ಘಟಪ್ರಭಾ ಎಡದಂಡೆ ಕಾಲುವೆ ಮೆಟ್ಟಿಲುಗಳ ಮರುನಿರ್ಮಾಣಕ್ಕೆ ಮನವಿ
ಲೋಕದರ್ಶನ ವರದಿ
ಘಟಪ್ರಭಾ 25: ಚಾಲ್ತಿಯಲ್ಲಿರುವ ಘಟಪ್ರಭಾ ಎಡದಂಡೆ ಕಾಲುವೆಯ ನವೀಕರಣ ಕಾಮಗಾರಿ ಸಂದರ್ಭದಲ್ಲಿ ದುರದುಂಡಿ ಸೇತುವೆ ಹತ್ತಿರ ಜನ ಬಳಕೆಗೆ ನಿಮರ್ಿಸಲಾದ ಮೆಟ್ಟಲುಗಳನ್ನು ತೆಗೆಯಲಾಗಿದ್ದು, ಇದರಿಂದ ಕಾಲುವೇ ತೀರದ ಜನರಿಗೆ ತೀರಾ ತೊಂದರೆ ಆಗುತ್ತಿರುವುದರಿಂದ ಮೆಟ್ಟಲುಗಳನ್ನು ಕೂಡಲೇ ನಿಮರ್ಿಸಬೇಕೆಂದು ಆಗ್ರಹಿಸಿ ಸ್ಥಳೀಯ ಸಮತಾ ಸೈನಿಕದಳ ಪಧಾದಿಕಾರಿಗಳು ನೀರಾವರಿ ನಿಗಮ ಜಿ.ಎಲ್.ಬಿ.ಸಿ ವಿಭಾಗ ನಂ.1 ಇದರ ಕಾರ್ಯನಿವರ್ಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಮೊದಲಿನಿಂದಲೂ ಘಟಪ್ರಭಾ ಎಡದಂಡೆ ಕಾಲುವೆಯ ಅಕ್ಕಪಕ್ಕದ ಸಾವಿರಾರು ಜನರು ಮತ್ತು ರೈತರು ತಮ್ಮ ಬಟ್ಟೆ ತೊಳೆಯಲು ಹಾಗೂ ತಮ್ಮ ಜಾನುವಾರುಗಳಿಗೆ ನೀರು ಕುಡಿಸಲು ಮತ್ತು ಮೈತೊಳೆಯಲು ಈ ಕಾಲುವೆ ನೀರನ್ನು ಬಳಸುತ್ತಾರೆ. ಇವರ ಅನುಕೂಲಕ್ಕಾಗಿ ಇಲ್ಲಿ ಮೆಟ್ಟಲುಗಳನ್ನು ನಿಮರ್ಿಸಲಾಗಿತ್ತು, ಆದರೆ ಈಗ ಕಾಲುವೆ ನವೀಕರಣ ಕಾಮಗಾರಿ ಭರದಿಂದ ಸಾಗಿದ್ದರಿಂದ ತರಾ ತುರಿಯಲ್ಲಿ ಇಲ್ಲಿರುವ ಮೆಟ್ಟಲುಗಳನ್ನು ಕಿತ್ತೊಗೆಯಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ನೀರಿನ ರಭಸಕ್ಕೆ ಜನ ಕೊಚ್ಚಿ ಹೋಗಿ ಪ್ರಾಣಾಪಾಯ ಸಂಭವಿದೆ.
ಆದ್ದರಿಂದ ಕೂಡಲೇ ದುರದುಂಡಿ ಸೇತುವೆ ಹತ್ತಿರ ಹಾಗೂ ಇನ್ನೂಳಿದ ಗ್ರಾಮಗಳ ಸಮೀಪದ ವಿರುವ ಕಾಲುವೆಗೆ ಮಟ್ಟಲು ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಯಾವುದೇ ಪ್ರಣ ಹಾಣಿ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕ್ರಮ ಕೈಗೊಳ್ಳದೇ ಹೋದಲ್ಲಿ ಇಲ್ಲಿ ಸಂಭವಿಸುವ ಅನಾಹುತಗಳಿಗೆ ನೀರಾವರಿ ನಿಗಮದ ಕಾರ್ಯನಿವರ್ಾಹಕ ಅಭಿಯಂತರರು ಕಾರಣರಾಗುತ್ತಾರೆ ಎಂದು ಸಮತಾ ಸೈನಿಕದಳ ತಾಲೂಕಾಧ್ಯಕ್ಷ ಅಜರ್ುನ ಗಂಡವ್ವಗೋಳ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಶಂಕರ ಸಣ್ಣಕ್ಕಿ, ರಾಘು ಚಿಂಚಲಿ, ವಿಠ್ಠಲ ಗೊರಜಪ್ಪಗೋಳ, ಕೃಷ್ಣಾ ಕರೆವ್ವಗೋಳ, ಮಲ್ಲಪ್ಪ ಗೋಕಾಕ, ವಿಠ್ಠಲ ಬಾ ಗಂಡವ್ವಗೋಳ, ಶಂಕರ ವಾಘ, ರಾಘು ಮೇತ್ರಿ ಸೇರಿದಂತೆ ಸಂಘಟನೆಯ ಅನೇಕ ಕಾರ್ಯಕರ್ತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 