ಲೋಕದರ್ಶನ ವರದಿ
ಕೊಪ್ಪಳ 11: ವಿವಿಧೋದ್ದೇಶ ಮತ್ತು ಗ್ರಾಮೀಣ ಪುರ್ನವಸತಿ ಮತ್ತು ನಗರ ಪುರ್ನವಸತಿ ಕಾರ್ಯಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಜನಸಂಖ್ಯೆ ಶೇ.75% ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವ ಜನಸಂಖ್ಯೆಯ ಶೇ 5% ರಿಂದ 6 ರಷ್ಟು ವಿಕಲಚೇತನರು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅವರ ಆಥರ್ಿಕ, ಸಾಮಾಜಿಕ, ವೈದ್ಯಕೀಯ ಪುರ್ನವಸತಿಗಾಗಿ 2006-07 ರಲ್ಲಿ ಸಕರ್ಾರ ಮಹತ್ವಕಾಂಕ್ಷಿ ಯೋಜನೆಯಾದ ಗ್ರಾಮೀಣ ಪುರ್ನವಸತಿ ಯೋಜನೆಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 176 ತಾಲೂಕಿಗೆ 5628 ಗ್ರಾಮ ಪಂಚಾಯತಿಗಳಿಗೆ ಅನುಕ್ರಮವಾಗಿ ಪದವಿಧರ ವಿಕಲಚೇತನರನ್ನು (ಎಂ.ಆರ್.ಡಬ್ಲೂ) ತಾಲೂಕು ಪಂಚಾಯತಿ ವ್ಯಾಪ್ತಿಗೆ ಮತ್ತು ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿಕಲಚೇತನರನ್ನು (ವಿ.ಆರ್.ಡಬ್ಲೂ) ಆಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಗೌರವಧನ ಆಧಾರದ ಮೇಲೆ ನೇಮಕ ಮಾಡಿತ್ತು.
2011 ರ ಜನಗಣತಿಯಂತೆ ರಾಜ್ಯದಲ್ಲಿ 13,29,204 ವಿಕಲಚೇತನರ ಕುಟುಂಬಗಳಿದ್ದು ತಾಲೂಕಿಗೆ 5-6 ಸಾವಿರ ವಿಕಲಚೇತನರು ಇರುತ್ತಾರೆ. ಇವರು ಅವಲಂಬಿತ ಕುಟುಂಬಗಳು ಸೇರಿ ತಾಲೂಕಿನ 18-20 ಸಾವಿರ ಜನಸಂಖ್ಯೆ ಇದ್ದು ಇವರಿಗಾಗಿ ಕತ್ರ್ಯವ್ಯ ನಿರ್ವಹಿಸುತ್ತಿರುವ ಎಂ.ಆರ್.ಡಬ್ಲೂ, ವಿ.ಆರ್.ಡಬ್ಲೂ ಗಳಿಗೆ ಹಿಂದಿನ ಜೀವನದ ಸ್ಥಿಗಣತಿಗೆ ಅನುಗುಣವಾಗಿ ಎಂ.ಆರ್.ಡಬ್ಲೂ ಮತ್ತು ವಿ.ಆರ್.ಡಬ್ಲೂ ಗಳವರಿಗೆ ಉದ್ಯೋಗ ಭದ್ರತೆ ಇರುವುದಿಲ್ಲ ಈ ಯೋಜನೆಯಿಂದ ಕಳೆದ 10-11 ವರ್ಷಗಳಿಂದ ಕತ್ರ್ಯವ್ಯ ನಿರ್ವಹಿಸುತ್ತಿದ್ದು ಬಹು ಜನಸಂಖ್ಯೆಯ ಪುರ್ನವಸತಿ ಜವಾಬ್ಧಾರಿಯು ತಾಲೂಕಿನ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಾವುಗಳೇ ಕತ್ರ್ಯವ್ಯ ನಿರ್ವಹಿಸುತ್ತಿದ್ದೇವೆ. ಆದ್ದರಿಂದ ಸ್ಥಳಿಯ ಇಲಾಖೆಯ ಸಿಬ್ಬಂದಿ ಇಲ್ಲದೆ ಇರುವುದರಿಂದ ಹಾಲಿ ಕತ್ರ್ಯವ್ಯ ನಿರ್ವಹಿಸುತ್ತಿರುವ ನಮ್ಮನ್ನು ಎಂ.ಆರ್.ಡಬ್ಲೂರನ್ನು ತಾಲೂಕ ಅಂಗವಿಕಲ ಕಲ್ಯಾಣ ಅಧಿಕಾರಿಯಾಗಿ ಮತ್ತು ವಿ.ಆರ್.ಡಬ್ಲೂಗಳನ್ನು ವಿಕಲಚೇತನರ ಅಭಿವೃದ್ಧಿ ಸಹಾಯಕರನ್ನಾಗಿ ಹುದ್ದೆಯನ್ನು ಸೃಷ್ಠಿ ಸಿ ವಿವಿಧೋದ್ದೇಶ ಗ್ರಾಮೀಣ ಪುರ್ನವಸತಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೊಳಿಸಿ ಖಾಯಂಗೊಳಿಸಬೇಕೆಂದು ತಮ್ಮಲ್ಲಿ ಮನವಿ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಂಜುನಾಥ ಹೊಸಕೇರಾ, ಗೌರವ ಅಧ್ಯಕ್ಷ ಮಲ್ಲಿಕಾಜರ್ುನ ವೈ. ಪೂಜಾರ, ವಿ.ಎಂ ಒಕ್ಕೂಟ ಜಿಲ್ಲಾಧ್ಯಕ್ಷ ಆದಪ್ಪ ಮಾಲಿಪಾಟೀಲ, ಎಂ.ಆರ್.ಡಬ್ಲೂಗಳಾದ ಬಸವನಗೌಡ, ಚಂದ್ರಶೇಖರ ಹಿರೇಮನಿ, ಮಂಜುಳಾ, ಜಯಶ್ರೀ, ಸಿದ್ದಲಿಂಯ್ಯ ಅಳವಂಡಿ, ಸದಸ್ಯರಾದ ಯಲ್ಲಪ್ಪ ಚಳಗೇರಾ, ರೇಣುಕಾ, ಹನುಮಾಕ್ಷಿ, ಶರಣಯ್ಯ, ದೇವರಾಜ, ಸ್ವಾಮಿ ಹಿರೇಮನ್ನಾಪೂರ, ತಿಮ್ಮಣ್ಣ ಸೇರಿದಂತೆ ಇತರರು ಇದ್ದರು.