ಬ್ಯಾಡಗಿ ರೈಲ್ವೆ ನಿಲ್ದಾಣದಲ್ಲಿ ಎಲ್ಲ ರೈಲುಗಳು ನಿಲುಗಡೆಗೆ ಕೇಂದ್ರ ಸಚಿವರಿಗೆ ಮನವಿ

Request to Union Minister to stop all trains at Byadgi railway station

ಬ್ಯಾಡಗಿ ರೈಲ್ವೆ ನಿಲ್ದಾಣದಲ್ಲಿ ಎಲ್ಲ ರೈಲುಗಳು ನಿಲುಗಡೆಗೆ ಕೇಂದ್ರ ಸಚಿವರಿಗೆ ಮನವಿ 

ಬ್ಯಾಡಗಿ 06: ರೈಲ್ವೆ ನಿಲ್ದಾಣದಲ್ಲಿ ಯಶವಂತಪುರ ವಾಸ್ಕೋ. ರಾಣಿಚೆನ್ನಮ್ಮ. ದಾದರ.  ಹಾಗೂ ಜನ ಶತಾಬ್ದಿ ವೇಗದ ರೈಲ್ವೆಗಳ ನಿಲುಗಡೆ ಮಾಡುವಂತೆ ಕೇಂದ್ರ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಬ್ಯಾಡಗಿ ತಾಲೂಕ ರೈಲ್ವೆ ಸುಧಾರಣಾ ಸಮಿತಿಯ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ನೀಡಿದರು. 

ಪಟ್ಟಣದಲ್ಲಿ ಇಂದು ನೂತನವಾಗಿ ಜಿಎಂ ಸಿದ್ದೇಶ್ ಪತ್ತಿನ ಸಹಕಾರಿ ಸಂಘ ನೂತನ ಘಟಕ ಉದ್ಘಾಟನೆಗೆ ಆಗಮಿಸಿದ್ದ ಅವರಿಗೆ ರೈಲ್ವೆ ಸಮಿತಿಯ ಸದಸ್ಯ ಮಾಲತೇಶ್ ಅರಳಿಮಟ್ಟಿ ಮನವಿ ಪತ್ರವನ್ನು ನೀಡುವ ಮೂಲಕ ಮಾತನಾಡಿದವರು ಬ್ಯಾಡಗಿ ಪಟ್ಟಣವು ಒಣ ಮೆಣಸಿನ ಕಾಯಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ ಇಲ್ಲಿ ಹಾವೇರಿ ಧಾರವಾಡ. ಗದಗ. ಬಿಜಾಪುರ. ಬೀದರ. ಗುಲ್ಬರ್ಗ ಬಳ್ಳಾರಿ. ರಾಯಚೂರ. ಹಾಗೂ ಆಂಧ್ರ ಪ್ರದೇಶದ ಹಲವು ಭಾಗಗಳಿಂದ ರೈತರು ಮೆಣಸಿನಕಾಯಿ ಮಾರಾಟ ಮಾಡಲು ಬರುತ್ತಾರೆ ಇದೇ ರೀತಿ ದೇಶದ ವಿವಿಧ ರಾಜ್ಯಗಳಿಂದ ಮೆಣಸಿನಕಾಯಿ ಖರೀದಿಸಲು ವ್ಯಾಪಾರಿಗಳು ಸಹ ಬ್ಯಾಡಗಿ ಮಾರುಕಟ್ಟೆಗೆ ಬರುತ್ತಾರೆ ವರ್ಷಕ್ಕೆ 3500 ಕೋಟಿ ರೂಪಾಯಿಗಳ ವಹಿವಾಟು ಕೇವಲ ಈ ಮೆಣಸಿನಕಾಯಿಯಿಂದ ಮಾತ್ರ ಬ್ಯಾಡಗಿಯಿಂದ ನಡೆಯುತ್ತದೆ ಲಕ್ಷಾಂತರ ರೈತರು ಮೆಣಸಿನಕಾಯಿ ತೆಗೆದುಕೊಂಡು ಬ್ಯಾಡಗಿ ಪಟ್ಟಣಕ್ಕೆ ಬರುತ್ತಾರೆ ಇವರೆಲ್ಲ ತಮ್ಮ ಊರಿಗೆ ಮರಳಲು ರೈಲನ್ನು ಅವಲಂಬಿಸಿರುತ್ತಾರೆ ತಮ್ಮ ಮೂಲಕ ಬ್ಯಾಡಗಿ ತಾಲೂಕ ರೈಲ್ವೆ ಪ್ರಯಾಣಿಕರಿಗೆ ಹಾಗೂ ವ್ಯಾಪಾರಕ್ಕೆ ಬರುವ ರೈತರಿಗೆ ಅನಕೂಲ ಆಗುವಂತೆ ತಾವು ಹೆಚ್ಚಿನ ರೈಲುಗಳನ್ನು ಬ್ಯಾಡಗಿ ನಿಲ್ದಾಣಕ್ಕೆ ನಿಲ್ಲಿಸುವಂತೆ ಕೊರಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರಾದ ಬಸವರಾಜ್ ಪಾಟೀಲ. ಬಸವರಾಜ ಹಂಜಿ.ಬಸವರಾಜ್ ಸುಂಕಾಪುರ. ಸುರೇಶ್‌ಗೌಡರ. ಮಹಾದೇವಪ್ಪ ಕೆಂಚನಗೌಡ್ರು .ಶಿವರಾಜ್ ಚೂರಿ .ಪರಶುರಾಮ ಮೇಲಗಿರಿ ಉಪಸ್ಥಿತರಿದ್ದರು.