ನಿಗೂಢವಾಗಿ ನಾಪತ್ತೆಯಾದ ಮೀನುಗಾರರ ಪತ್ತೆ ಹಚ್ಚಲು ಮನವಿ

ಲೋಕದರ್ಶನ ವರದಿ

ವಿಜಯಪುರ, 16 : ಉಡುಪಿ ಮಲ್ಪೆ ಬಂದರಿನಲ್ಲಿ ಮೀನು ಹಿಡಿಯಲು ಹೋದ 7 ಜನ ಮೀನುಗಾರರು ನಿಗೂಢವಾಗಿ ನಾಪತ್ತೆಯಾಗಿರುವುದನ್ನು ಶೀಘ್ರ ಪತ್ತೆ ಮಾಡಬೇಕು ಎಂದು ಒತ್ತಾಯಿಸಿ ಕನರ್ಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗು ಅತೀ ಸಣ್ಣ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಸಾಯಬಣ್ಣ ಮಡಿವಾಳರ ಮಾತನಾಡಿ, ಉಡುಪಿ ಜಿಲ್ಲೆಯ ಮಲ್ಪೆ ಕರಾವಳಿಯಲ್ಲಿ 7 ಜನ ಮೀನುಗಾರರು ನಿಗೂಢವಾಗಿ ನಾಪತ್ತೆಯಾಗಿದ್ದರೂ ಇವರನ್ನು ಹುಡುಕುವ ಕೆಲಸಕ್ಕೆ ಕೇಂದ್ರ ಸಕರ್ಾರವಾಗಲಿ, ರಾಜ್ಯ ಸಕರ್ಾರವಾಗಲಿ ನಿರ್ಲಕ್ಷ್ಯ ವಹಿಸಿರುವುದು ವಿಪಯರ್ಾಸದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರರು ತಮ್ಮ ತುತ್ತಿನಚೀಲ ತುಂಬಿಸಿಕೊಳ್ಳಲು ಸಮುದ್ರದಲ್ಲಿ ಇಳಿದಾಗ ದಿಢೀರನೆ ನಾಪತ್ತೆಯಾಗಿದ್ದು, ಕುಟುಂಬಕ್ಕೆ ಆಸರೆಯಾಗಿದ್ದ ವರನ್ನು ಕಳೆದುಕೊಂಡು ಅವರ ಕುಟುಂಬಗಳು ಬೀದಿಗೆ ಬಂದಿವೆ. ಕೂಡಲೆ ಸಕರ್ಾರ ಅವರ ಸಮಸ್ಯೆಗೆ ಸ್ಫಂಧಿಸಿ ಕುಟುಂಬಕ್ಕೆ ಪರಿಹಾರ ನೀಡಬೇಕು. ಅವರ ಕುಟುಂಬದವರನ್ನು ಮುಖ್ಯಮಂತ್ರಿಗಳು ಸ್ವತಃ ಬೇಟಿ ಮಾಡಬೇಕು. ಆ ಕುಟುಂಬದ ನಿರ್ವಹಣೆಯನ್ನು ನೋಡಿಕೊಳ್ಳಲು ಸಕರ್ಾರವೇ ಬದ್ಧರಾಗಬೇಕು ಎಂದು ಆಗ್ರಹಿಸಿದರು. 

ಇದೇ ರೀತಿ ನಿರ್ಲಕ್ಷ್ಯ ದೋರಣೆ ಕಂಡು ಬಂದರೆ ಒಕ್ಕೂಟವು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಸಂಘಟನೆಯ ರಾಜ್ಯ ಜಂಟಿ ಕಾರ್ಯದಶರ್ಿ ಭರತ ಕೋಳಿ, ಎಸ್.ವ್ಹಿ. ಕನ್ನೊಳ್ಳಿ, ಭಾರತಿ ಭುಯ್ಯಾರ, ಭಾರತಿ ಟಂಕಸಾಲಿ, ಮಂಜುಳಾ ಹಿಪ್ಪರಗಿ, ವಕೀಲರಾದ ಶ್ರಿಶೈಲ ಸಜ್ಜನ ಮಾತನಾಡಿದರು.

ಈ ಸಂದರ್ಭದಲ್ಲಿ ಬಸವರಾಜ ಬಸರಕೋಡ, ಅಮೋಘ ತಳವಾರ, ಅನೀಲ ಎಸ್.ಕನ್ನೊಳ್ಳಿ, ಮಲ್ಲು ಮಡಿವಾಳರ, ಪರಶುರಾಮ ತಳವಾರ, ಎಲ್ಲಪ್ಪ ವಾಲಿಕಾರ, ಸತೀಶ ರೂಢಗಿ, ಪಿ.ಬಿ.ಉಪ್ಪಾರ, ರಾಜೇಂದ್ರ ಉಪ್ಪಾರ, ಎಸ್.ಆರ್.ಹೊಸಮನಿ, ಲಕ್ಷ್ಮಣ ಉಪ್ಪಾರ, ಪರಶುರಾಮ ಅಗಸರ, ಎಸ್.ಎಚ್.ಸನದಿ, ರೇಣುಕಾ ಮನ್ನಿಕೇರಿ, ಲಲಿತಾ ಎ.ಪರಂಗಿ ಹಾಗೂ ಇನ್ನಿತರರು  ಉಪಸ್ಥಿತರಿದ್ದರು.