ಲೋಕದರ್ಶನ ವರದಿ
ವಿಜಯಪುರ 11:ಮಹಾನಗರದ ಕನಕದಾಸ ಬಡಾವಣೆಯಲ್ಲಿರುವ ಮನಗೂಳಿ ರಸ್ತೆಯಿಂದ ಜಿಲ್ಲಾ ಪಂಚಾಯತಿ ಮತ್ತು ತಹಶೀಲ್ದಾರ ಆಫೀಸಿಗೆ ಹೋಗುವ ಕೂಡು ರಸ್ತೆಗೆ ಸಂತ ಶ್ರೇಷ್ಠ ಕನಕದಾಸರ ನಾಮಕರಣ ಮತ್ತು ಪುತ್ಥಳಿ ನಿಮರ್ಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಜಿಲ್ಲಾ ಕುರುಬರ ಹೋರಾಟ ಸಮಿತಿ ಪದಾಧಿಕಾರಿಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಬಿದರಿ ಮಾತನಾಡಿ, ಮಹಾನಗರದಲ್ಲಿರುವ ಕನಕದಾಸ ಬಡಾವಣೆಯು ಸರಿಸುಮಾರು 25 ವರ್ಷಗಳ ಹಿಂದೆ ಈ ನಗರವು ನಿಮರ್ಾಣವಾಗಿದ್ದು ಇರುತ್ತದೆ. ಜಗತ್ ಕಂಡ ಸಂತರಲ್ಲಿ ಕನದಾಸರು ಒಬ್ಬರೂ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಹಾಗೆಯೇ ಇದೆ ಬಡಾವಣೆಯ ಪ್ರಮುಖ ರಸ್ತೆಯಾದ ಮನಗೂಳಿ ರಸ್ತೆಯಿಂದ ಜಿಲ್ಲಾ ಪಂಚಾಯತಿಗೆ ಮತ್ತು ತಹಶೀಲ್ದಾರ ಆಫೀಸಿಗೆ ಹೋಗುವ ಕೂಡು ರಸ್ತೆಗೆ ಸಂತ ಕನಕದಾಸರ ರಸ್ತೆಯೆಂದು ನಾಮಕರಣ ಮಾಡಬೇಕೆಂದು ಮತ್ತು ಅದೇ ಕೂಡು ರಸ್ತೆಯಲ್ಲಿ ಸಕರ್ಾರದ ವತಿಯಿಂದ ಕನಕದಾಸರ ಪುತ್ಥಳಿಯನ್ನು ನಿಮರ್ಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ರಾಜು ಕಂಬಾಗಿ, ಸದಾಶಿವ ಪೂಜಾರಿ, ಕಾಮಣ್ಣ ಗಂಗನಳ್ಳಿ, ಮೋಹನ ದಳವಾಯಿ, ಮಲ್ಲಣ್ಣ ಬಿದರಿ, ಬೀರಪ್ಪ ಪೂಜಾರಿ, ಮಹೇಶ ಪಿಂಕಿ, ಸಂಗಮೇಶ ಕೇಸಾಪುರ, ರವಿಕಿರಣ ಉತ್ನಾಳ, ಸಿದ್ರಾಮ ಕ್ಯಾತನ್ನಣ್ಣವರ, ಮನು ಬಾವಿಕಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.