ಧಾರವಾಡ 23: ಸಿ.ಬಿ.ಟಿ.ಯಿಂದ ಸಂಪಿಗೆ ನಗರ ಬನಶ್ರೀನಗರ, ಶಾಂತಿನಿಕೇತನ ಟಿಮರ್ಿನ್ಸ್ವರೆಗೆ ಬಸ್ಮ್ಸಗಳು ನಿಯಮಿತ ಸಮಯಕ್ಕೆ ಚಲಿಸದೇ ಇರುವದರಿಂದ ಬನಶ್ರೀನಗರ ಕೆ.ಎಚ್.ಬಿ. ಆದರ್ಶನಗರ, ಸಂಪಿಗೆನಗರ ವಿಕಾಸನಗರ, ದೊಡ್ಡನಾಯಕನಕೊಪ್ಪ ಬಡಾವಣೆಗಳ ನಿವಾಸಿಗಳು ಶಾಂತಿಯುತ ಪ್ರತಿಭಟನೆ ನಡೆಸಿ ವಾ.ಕ.ರ.ಸಾ. ಸಂಸ್ಥೆ, ಧಾರವಾಡ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಅಪರ್ಿಸಿದರು.
ಮನವಿಯಲ್ಲಿ ಈ ಹಿಂದೆ ಸುಮಾರು 6 ಬಾರಿ ದೊಡ್ಡನಾಯಕನಕೊಪ್ಪದ ಬಡಾವಣೆಗಳಿಂದ ಹಾಗೂ ಬಡಾವಣೆಗಳ ಒಕ್ಕೂಟದಿಂದ ನಿಯಮಿತ/ಶಾಲಾ ಮತ್ತು ಕಾಲೇಜು ವಿದ್ಯಾಥರ್ಿಗಳ ವೇಳಾಪಟ್ಟಿಗೆ ಅನುಕೂಲವಾಗುವಂತೆ ಬಸ್ಸ ಸೌಕರ್ಯವದಗಿಸುವ ಕುರಿತು ಲಿಖಿತವಾಗಿ ಮನವಿಯನ್ನು ನೀಡಲಾಗಿತ್ತು. ಇಲ್ಲಿಯವರೆಗೂ ಸಂಬಂಧಪಟ್ಟ ಇಲಾಖೆಯಿಂದ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆತಿಲ್ಲ.
ದೊಡ್ಡನಾಯಕನಕೊಪ್ಪ ಧಾರವಾಡದ ಪ್ರಮುಖ ಬಡಾಣೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ನಗರ ಸಾರಿಗೆ ಸೇವೆ ತುಂಬಾ ವ್ಯವಸ್ಥಿತವಾಗಿತ್ತು. ಆದರೆ ಇತ್ತೀಚಿಗೆ ಅದು ಸರಿಯಾಗಿ ಸಂಚರಿಸುತ್ತಿಲ್ಲ. ಮೇಲಿಂದ ಮೇಲೆ 25 ಬಸ್ಸುಗಳ ಶೆಡ್ಯೂಲಗಳನ್ನು ಬದಲಾಯಿಸುತ್ತಿವುದು ಸಾರ್ವಜನಿಕರಿಗೆ/ವಿದ್ಯಾಥರ್ಿಗಳಿಗೆ ತೊಂದರೆಯಾಗಿದೆ. ಈ ಹಿಂದಿನ ಬಸ್ಸುಗಳ ಶೆಡ್ಯೂಲಗಳನ್ನು ಸಂಚಾರ ನಿಯಂತ್ರಣಧಿಕಾರಿಗಳು ಅನೇಕ ನೆಪವೊಡ್ಡಿ ಬಸ್ಸುಗಳ ಸಂಚಾರ ರದ್ದು ಪಡಿಸಿರುತ್ತಾರೆ. ಇತ್ತಿಚಿಗೆ ಬಡಾವಣೆ ವಿಸ್ತಾರಗೊಂಡಿದೆ. ನಗರ ಸಾರಿಗೆ ಸೇವೆಯ ಬೇಡಿಕೆ ಹೆಚ್ಚಾಗಿದೆ. ಶಾಲಾ ಕಾಲೇಜುಗಳಿಗೆ ವಿದ್ಯಾಥರ್ಿಗಳು, ಸಕರ್ಾರಿ ನೌಕರರು, ಕಾಮರ್ಿಕರು, ಪ್ರಯಾಣಿಸುತ್ತಾರೆ. ಇಲ್ಲಿನ ಸಾರ್ವಜನಿಕರು ತಮ್ಮ ನಗರ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿರುತ್ತಾರೆ.
ಇಲ್ಲಿ 2 ಐಟಿ.ಐ. ಹಾಗೂ 2 ಪದವಿ ಪೂರ್ವ ಕಾಲೇಜುಗಳು ಸೇರಿದಂತೆ 2 ಪ್ರಾಥಮಿಕ ಮಾದ್ಯಮಿಕ ಆಂಗ್ಲಮಾಧ್ಯಮ ಶಾಲೆಗಳಿವೆ. ಎಸ್.ಸಿ/ಎಸ್.ಟಿ. ವಿದ್ಯಾಥರ್ಿ/ವಿದ್ಯಾಥರ್ಿನಿಯರ ವಸತಿ ನಿಲಯಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕುಟುಂಬ ಯೋಜನಾ ಆಸ್ಪತ್ರೆ ಕೂಡಾ ಇದೆ. ಪರಸ್ಥಳಗಳಿಂದ ಅನೇಕ ಗ್ರಾಮೀಣ ಜನರು ಆಸ್ಪತ್ರೆಗೆ ಮತ್ತು ವಿದ್ಯಾಥರ್ಿಗಳು ಸಂಪಿಗೆ ನಗರದಲ್ಲಿಯೇ ಶಾಲಾ/ಕಾಲೇಜುಗಳಿಗೆ ಬರುತ್ತಾರೆ.
ಬಸ್ಸ ಶೆಡ್ಯೂಲ್ಗಳ ಬದಲಾವಣೆಯಿಂದ ವಿದ್ಯಾಥರ್ಿಗಳು ಬೇರೆ ಬೇರೆ ಬಡಾವಣೆಗಳಿಗೆ ಹೋಗಿ ಬಸ್ಸಗಳ ಮುಖಾಂತರ ಶಾಲಾ ಕಾಲೇಜುಗಳಿಗೆ ಹೋಗುಂತಹ/ಬರುವಂತಹ ಕೆಟ್ಟ ಪರಿಸ್ಥಿತಿಗಳು ನಿಮರ್ಾಣವಾಗಿವೆ. ದೊಡ್ಡನಾಯಕನಕೊಪ್ಪದ ಸಮೀಪದ ಪ್ರಜೆಂಟೇಶನ್ ಕಾನ್ವೆಂಟ್ ಶಾಲೆಗೆ ಸುಮಾರು 200ಕ್ಕೂ ಹೆಚ್ಚು ವಿದ್ಯಾಥರ್ಿನಿಯರು ಹೋಗುತ್ತಿದ್ದು, ಅವರಿಗೆ ಸರಿಯಾದ ಸಮಯಕ್ಕೆ ಬಸ್ಸುಗಳ ಬರದೇ ಇರುವದರಿಂದ ನಿಯಮಿತ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಶನಿವಾರ ಬೆಳಗಿನಜಾವ ಬಸ್ಸ ಇಲ್ಲದೇ ಇರುವದರಿಂದ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾಥರ್ಿನಿಯರು ಸುಮಾರು 3 ಕಿ.ಮೀ. ನಡೆದುಕೊಂಡು ಶಾಲೆಗೆ ಹೋಗಬೇಕಾಗಿದೆ.
ಕಾರಣ ತಾವುಗಳು ಸಂಪಿಗೆನಗರ, ಬೇಂದ್ರೆನಗರ, ಬನಶ್ರೀನಗರ, ಕೆ.ಎಚ್.ಬಿ. ಕಾಲೋನಿ ವಿಕಾಸನಗರ, ಹಾಗು ದೊಡ್ಡನಾಯಕನಕೊಪ್ಪ ಒಳಗೊಂಡ ಹಲವು ಬಡಾವಣೆಗಳಲ್ಲಿ ಸರಿಯಾದ ಸಮಯಕ್ಕೆ ಈ ಹಿಂದೆ ನೀಡಿದ ಮನವಿಗಳಲ್ಲಿನ ವೇಳಾ ಪಟ್ಟಿಗೆ ಅನುಸಾರವಾಗಿ ಬಸ್ಸ ಸಂಚಾರವನ್ನು ಒದಗಿಸಬೇಕು ಎಂದು ಕೋರಲಾಗಿದ್ದು, ಕೂಡಲೇ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆಯನ್ನು ಮಾಡಲಾಗುವದೆಂದು ಎಚ್ಚರಿಸಲಾಗಿದೆ.