ಮೇಲ್ಸೇತುವೆ ನಿಮರ್ಾಣಕ್ಕೆ ಆಗ್ರಹಿಸಿ ಮನವಿ

ಲೋಕದರ್ಶನವರದಿ

ರಾಣೇಬೆನ್ನೂರ ಮೇ6- ನಗರದ ದೇವರಗುಡ್ಡ ರಸ್ತೆಯ ಮಕ್ತಿಧಾಮದ ಹತ್ತಿರ ಹೊನ್ನಾಳಿ ಗದಗ ರಾಜ್ಯ ಹೆದ್ದಾರಿ ಬಳಿ ರೆಲ್ವೆ ಇಲಾಖೆಯು ನಿಮರ್ಾಣ ಮಾಡುತ್ತಿರುವ ಒಳ ಸೇತುವೆ ಅವ್ಶೆಜ್ಞಾನಿಕವಾಗಿದ್ದು, ಅದನ್ನು ಸ್ಥಗಿತಗೊಳಿಸಿ ಮೇಲ್ಸೇತುವೆ ನಿಮರ್ಾಣ ಮಾಡಬೇಕು ಎಂದು ಒತ್ತಾಯಿಸಿ, ಸೋಮವಾರ  ಸಾರ್ವಜನಿಕರು ಮತ್ತು ರೈತರು ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

    ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಗದೀಶ ಕೆರೂಡಿ ಮಾತನಾಡಿ, ರೇಲ್ವೆ ಇಲಾಖೆಯು ನಿಮರ್ಾಣ ಮಾಡುತ್ತಿರುವ ಒಳ ಸೇತುವೆ ಅವೈಜ್ಞಾನಿಕವಾಗಿದ್ದು, ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ, ಈ ಭಾಗದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಮಳೆಗಾಲದಲ್ಲಿ ನೀರು ಹೆಚ್ಚಾಗಿ ಹರಿಯುತ್ತಿದ್ದು, ನಿಮರ್ಾಣ ಮಾಡುತ್ತಿರುವ ಒಳ ಸೇತುವೆ ಬಳಿ ನೀರು ಸಂಗ್ರಹವಾಗುವ ಸಾಧ್ಯತೆಗಳು ಇವೆ, ಆ ಸಮಯದಲ್ಲಿ ಸಾರ್ವಜನಿಕರು ರಸ್ತೆ ದಾಟಲು ಸಾಧ್ಯವಾಗುವುದಿಲ್ಲ ಎಂದರು.

       ಆದಕಾರಣ ಒಳ ಸೇತುವೆ ಸ್ಥಗಿತಗೊಳಿಸಿ ಮೇಲ್ಸೇತುವೆ ನಿಮರ್ಾಣ ಮಾಡಬೇಕು,  ತಕ್ಷಣ ಕಾಮಗಾರಿ ಸ್ಥಗಿತಗೊಳಿಸದಿದ್ದಲ್ಲಿ ಮೇ.13 ರಂದು ವಿವಿಧ ಸಂಘಟನೆಗಳೊಂದಿಗೆ ಕಾಮಗಾರಿ ನಡೆಯುವ 200 ಮೀ. ಅಂತರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

      ಉಮೇಶ ಹೊನ್ನಾಳಿ, ಮಂಜುನಾಥ ಬಂಬಾಳಿ, ರವಿ ಕೆರೋಡಿ, ಮಾರುತಿ ಹಳ್ಳಿ, ಸುರೇಶ ಕೆರೂಡಿ, ಶಂಕ್ರಪ್ಪ ಮೂಕದುರಗಪ್ಪನವರ, ರಘುನಾಥ ಬಡಿಗೇರ, ಮಲ್ಲೇಶ ನಾಯಕ, ಬಿ.ಎಸ್.ಗೌಡರ, ವಾಸುದೇವ ಕಲ್ಲಮ್ಮನವರ, ಚನ್ನಬಸವಗೌಡ ಪಾಟೀಲ, ಲಿಂಗರಾಜ ಹೊನ್ನಾಳಿ ಸೇರಿದಂತೆ ಇತರರು ಇದ್ದರು.