ಅಕ್ರಮ ಮರಳು ತಡೆಯಲು ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಕೊಪ್ಪಳ 17: ರಾಜ್ಯ ಸಕರ್ಾರ ಮರಳು ಬಳಕೆ ಮಾಡಿಕೊಳ್ಳಲು ಸರಿಯಾದ ನೀತಿ ನೀಯಮಗಳನ್ನು ಜಾರಿಗೊಳಿಸದ ಕಾರಣ. ಎಲ್ಲೆಂದರಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆದಿದೆ.  ಸ್ಥಳೀಯವಾಗಿ ಕಟ್ಟಡ ನಿಮರ್ಾಣ ಮಾಡುವವರು ಕೂಡ ಅತ್ಯಂತ ದುಬಾರಿ ಬೆಲೆಗೆ ಮರಳು ಖರೀದಿಸವ ಒತ್ತಾಯಕ್ಕೊಳಗಾಗಿದ್ದಾರೆ.

ಅಕ್ರಮ ಮರಳು ಸಾಗಾಣಿಕೆದಾರರು ಬೆಂಗಳೂರು, ಹುಬ್ಬಳಿ ಇತರೆ ಮಹಾನಗರಗಳಿಗೆ ಮರಳು ಸಾಗಿಸುತ್ತಿದ್ದಾರೆ. ನಿರಂತರ ಬರದಿಂದ ಈಗಾಗಲೆ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದೆ. ಪೋಕಲೈನ್ ಇತರೆ ದೈತ್ತಾ ಯಂತ್ರಗಳಿಂದ  ಎಲ್ಲೆಂದರಲ್ಲಿ ಭೂಮಿಯನ್ನು ಬಗೆದು ಮರಳು ಗಾರಿಕೆ ದಂದೆ ನಡೆಸಲಾಗುತ್ತಿದೆ. ಈ ದುರಾಕ್ರಮಣದಿಂದ ಭೂಮಿ ಅಂತರ್ಜಲ ಕುಸಿದು ನೀರಿನ ಆಹಕಾರ ಉಂಟಾಗುತ್ತದೆ.  

ಕೊಪ್ಪಳ ತಾಲೂಕಿನ ನರೆಗಲ್, ಕೊಳೂರು, ದದೆಗಲ್ ಸಿಂಧೋಗಿ ಇತರೆ ಗ್ರಾಮಗಳಿಗೆ ಹೊಂದಿಕೊಂಡ ನಾಲೆಯ ದಂಡೆ ಮತ್ತ ಪಕ್ಕದ ಹೊಲಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಈ ಎಲ್ಲಾ ಗ್ರಾಮಗಳಲ್ಲಿ ಗದಗ ಜಿಲ್ಲೆಯ ಮರಳು ಗುತ್ತೇದಾರರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ. ಆಯಾ ಗ್ರಾಮದ ಕೆಲವರು ಕೊಪ್ಪಳ ತಹಶೀಲ್ದಾರರಿಗೆ ಪತ್ರ ಕೊಟ್ಟು ಅಕ್ರಮ ಸಾಗಾಣಿಕೆದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಒತ್ತಾಯಿಸಿದ್ದಾರೆ. 

ನರೆಗಲ್ ಗ್ರಾಮದ ಹತ್ತಿರದ ನಾಲೆಯ ಪಕ್ಕದಲ್ಲಿ ಮರಳು ತೋಡಿದ ಗುಂಡಿಗಳಲ್ಲಿ ಮಳೆಯ ನೀರು ಸಂಗ್ರಹಗೊಂಡಿತ್ತು. 3, 4 ತಿಂಗಳ ಇದೆ ಗ್ರಾಮದ ಇಬ್ಬರು ವಿಧ್ಯಾಥಿಗಳು ಈ ಗುಂಡಿಗಳಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರಕರಣವನ್ನು ತಾಲೂಕಾ ಆಡಳಿತ ಗಂಭೀರವಾಗಿ ಪರಿಗಣಿಸಲಿಲ್ಲ.

ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಕೊಪ್ಪಳ ತಹಶೀಲ್ದಾರರು ಶೀಘ್ರ ಕಾರ್ಯಚರಣೆಗೆ ಮುಂದಾಗುತ್ತಿಲ್ಲವೆಂದು ಹೇಳಲಾಗುತ್ತದೆ.  

ತಾವುಗಳು ಅಕ್ರಮ ಮರಳು ಸಾಗಾಣಿಕೆಯನ್ನು ನಿಷೇಧಿಸಿ, ಅಂತರರ್ಜಲ ಹಾಗೂ ಪರಿಸರ ಮಾಲಿನ್ಯವನ್ನು ರಕ್ಷಿಸಿ, ನೈಸಗರ್ಿಕ ಅಸಮತೋಲನವನ್ನು ತಡೆಗಟ್ಟಬೇಕೆಂದು ಕ.ರಾ. ರೈತ ಸಂಘ ಮನವಿ ನೀಡಿ ಆಗ್ರಹಿಸಿದ