ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಮನವಿ
ಬ್ಯಾಡಗಿ 10: ಪಟ್ಟಣದ ಗುಮ್ಮನ ಹಳ್ಳಿ ಸರ್ಕಲ್ ಬಳಿ ಡಾ.ಬಿ ಆರ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಮಾಡಿಕೊಡುವಂತೆ ಪುರಸಭೆ ಉಪಾಧ್ಯಕ್ಷರಿಗೆ ಹಾಗೂ ಆಶ್ರಯ ಸಮಿತಿ ಅಧ್ಯಕ್ಷರಿಗೆ ಒತ್ತಾಯಿಸಲಾಯಿತು.ಪಟ್ಟಣದ ಕರ್ನಾಟಕ ದಲಿತ ಸಂಘರ್ಷಣೆ ಸಮಿತಿ ಇವರ ವತಿಯಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮಹಾಪರಿನಿರ್ವಾಹಣ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗದಗ್ಕರ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿ ಮಾತನಾಡಿ ಗುಮ್ಮನ ಹಳ್ಳಿ ಸರ್ಕಲ್ ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪುತ್ತಳಿಯನ್ನು ನಿರ್ಮಾಣ ಮಾಡಿಕೊಡಿ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಥಳೀಯ ಪುರಸಭೆಯ ಉಪಾಧ್ಯಕ್ಷ ಸುಭಾಷ್ ಮಾಳ್ಗಿ ಹಾಗೂ ಆಶ್ರಯ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಮುನಾಫ್ ಎರೆಸಿಮಿ ಇವರಿಗೆ ಮಾಡಿದರು.
ಈ ಸಂದರ್ಭದಲ್ಲಿ ದುರ್ಗೇಶ್ ಗೋಣೆಮ್ಮನವರ್ ಖಾದರ್ ಸಾಬ್ ದೊಡ್ಮನಿ ರವಿ ಪೂಜಾರ ಮಂಜಣ್ಣ ಭೋವಿ ಮೋಹನ್ ಕುಮಾರ್ ಹುಲ್ಲತ್ತಿ ಜೈ ಭೀಮ್ ರಾರಾವಿ.ಮಜೀದ ಮುಲ್ಲಾ.ನಜೀರ ಶೇಖ್.ಶಬ್ಬಿರ ಕವಾಲಿ.ಹಾಗೂ ಕರ್ನಾಟಕ ದಲಿತ ಸಂಘರ್ಷಣೆ ಸಮಿತಿ ಕಾರ್ಯಕರ್ತರು ಅನೇಕರು ಉಪಸ್ಥಿತರಿದ್ದರು.