.

    ಒಂದು ವೇಳೆ 15 ದಿನದೊಳಗಾಗಿ ಈ ಕುರಿತು ಕ್ರಮ ಕೈಕೊಳ್ಳದೇ ಹೋದರೆ  ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹವನ್ನು ಕೈಕೊಳ್ಳುವುದಾಗಿ ಎಚ್ಚರಿಸಿದರು.

ಸಮಾಜದ ಮುಖಂಡರಾದ ಸಾಕಪ್ಪ ಬಿಸನಾಳ, ಗುರುನಾಥ ಕೊಣ್ಣೂರ, ಅಡಿವೆಪ್ಪ ಕಸ್ತೂರಿ, ಚೌಡಪ್ಪ ಹವಾಲದಾರ, ಶಂಕರ ಕೊಳರಗಿ, ಅಮಿನಸಾಬ ಸೂರಪೂರ ಮುಂತಾದವರು ಉಪಸ್ಥಿತರಿದ್ದರು.