ಲೋಕದರ್ಶನ ವರದಿ
ವಿಜಯಪುರ, 18: ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳನ್ನು ಅಮಾನತ್ತಿನಲ್ಲಿಟ್ಟು ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಆಗ್ರಹಿಸಿ ಅಖಂಡ ಕನರ್ಾಟಕ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ರಾಜ್ಯ ಪ್ರಧಾನ ಕಾರ್ಯದಶರ್ಿ ಅರವಿಂದ ಕುಲಕಣರ್ಿ ಮಾತನಾಡಿ, ರಾಜ್ಯದ ಜನರು ಶಾಸಕರುಗಳನ್ನು ತಮ್ಮ ಸೇವೆ ಮಾಡಲು ಆಯ್ಕೆ ಮಾಡಿದ್ದಾರೆ. ಅದನ್ನು ಅರಿತು ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ರೆಸಾಟರ್್ ರಾಜಕೀಯ ಮಾಡುವದು ಸರಿಯಲ್ಲ. ರಾಜ್ಯದಲ್ಲಿರುವ ಆಡಳಿತ ಪಕ್ಷಗಳು, ಹಾಗೂ ವಿರೋಧ ಪಕ್ಷ ಚುನಾವಣೆಗಳಲ್ಲಿ ಜನತೆಗೆ ನೀಡಿರುವ ಭರವಸೆಗಳನ್ನು ಮರೆತು ಕೇವಲ ಅಧಿಕಾರಿಕ್ಕಾಗಿ ಕೇವಲ ರೇಸಾಟರ್್ ರಾಜಕಾರಣ ಮಾಡುತ್ತಿರುವ ಕಾರಣದಿಂದ ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳನ್ನು ಉದ್ಭವಿಸುತ್ತಿವೆ ಎಂದರು. ಇದನ್ನರಿತು ಜನಪ್ರತಿನಿಧಿಗಳು ರೈತರ ಮತ್ತು ಜನಸಾಮಾನ್ಯರ ಸೇವೆ ಮಾಡಬೇಕು. ರಾಜ್ಯದಲ್ಲಿ ಕಳೆದ 4-5 ವರ್ಷಗಳಿಂದ ಭೀಕರ ಬರಗಾಲ ಆವರಿಸಿದ ಪರಿಣಾಮ ಜನ, ಜಾನುವಾರುಗಳು, ವನ್ಯ ಜೀವಿಗಳು, ಜಲಚರಗಳಿಗೆ ನೀರಿಲ್ಲದೇ ಪರದಾಡುವಂತಾಗಿದೆ ಎಂದರು. ರೈತರ ಹಾಗೂ ಜನಸಾಮಾನ್ಯರ ಹಿತ ಕಾಪಾಡುವ ಸಲುವಾಗಿ ಮತ ಹಾಕಿ ಆಯ್ಕೆ ಮಾಡಿ ಕಳುಹಿಸಿದರೆ ಇವರು ಕೇವಲ ತಮ್ಮ ಸ್ವಾರ್ಥಕ್ಕೋಸ್ಕರ ರೇಸಾಟರ್್ ರಾಜಕಾರಣ ಮಾಡುತ್ತ, ಒಬ್ಬರನ್ನೊಬ್ಬರು ಕೊಂಡುಕೊಳ್ಳುತ್ತ, ಒಂದು ದೆಹಲಿ ರೇಸಾಟರ್್ಗೆ ತೆರಳುವುದು, ಇನ್ನೊಂದು ತಂಡ ಮುಂಬೈ ರೆಸಾಟರ್್ಗೆ ತೆರಳುವುದು ಈ ರೀತಿ ಮಾಡುವಂತಹ ನಮ್ಮ ರಾಜ್ಯದ ಚುನಾಯಿತ ಪ್ರತಿನಿಧಿಗಳು, ಮತ ಹಾಕಿದ ರೈತರು ಹಾಗೂ ಜನಸಾಮಾನ್ಯರು ಹುಚ್ಚರು ಎಂದು ತಿಳಿದುಕೊಂಡಿದ್ದಾರೆ. ಸಮ್ಮಿಶ್ರ ಸರಕಾರ ಹಾಗೂ ವಿರೋಧ ಪಕ್ಷದಿಗಳ ಕಾರ್ಯವೈಖರಿಯಿಂದ ರಾಜ್ಯದ ಜನರು ರೋಷಿ ಹೋಗಿದ್ದಾರೆ ಎಂದರು.
ಸಂಘದ ರಾಜ್ಯ ಕಾಯರ್ಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ಚುನಾಯಿತ ಪ್ರತಿನಿಧಿಗಳಿಗೆ ಕೇವಲ ಅಧಿಕಾರ, ಕುಚರ್ಿ, ಹಣದ ವ್ಯಾಮೋಹ ಹೆಚ್ಚಾಗಿದೆ ಹೊರತು, ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ರೈತರು ಹಾಗೂ ಜನಸಾಮಾನ್ಯರ ಪರಿಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎನ್ನುವುದು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು. ಸಂಘದ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಜಿಲ್ಲಾ ಸಂಘಟನಾ ಕಾರ್ಯದಶರ್ಿ ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಡಾ.ಎಂ. ರಾಮಚಂದ್ರ, ಚಂದ್ರಾಮ ತೆಗ್ಗಿ, ಯಲ್ಲಪ್ಪ ಮುದಗಲ್, ಮಾಚಪ್ಪ ಹೋತರ್ಿ, ಶಿವಪ್ಪ ಮಂಗೊಂಡ, ರಾಮಪ್ಪ ವಾಲಿಕಾರ, ಬಸವರಾಜ ಹೆಬ್ಬಾಳ, ಕೃಷ್ಣಪ್ಪ ಬೊಮ್ಮರಡ್ಡಿ, ಅಜರ್ುನ ಹಾವಗೊಂಡ ಇನ್ನಿತರರು ಉಪಸ್ಥಿತರಿದ್ದರು.