ಗಟಾರಗೆ ಅಡ್ಡಲಾಗಿ ನಿರ್ಮಿ ಸಿದ ಕಂಪೌಂಡ ತೆರವಿಗೆ ಆಗ್ರಹ

ಲೋಕದರ್ಶನ ವರದಿ

ರಾಯಬಾಗ: ಪಟ್ಟಣದ 13ನೇ ವಾರ್ಡನ ಚಿಂಚಲಿ ರಸ್ತೆ ಸರಕಾರಿ ಭವನದ ಹತ್ತಿರ ಗಟಾರ ನೀರು ಸರಾಗವಾಗಿ ಹರಿಯದಂತೆ ಖಾಸಗಿ ವ್ಯಕ್ತಿಗಳು ಗಟಾರಗೆ ಅಡ್ಡಲಾಗಿ ಕಂಪೌಂಡ ನಿರ್ಮಿ ಸಿರುವುದನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.  

  ಸುದ್ದಿಗಾರರೊಂದಿಗೆ ಮಾತನಾಡಿದ 13ನೇ ವಾರ್ಡ್ ನ ನಿವಾಸಿಗಳಾದ ಗಣಪತಿ ಕಾಂಬಳೆ, ದಿಲೀಪ ವೆರಣೇಕರ, ಶಂಕರ ಬಾಣಸಗಿ ಮತ್ತು ಇತರರು, ಪಟ್ಟಣ ಪಂಚಾಯತಿ ಚುನಾವಣೆ ಪೂರ್ವದಲ್ಲಿ ಇಲ್ಲಿನ ಖಾಸಗಿ ವ್ಯಕ್ತಿಯೊಬ್ಬರು ಗಟಾರ ನೀರು ಡ್ರೆನೇಜ್ ಮೂಲಕ ಮೌಖಿಕ ಅನುಮತಿ ನೀಡಿದ್ದರು, ಅದರಂತೆ ಗಟಾರ ನಿಮರ್ಿಸುವ ಕಾರ್ಯ ನಡೆದಿತ್ತು. ಆದರೆ ಚುನಾವಣೆ ಘೋಷಣೆ ಆಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ ಖಾಸಗಿ ವ್ಯಕ್ತಿಗಳು ಗಟಾರಗೆ ಅಡ್ಡಲಾಗಿ ಕಂಪೌಂಡ ನಿರ್ಮಿ ಸಿದ್ದರಿಂದ ಗಟಾರ ನೀರು ಹರಿದು ಹೋಗದೆ ರಸ್ತೆ ತುಂಬ ಹರಿಯುತ್ತಿದ್ದರಿಂದ, ದುವರ್ಾಸನೆಯಿಂದ ಇಲ್ಲಿನ ನಿವಾಸಿಗಳಿಗೆ ತುಂಬ ತೊಂದರೆ ಆಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಚಿಕ್ಕಮಕ್ಕಳಿಗೆ ಮತ್ತು ಶಾಲಾ ಮಕ್ಕಳಿಗೆ ಹಾದು ಹೋಗಲು ತೊಂದರೆ ಆಗುತ್ತಿದೆ. 

  ಗಟಾರ ನೀರು ಮನೆಯಲ್ಲಿ ನುಗ್ಗುವ ಸಂಭವವಿರುವುದರಿಂದ ಮತ್ತು ಬೋರವೆಲ್ಗಳಲ್ಲಿ ಗಟಾರ ನೀರು ಕೂಡುವುದರಿಂದ ಇಲ್ಲಿನ ನಿವಾಸಿಗಳು ಕಷ್ಟಪಡುವಂತಾಗಿದೆ ಎಂದು ಆರೋಪಿಸಿದರು. 

ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಕಂಪೌಂಡ ತೆಗೆದು ಡ್ರೆನೇಜ್ ಸರಿಪಡಿಸಿ ಗಟಾರ ನೀರು ಸುಗಮವಾಗಿ ಹರಿಯಲು ಅನುವು ಮಾಡಿಕೊಡುವಂತೆ ಕೇಳಿಕೊಂಡಿದ್ದರು, ಅವರ ಮನವಿಗೆ ಸ್ಪಂದಿಸದೇ, ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವುದು ಖಂಡನೀಯವಾಗಿದ್ದು, ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದರು. 

ಸಾರ್ವಜನಿಕ ಹಿತಾಸಕ್ತಿ ತೊಂದರೆ ಮಾಡುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಸಾರ್ವಜನಿಕ ಆರೋಗ್ಯ ಹಿತದೃಷ್ಠಿಯಿಂದ ಮಲೀನ ನೀರು ಮತ್ತು ತ್ಯಾಜ್ಯ ವಸ್ತುಗಳು ಸರಾಗವಾಗಿ ಹರಿದು ಮುಂದೆ ಹೋಗಲು ಅಪೂರ್ಣಗೊಂಡಿರುವ ಗಟಾರವನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. 

  ಗಣಪತಿ ಕಾಂಬಳೆ, ದಿಲೀಪ ವೆರಣೇ ಕರ, ಆಶೀಫ ಮುಲ್ಲಾ, ಶಂಕರ ಬಾನಸಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..