ಲೋಕದರ್ಶನ
ವರದಿ
ವಿಜಯಪುರ 17:ಕನರ್ಾಟಕ ದಲಿತ ಸಂಘರ್ಷ ಸಮಿತಿ
(ರಿ) ಅಂಬೇಡ್ಕರವಾದ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ಸ.ನಂ.838 ಖಾಲಿ
ಸರಕಾರಿ ನಿವೇಶನ ರಮಾಯಿ ಅಂಬೇಡ್ಕರ ಭವನಕ್ಕೆ ಒದಗಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ವಾರ್ಡ ನಂ. 4 ರಲ್ಲಿ ಬರುವ ಸ.ನಂ.
838 ರ ಸರಕಾರಿ ಖಾಲಿ ನಿವೇಶನ ಮಾತೋಶ್ರೀ
ರಮಾಯಿ ಅಂಬೇಡ್ಕರ ಭವನಕ್ಕೆ ದೊರಕಿಸಿಕೊಡಬೇಕು ಮತ್ತು ಈ ಪ್ರದೇಶದಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ದಲಿತರೆ ವಾಸಿಸುತ್ತಾರೆ. ಕಾರಣ ರಮಾಯಿ ಅಂಬೇಡ್ಕರ
ಭವನಕ್ಕೆ ಈ ಸ್ಥಳವನ್ನು ನೀಡಬೇಕೆಂದು
ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳಗಾವಿ
ವಿಭಾಗಿಯ ಸಂಚಾಲಕರಾದ ಜಿತೇಂದ್ರ ಕಾಂಬಳೆ, ಜಿಲ್ಲಾ ಪ್ರಧಾನ ಸಂಚಾಲಕರು ಸಂಜು ಕಂಬಾಗಿ, ಸುಖದೇವ
ಚಲವಾದಿ, ಪರಶುರಾಮ ಚಲವಾದಿ, ಸೋಮು ರಣದೇವಿ, ಭೀಮು
ಉತ್ನಾಳ, ಗೋವಿಂದ ಶಹಾಪೂರ, ಲಾಲಪ್ಪ ಶಹಾಪುರ, ಸುನೀಲ ಬೊರಗಿ, ನಿಂಗಪ್ಪ ಹೆಂಡೆಗಾರ, ರಾಮಚಂದ್ರ ಶಹಾಪೂರ, ಅನೀಲ ಬೊರಗಿ, ಯಲ್ಲಪ್ಪ
ಕಾಂಬಳೆ, ಪರಶುರಾಮ ಶಹಾಪೂರ, ಶಂಕರ ಭಜಂತ್ರಿ, ವಿಜಯ
ಚಂದನಶಿವ, ಅಮೋಘಸಿದ್ದ ಕಾಂಬಳೆ, ಲಕ್ಷ್ಮಣ ಬೊರಗಿ, ಅಲ್ತಾಪ ಅತ್ತಾರ, ಅಜಯ ಬೊರಗಿ, ಅಶೋಕ
ಭಜಂತ್ರಿ, ಬಸವರಾಜ ಹೆಂಡೆಗಾರ, ಮಲ್ಲಪ್ಪ ಹರಿಜನ ಮುಂತಾದವರು ಭಾಗವಹಿಸಿದ್ದರು.