ಸಫಾಯಿ ಕರ್ಮಚಾರಿ ಗುರುತಿಸಿ ಸೌಲಭ್ಯ ಕೊಡಬೇಕೆಂದು ಮನವಿ
ಹುಬ್ಬಳ್ಳಿ 17: ಚಾಮುಂಡೇಶ್ವರಿ ನಗರದಲ್ಲಿ ಹು.ಧಾ.ಮ.ಪಾಲಿಕೆ ವಲಯ ಕಛೇರಿ 5 ರ ವತಿಯಿಂದ ಮ್ಯಾನ್ಯುಯಲ್ ಸ್ಕ್ಯಾವೆಂಜರಗಳ ಸರ್ವೇ.ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಿನ ಅನ್ವಯ ಮ್ಯಾನ್ಯುಯಲ್ ಸ್ಕ್ಯಾವೆಂಜರಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013 ರ ಅಡಿಯಲ್ಲಿ, ಮ್ಯಾನ್ಯುಯಲ್ ಸ್ಕ್ಯಾವೆಂಜರ ವೃತ್ತಿಯಲ್ಲಿದ್ದವರನ್ನು ಗುರುತಿಸಲು ಇಂದು ಹು.ಧಾ.ಮ.ಪಾಲಿಕೆ ವಲಯ ಕಛೇರಿ 5 ರ ವ್ಯಾಪ್ತಿಯಲ್ಲಿ ಬರುವ ಚಾಮುಂಡೇಶ್ವರಿ ನಗರದಲ್ಲಿ ಸಮೀಕ್ಷೆಯನ್ನು ನಡೆಸಲಾಯಿತು.
ಮಾದಿಗ ದಂಡೋರ ಒಖಕಖ ರಾಜ್ಯ ವಕ್ತಾರರಾದ ಮಂಜುನಾಥ ಕೊಂಡಪಲ್ಲಿ ಅವರು ಸಾಂಧರ್ಭಿಕವಾಗಿ ಮಾತನಾಡಿ 2015 ಮತ್ತು 2018 ರಲ್ಲಿ ಇದೇ ರೀತಿ ಪಾಲಿಕೆ ವತಿಯಿಂದ ಸಮೀಕ್ಷೆ ನಡೆಸಿ ಸುಮಾರು 1600 ಅರ್ಜಿಗಳನ್ನು ಸಂಗ್ರಹಿಸಿದರೂ, ಯಾವುದೇ ಅರ್ಜಿಗಳನ್ನು ಪರೀಶೀಲನೆಗೆ ಒಳಪಡಿಸಿ ಸರ್ಕಾರಕ್ಕೆ ಸಲ್ಲಿಸದ ಕಾರಣ ನೊಂದಿರುವ ಸಫಾಯಿ ಕರ್ಮಚಾರಿಗಳಿಗೆ ಯಾವುದೇ ಪುನರ್ವಸತಿ ಸೌಲಭ್ಯಗಳು ದೊರೆಯದೇ ಭಾರಿ ಅನ್ಯಾಯವಾಗಿದೆ.
ಮೈಸೂರು, ದಾವಣಗೆರೆ, ಬೆಂಗಳೂರು ಇತ್ಯಾದಿ ನಗರಗಳಲ್ಲಿ ನಡೆದ ಸಮರ್ಕವಾದ ಸಮೀಕ್ಷೆಯ ಕಾರಣ ಅಲ್ಲಿನ ಸಫಾಯಿ ಕರ್ಮಚಾರಿಗಳಿಗೆ ಸಾಕಷ್ಟು ಸೌಲಭ್ಯಗಳು ದೊರೆತು ಅವರು ಗೌರವಯುತ ಜೀವನ ನಡೆಸುವಂತಾಗಿದೆ, ಆದರೆ ಧಾರವಾಡ ಜಿಲ್ಲೆಯಲ್ಲಿ ಮಾತ್ರ ಆಡಳಿತ ಯಂತ್ರದ ಅಸಮರ್ಥತೆಯಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಚಾಮುಂಡೇಶ್ವರಿ ನಗರದ ಅಧ್ಯಕ್ಷರಾದ ಪರಶುರಾಮ ಮಲ್ಯಾಳ ಅವರು ಮಾತನಾಡಿ ಈ ಬಾರಿಯ ಸಮೀಕ್ಷೆಯಲ್ಲಿ ಅರ್ಹರನ್ನು ಗುರುತಿಸಲು ಸೂಕ್ತ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.ವಲಯ ಕಛೇರ 5 ರ ಉಪ ಆಯುಕ್ತರಾದ ಆನಂದ ಕಾಂಬ್ಳೆ, ಅರೋಗ್ಯ ನೀರೀಕ್ಷಕ ರಾಜು ಕೊಲಗೊಂಡ ಮತ್ತು ಜಿಲ್ಲಾ ಸಫಾಯಿ ಕರ್ಮಚಾರಿ ಜಾಗೃತ ಸಮಿತಿಯ ಸದಸ್ಯೆ ಮಮತಾ ಬೆಳಗಾಂಕರವರ ಸಮ್ಮುಖದಲ್ಲಿ ನಡೆದ ಸಮೀಕ್ಷಾ ಕಾರ್ಯಕ್ರಮದಲ್ಲಿ ಸುಮಾರು 45 ಜನರು ಅರ್ಜಿಗಳನ್ನು ಸಲ್ಲಿಸಿದರು.
ಮುಖಂಡರಾದ ರಾಜೇಶ ಮಂತ್ರಗಾರ, ಸೀತಾರಾಮ ಹರಿಜನ, ಕುಲ್ಲಾಯಪ್ಪ ಮಂತ್ರಿ, ಹರೀಶ ಅನಂತಪುರ, ಅನಿಲ ಆತ್ಮಕೂರ, ಓಬಳೇಶ್ ಪೆನುಗೋಳ ಮತ್ತು ಲಕ್ಷ್ಮಿ ಹರಿಜನ, ಮೈತ್ರ ಸೌದುಲ್, ಪಕ್ಕೀರಮ್ಮ ಭಂಡಾರಿ, ಧನಂಜನೆಯ ಆತ್ಮಕೂರ, ಚನ್ನಪ್ಪ ರಂಗಂಪೇಟ, ತಿರುಪಾಲ ಭಂಡಾರಿ, ಜೀವನ ಅನಂತಪುರ ಇನ್ನೂ ಹಲವಾರು ಜನರು ಭಾಗವಹಿಸಿದ್ದರು.