ಲೋಕದರ್ಶನ ವರದಿ
ರಾಣೇಬೆನ್ನೂರ .27: ಬಡತನದಿಂದ ಕೂಡಿರುವ ಈ ಭಾರತ ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಪೇಡಂಭೂತದಂತೆ ಕಾಡುತ್ತಿದ್ದು, ಇದರ ನಿವಾರಣೆಗಾಗಿ ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ಸಹ ನಿರುದ್ಯೋಗ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಅದಕ್ಕಾಗಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಓದಿದ ವಿದ್ಯಾಥರ್ಿಗಳು ಸಿಎ, ಸಿಎಂಎ, ಸಿಪಿಟಿ, ಸಿಎಟಿ ಸೇರಿದಂತೆ ಮತ್ತಿತರ ಕೋಸರ್್ಗಳನ್ನು ಮಾಡುವುದರಿಂದ ಉದ್ಯೋಗಸ್ಥರಾಗಬಹುದು ಎಂದು ದಾವಣಗೇರೆ ಕೇರ್ ಅಕಾಡೆಮಿಯ ಮುಖ್ಯಸ್ಥ ಬಿ.ವಿ.ರಮಣಕುಮಾರ ಹೇಳಿದರು.
ಅವರು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇಂಜನೀಯರಿಂಗ್ ಪದವಿ ಮುಗಿಸಿದ ಬಹಳಷ್ಟು ವಿದ್ಯಾಥರ್ಿಗಳು ಉದ್ಯೋಗ ಅರಸಿ ಬೇರೆ ರಾಜ್ಯ ಹಾಗೂ ವಿದೇಶಗಳತ್ತ ದಾಪುಗಾಲು ಹಾಕುತ್ತಿದ್ದಾರೆ. ಆದರೆ ಸಿಎ, ಸಿಪಿಟಿ, ಐಪಿಸಿಸಿ, ಐಸಿಡಬ್ಲ್ಯೂಎ, ಸಿಎಟಿ ಮುಂತಾದ ತರಗತಿಗಳನ್ನು ಮುಗಿಸಿದವರು ಯಾರೂ ಸಹ ನಿರುದ್ಯೋಗಿಗಳಾಗಿ ಇಲ್ಲ ಎಂದವರು ವಿವರಿಸಿದರು.
ಕಡಿಮೆ ವೆಚ್ಚದಲ್ಲಿ ಹಾಗೂ ರಿಯಾಯಿತಿ ದರದಲ್ಲಿ ದಾವಣಗೇರಿಯ ಕೇರ್ ಅಕಾಡೆಮಿಯವರು ಈ ಸುಲಭ ರೀತಿಯ ತರಗತಿಗಳನ್ನು ಕೈಗೊಂಡಿದ್ದು, ತಾಲೂಕಿನ ವಿದ್ಯಾಥರ್ಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೋ: 7676761186 ಸಂಪಕರ್ಿಸಬಹುದೆಂದರು. ಜಿ.ಜಿ.ಹೊಟ್ಟಿಗೌಡ್ರ, ಪ್ರತೀಕ್ಷಾ, ಪ್ರಭು ಕೋಡದ, ಸುದೀರ್ ಕುರುವತ್ತಿ, ರಾಹುಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.