ಮದ್ಯದಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಮನವಿ

ಬೆಳಗಾವಿ, 22: ಉಗರಗೋಳ ಗ್ರಾಮದಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವ ಎರಡು ಮದ್ಯದ ಅಂಗಡಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಸೋಮವಾರ ಆದಿಶಕ್ತಿ ಮಾತಂಗಿದೇವಿ ಮಹಿಳಾ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ರಸ್ತೆಯಲ್ಲಿ ಎರಡು ಮದ್ಯದ ಅಂಗಡಿಗಳು ತಲೆ ಎತ್ತಿ ನಿಂತಿವೆ. ಸುಮಾರು 10ವರ್ಷಗಳಿಂದ ಒಂದೇ ಅಂಗಡಿ ಇತ್ತು. ಈಗ ಮತ್ತೊಂದು ಅಂಗಡಿ ನಿಮರ್ಾಣ ಮಾಡಿದ್ದಾರೆ. ಈ ಸರಾಯಿ ಅಂಗಡಿಗಳು ಇರುವುದರಿಂದ ರಸ್ತೆಯಲ್ಲಿ ಸಂಚರಿಸಲು ಮಹಿಳೆಯರಿಗೆ, ಮಕ್ಕಳಿಗೆ, ವೃದ್ದರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ರಸ್ತೆಯಲ್ಲಿ ಸಂಚರಿಸುವ ಮಹಿಳೆಯರಿಗೆ ಕುಡುಕರು ಅವಾಚ್ಯ ಶಬ್ದಗಳಿಂದ ಬಹಿರಂಗವಾಗಿ ನಿಂದಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಉಗರಗೋಳ ಗ್ರಾಮದ ಹೆಣ್ಣು ಮಕ್ಕಳು ದುಡಿದ ಹಣದಲ್ಲಿ ಕುಡುಕ ಗಂಡಸರು ಹೊಡೆದು ಬಡೆದು ಹಣ ಕಿತ್ತುಕೊಂಡು ಕುಡಿದು ಬಂದು ಮನೆಯಲ್ಲಿ ಜಗಳ ತೆಗದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ.ಇದರಿಂದ ಊರಿನ ಮಹಿಳೆಯರಿಗೆ ನೆಮ್ಮದಿ ಇಲ್ಲದಂಯಾಗಿದೆ. ಉಗರಗೋಳ ಗ್ರಾಮದಲ್ಲಿ ಇರುವ ಮದ್ಯದ ಅಂಗಡಿಯಲ್ಲಿ ಬಸವೇಶ್ವರ ದೇವಸ್ಥಾನ, ಪರಶುರಾಮ ರೂಢಮಠ, ಕಾನ್ವೆಂಟ್ ಸ್ಕೂಲ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಇರುತ್ತದೆ. ಇವುಗಳ ಮಧ್ಯ ಇರುವ ಸರಾಯಿ ಅಂಗಡಿಯನ್ನು ತೆರವುಗೊಳಿಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿ ಆವರಣದಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಅಧಕ್ಷರು ದುರ್ಗವ್ವಾ ಮ್ಯಾಗೇರಿ, ಉಪಾಧ್ಯಕ್ಷರು ರೇಣವ್ವ ಬಡೆಪ್ಪನವರ, ಪ್ರಧಾನ ಕಾರ್ಯದಶರ್ಿ ದ್ರಾಕ್ಷಾಯಣಿ ಬಸಲಿಂಗನವರ, ಸಹ ಕಾರ್ಯದಶರ್ಿ ಮಹಾದೇವಿ ಕಾಳಪ್ಪನವರ, ಕಸ್ತೂರಿ ಕೋಟಿರಿ, ಅನುಸೂಯಾ ಬಸಲಿಂಗನವರ, ಅನುಸೂಯಾ ಮುದೆನ್ನವರ, ಪಾರ್ವತೇವ್ವ ಹೊಸಮನಿ ಹಾಗೂ ಉಪಸ್ಥಿತರಿದ್ದರು.