ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಮನವಿ

ಮೂಡಲಗಿಯಲ್ಲಿ ಶುಕ್ರವಾರದಂದು ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪತ್ರಕರ್ತರು ಪ್ರೊಭೇಷನರಿ

ಮೂಡಲಗಿ 22: ವಾತರ್ಾ ಮತ್ತು ಪ್ರಸಾರ ಇಲಾಖೆಯಿಂದ ಮಾನ್ಯತೆ ಪಡೆಯದ ನಕಲಿ ಚಾನಲ್ಗಳ ವರದಿಗಾರರ ಹಾಗೂ ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೂಡಲಗಿಯ  ಪತ್ರಕರ್ತರು ಶುಕ್ರವಾರದಂದು ಪ್ರೊಭೇಷನರಿ ಡಿಎಸ್ಪಿ  ಪ್ರವೀಣ ಎಂ ಹಾಗೂ ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

    ಇತ್ತೀಚಿನ ದಿನಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ವಾತರ್ಾ ಮತ್ತು ಪ್ರಸಾರ ಇಲಾಖೆಯ ಮಾನ್ಯತೆ ಹೊಂದದ  ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ನ್ಯೂಸ್ ಚಾನಲ್ ನಿಮರ್ಿಸಿಕೊಂಡು  ಸಕರ್ಾರಿ ಅಧಿಕಾರಿಗಳನ್ನು, ನೌಕರರನ್ನು, ಅಂಗನವಾಡಿ ಕಾರ್ಯಕತರ್ೆಯರನ್ನು  ಅಲ್ಲದೇ ಸಾರ್ವಜನಿಕರನ್ನು ಬ್ಲ್ಯಾಕ್ ಮೇಲ್ ಮಾಡಿ ಅವರಿಂದ ಹಣ ಕಬಳಿಸುವ ಕಾರ್ಯದಲ್ಲಿ ತೊಡಗಿದು,್ದ ಇವರ ಉಪಟಳಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಅಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಪ್ರಾಮಾಣಿಕ ಪತ್ರಕರ್ತರು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ತಮ್ಮ ವಾಹನಗಳ ಮೇಲೆ ಪ್ರೆಸ್ ಎಂದು ಬರೆದುಕೊಂಡು  ಮಾಧ್ಯಮದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಕಾರ್ಯನಿರ್ವಹಿಸುತ್ತಿರುವ ಅಸಲಿ ಪತ್ರಕರ್ತರು ಮುಜುಗುರಕ್ಕೆ ಒಳಗಾಗುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್  ವರಿಷ್ಠಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಯ.ಯ.ಸುಲ್ತಾನಪೂರ, ಉಮೇಶ ಬೆಳಕೊಡ, ಶಿವಾನಂದ ಮುಧೋಳ, ಕೃಷ್ಣ ಗಿರೆನ್ನವರ, ಸುಧಾಕರ ಉಂದ್ರಿ, ಅಲ್ತಾಫ ಹವಲ್ದಾರ, ಸುಧೀರ ನಾಯರ್, ಸುಭಾಸ್ ಗೊಡ್ಯಾಗೋಳ, ಭಗವಂತ ಉಪ್ಪಾರ, ಮಲ್ಲು ಬೋಳನ್ನವರ, ರಾಜು ಮಗದುಮ್, ಸಚಿನ ಪತ್ತಾರ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್ ನ್ಯೂಸ್:   ವಾತರ್ಾ ಮತ್ತು ಪ್ರಸಾರ ಇಲಾಖೆಯ ಮಾನ್ಯತೆ ಹೊಂದದ  ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಎಂಬ ನ್ಯೂಸ್ ಚಾನಲ್ ನಿಮರ್ಿಸಿಕೊಂಡು  ಸಕರ್ಾರಿ ಅಧಿಕಾರಿಗಳನ್ನು, ಸಾರ್ವಜನಿಕರನ್ನು ಬ್ಲಾಕ್ ಮೇಲ್ ಮಾಡಿ ಅವರಿಂದ ಹಣ ಕಬಳಿಸುವ ಕಾರ್ಯದಲ್ಲಿ ತೊಡಗಿರುವ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಕಾರ್ಯನಿರತ ಪತ್ರಕರ್ತರು ರಾಷ್ಟ್ರೀಯ, ರಾಜ್ಯ ಸಂಘಟನೆಗಳಿಂದ ಅಥವಾ ತಾವು ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಗಳ ಕಾಯರ್ಾಲಯದಿಂದ  ಪಡೆದ ವರದಿಗಾರ ಎಂಬ ಮಾನ್ಯತಾ ಪತ್ರ ಮತ್ತು ಗುರುತಿನ ಚೀಟಿ ಹಾಗೂ ಯೂಟ್ಯೂಬ್ ಚಾನಲ್ ವರದಿಗಾರರು ವಾತರ್ಾ ಮತ್ತು ಪ್ರಸಾರ ಇಲಾಖೆಯ ಅಧಿಕಾರಿಗಳಿಂದ ಪಡೆದ ಮಾನ್ಯತಾ ಪತ್ರ ಕಡ್ಡಾಯವಾಗಿ ಹೊಂದಿರಬೇಕು. ಈ ರೀತಿಯ ದಾಖಲೆಗಳನ್ನು ಹೊಂದದೇ ಇರುವ ನಕಲಿ ಪತ್ರಕರ್ತರು ಅಧಿಕಾರಿಗಳಿಗೆ, ನೌಕರರಿಗೆ, ವ್ಯಾಪಾರಸ್ಥರಿಗೆ  ವಿನಾಕಾರಣ ತೊಂದರೆ ನೀಡುವುದು ಅಥವಾ ಹಣಕ್ಕಾಗಿ ಪೀಡಿಸುವುದು ಕಂಡುಬಂದರೆ ಅವರ ಬಗ್ಗೆ ಪೋಲಿಸ್ ಠಾಣೆಗೆ ಮಾಹಿತಿ ನೀಡಿ.  ಅಂಥವರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. 

  ಪ್ರವೀಣ ಎಂ.    ಪ್ರೊಭೇಷನರಿ ಡಿಎಸ್ಪಿ  ಮೂಡಲಗಿ.

ಬಾಕ್ಸ್ ನ್ಯೂಸ್ 2: ವಾತರ್ಾ ಮತ್ತು ಪ್ರಸಾರ ಇಲಾಖೆಯ ಮಾನ್ಯತೆ ಹೊಂದದ  ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಎಂಬ ನ್ಯೂಸ್ ಚಾನಲ್ ನಿಮರ್ಿಸಿಕೊಂಡು  ಸಕರ್ಾರಿ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ತೊಂದರೆ ನೀಡುವುದು ಗಮನಕ್ಕೆ ತಂದಲ್ಲಿ ನಕಲಿ ಪತ್ರಕರ್ತರ ವಿರುದ್ಧ ದೂರು ದಾಖಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗುವುದು.

      ಮುರುಳಿಧರ  ತಳ್ಳಿಕೇರಿ. ತಾಲೂಕ ದಂಡಾಧಿಕಾರಿ ಮೂಡಲಗಿ