ಲೋಕದರ್ಶನ ವರದಿ
ಕಾರವಾರ 05: ನಗರದ ಕೆಎಚ್ಬಿ ಹೊಸ ಬಡಾವಣೆಯ ಒಳಭಾಗದ ರಸ್ತೆಗಳನ್ನು ಕೂಡ ಕಾಂಕ್ರೀಟ್ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಶಾಸಕಿ ರೂಪಾಲಿ ನಾಯ್ಕ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ಸಮೀಪದವರೆಗಿನ ರಸ್ತೆ (ಎ 16) ಹಾಗೂ ನೀರಿನ ಟ್ಯಾಂಕ್ವರೆಗಿನ ರಸ್ತೆ (ಎ 23) ಕಾಮಗಾರಿ ಮಾಡಲಾಗಿದೆ. ಅಲ್ಲಿಂದ ಮುಂದುವರಿಸುವ ಬಗ್ಗೆ ನಗರಸಭೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇಲ್ಲಿ ಮಳೆಗಾಲದಲ್ಲಿ ನೀರು ನಿಂತು ಸಂಚರಿಸಲು ಕಷ್ಟವಾಗಲಿದೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ರೂಪಾಲಿ ನಾಯ್ಕ ಬಡಾವಣೆಯ ಸಮಸ್ಯೆ ಗಮನಕ್ಕೆ ಬಂದಿದೆ. ಮಳೆಗಾಲಕ್ಕೂ ಮೊದಲೇ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗಜಾನನ, ಸ್ಥಳೀಯರಾದ ರಾಜೇಶ್ ನಾಯ್ಕ, ಮಂಗೇಶ ಆರ್.ಭಟ್, ಪ್ರಶಾಂತ ನಾಯ್ಕ, ಜಂಬೋ ಮೇಸ್ತ, ನಾರಾಯಣ ಆಚಾರಿ, ಸುರೇಶ ಗಾಂವಕರ, ಪರಶುರಾಮ ನಾಯ್ಕ, ಬಾಲರಾಜ ನಾಡರ, ಹೈದರ್ ಶರೀಫ್, ಮಂಜ ಶೇಟ್ ಮೊದಲಾದವರು ಇದ್ದರು