ಗಿಣಿಗೇರ - ಕೊಪ್ಪಳಕ್ಕೆ ಹೋಗುವ ಮೇಲ್ ಸೇತುವೆಗೆ ವಿದ್ಯುತ್ ದೀಪ ಅಳವಡಿಸಲು ಮನವಿ
ಕೊಪ್ಪಳ 13: ತಾಲೂಕಿನ ಗಿಣಿಗೇರಿ ಗ್ರಾಮದ ಮುಖಾಂತರ ಕೊಪ್ಪಳ ನಗರಕ್ಕೆ ಇರುವ ಮೇಲ್ ಸೇತುವೆ ಮೇಲೆ ವಿದ್ಯುತ್ ದೀಪ ಅಳವಡಿಸಲು ಗಿಣಿಗಿರಿ ನಾಗರಿಕ ಹೋರಾಟ ಸಮಿತಿಯಿಂದ ಮನವಿ ಮಾಡಲಾಗಿತ್ತು. ಆದರೆ ವಿದ್ಯುತ್ ದೀಪ ಇಲ್ಲದ ಕಾರಣ ದಿನಾಂಕ 12ರಂದು ರಾತ್ರಿ 8 ಗಂಟೆಗೆ ಟ್ರ್ಯಾಕ್ಟರ್ ಮತ್ತು ಲಾರಿ ಮುಖಾಮುಖಿ ದಿಕ್ಕಿಹೊಡೆದು ಅಪಘಾತ ಸಂಭವಿಸಿದೆ. ಮೇಲ್ ಸೇತುವೆ ಮುಖಾಂತರ ಭಾರಿ ವಾಹನಗಳು ಮತ್ತು ತುಂಬಾ ಅಪಾಯಕಾರಿ ಕರ್ವಿಂಗ್ ಇರುವುದರಿಂದ ಅಪಘಾತಗಳು ದಿನನಿತ್ಯ ಸಂಭವಿಸುತ್ತೇವೆ. ಇಂಥ ಅಪಾಯಕಾರಿ ಸ್ಥಳದಲ್ಲಿ ಬೈಕ್ ಸವಾರರು, ಸೈಕಲ್ ಸವಾರರು, ಕಲ್ಯಾಣಿ ಕಾರ್ಖಾನೆಯ ಕಾರ್ಮಿಕರು, ತಮ್ಮ ಕೆಲಸದ ಅವಧಿ ಮುಗಿಸಿಕೊಂಡು ಹೋಗುವಾಗ ಕತ್ತಲ್ಲಿಲ್ಲಿ ಅಪಾಯ ಸಂಭವಿಸತ್ತವೆ. ಕೂಡಲೇ ದೊಡ್ಡ ಅನಾಹುತ ಸಂಭವಿಸುವ ಮುಂಚೆ ಸಂಚಾರ ನಿಯಮಗಳ ಬೋರ್ಡನ್ನು ಹಾಕುವುದು ಮತ್ತು ಕೂಡಲೇ ವಿದ್ಯುತ್ ದ್ವೀಪಗಳನ್ನು ಅಳವಡಿಸಬೇಕೆಂದು ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಸಂಚಾಲಕರಾದ ಶರಣುಗಡ್ಡಿ ಮುಖಂಡರಾದ ಮಂಗಳೇಶ ರಾತೋಡ್ ಮನವಿ ಮಾಡಿದ್ದಾರೆ.