ಸ್ವಯಂ ಘೋಷಿತ ವ್ಯಾಪಾರ ವಹಿವಾಟ ಬಂದ್ ಮಾಡುವಂತೆ ಮನವಿ

ಹುಕ್ಕೇರಿ ಜುಲೈ 11:  ಹುಕ್ಕೇರಿ ನಗರದಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಒಂದು ತಿಂಗಳ ವರಗೆ ಬೆಳಿಗ್ಗೆ 7 ರಿಂದ ಮದ್ಯಾಹ್ನ 1 ರ ವರಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಪಟ್ಟಣದ ವರ್ತಕರಲ್ಲಿ ಪುರಸಭೆ ಸದಸ್ಯರು ಮತ್ತು ಹಿರಿಯ ನಾಗರಿಕರು ಸಾರ್ವಜನಿಕರಲ್ಲಿ ಮತ್ತು ವ್ಯಾಪಾರಸ್ಥರಿಗೆ ವಿನಂತಿಸಿದರು. ಇಂದು ಪುರಸಭೆ 23 ಸದಸ್ಯರು ಪಟ್ಟಣದಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ಅಂಗಡಿಕಾರರಲ್ಲಿ ವಿನಂತಿಸಿ ಸ್ವಯಂ ಘೋಷನೆಯಿಂದ ಬಂದ್ ಮಾಡುವಂತೆ ಮನವಿ ಮಾಡಿದರು. 

ಮಾದ್ಯಮಗಳೊಂದಿಗೆ ಮಾತನಾಡಿದ ರಾಜು ಮುನ್ನೋಳ್ಳಿ  ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹೇಚ್ಚುತ್ತಿದೆ ನಿನ್ನೆ ಪಟ್ಟಣದ ಬೇಪಾರಿ ಗಲ್ಲಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾಳೆ ಕಾರಣ ನಾವು ಜಾಗ್ರತೆಯಿಂದ ಬದುಕಬೇಕಾಗಿದೆ ಆದ್ದರಿಂದ ಸಕರ್ಾರದ ನಿಯಮಗಳಾದ ಸಾಮಾಜಿಕ ಅಂತರ,ಮಾಸ್ಕ ಧರಿಸುವದು ಇತ್ಯಾದಿ ನಮ್ಮ ದಿನನಿತ್ಯದ ಕೇಲಸಗಳಲ್ಲಿ ಅಳವಡಿಸಕೋಳ್ಳ ಬೇಕು ಹಾಗೂ ನಗರದಲ್ಲಿ ವೈರಸ್ ಹರಡದಂತೆ  ಇಂದಿನಿಂದ ಒಂದು ತಿಂಗಳ ವರಗೆ ಮುಂಜಾನೆ 7 ಘಂಟೆಯಿಂದ ಮದ್ಯಾಹ್ನ 1 ಘಂಟೆಯವರಗೆ ಮಾತ್ರ ವ್ಯಾಪಾರ ವಹಿವಾಟುಗಳು ನಡೆಸಬೇಕು ಎಂದು ವ್ಯಾಪಾರಸ್ಥರಲ್ಲಿ ವಿನಂತಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸಂಗೀತಾ ಹುಕ್ಕೇರಿ, ಭಿಮಶಿ ಗೋರಕನಾಥ, ಸದಾ ಕರೆಪ್ಪಗೋಳ, ಎ ಕೆ ಪಾಟೀಲ ಮೊದಲಾದ ಪುರಸಭೆ ಸದಸ್ಯರು ಉಪಸ್ಥಿತರಿದ್ದರು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಪ್ರಕಾಶ ದೇಶಪಾಂಡೆ  ಮಾತನಾಡಿ ನಗರದಲ್ಲಿ ಕೊರೊನಾ ವೈರಸ್ ತಗುಲಿ ಓರ್ವ ಹೇಣ್ಣು ಮಗಳು ಮೃತಪಟ್ಟಿದ್ದಾರೆ ಕಾರಣ ಕೂಡಲೆ ಕ್ಷೇತ್ರದ ಶಾಸಕ ಹಾಗೂ ತಾಲೂಕು ಆಡಳಿತ ಮದ್ಯ ಪ್ರವೇಶಿಸಿ ನಗರವನ್ನು ಒಂದು ವಾರ ಕಾಲ ಸಂಪೂರ್ಣ ಲಾಕ್ ಡೌನ ಮಾಡಬೇಕು ಇಲ್ಲವಾದರೆ ಈ ಸೋಂಕು ಇನ್ನಷ್ಟು ಹೇಚ್ಚುವ ಭಯ ಇದೆ,ಪುರಸಭೆ ಸದಸ್ಯರು ಮಾತ್ರ ಸ್ವಯಂ ಘೋಷಣೆ ಯೊಂದಿಗೆ ಬಂದ್ ಮಾಡಲು ವ್ಯಾಪಾರಸ್ಥರಲ್ಲಿ ವಿನಂತಿಸುತ್ತಿದ್ದಾರೆ ಇದಕ್ಕೆ ಸಾರ್ವಜನಿಕರು ಸಮ್ಮತಿಸಬೇಕಾಗಿದೆ ಎಂದರು. ಸೋಂಕು ತಗುಲಿ ಮೃತಪಟ್ಟ ಮಹಿಳೆ ಮನೆಯ ಸುತ್ತ 50 ಮೀಟರ್ ಶೀಲ್ ಡೌನ ಮಾಡಲಾಗಿದ್ದು ನಗರದ ಮುಖ್ಯ ರಸ್ತೆ ಈಗ ಬಂದ್ ಆಗಿದೆ.