ಗಣರಾಜ್ಯೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ

ಗದಗ  27:  70 ನೇ ಗಣರಾಜ್ಯೋತ್ಸವ  ದಿನಾಚರಣೆ ನಿಮಿತ್ತ ನಗರದ ವಿವೇಕಾನಂದ ಸಭಾಂಗಣದಲ್ಲಿ  ದಿ. 26ರಂದು  ಜರುಗಿದ   ಸಾಂಸ್ಕೃತಿಕ ಕಾರ್ಯಕ್ರಮವನ್ನು  ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಉದ್ಘಾಟಿಸಿದರು.   ಶಾಲಾ ಮಕ್ಕಳು  ವಿದ್ಯಾಭ್ಯಾಸದೊಂದಿಗೆ  ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು   ತಿಳಿಸಿದರು.  ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ  ಶೇಕಡ 100 ರಷ್ಟು ಸಾಧನೆ ಮಾಡಿದ ಶಾಲೆಗಳಿಗೆ ಪ್ರಶಸ್ತಿ ನೀಡಲಾಯಿತು.   ಸಮಾರಂಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಸ್.ಎಸ್. ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ  ಅಜರ್ುನ ಗೊಳಸಂಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಅಕ್ಕಮಹಾದೇವಿ,  ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಅಂಗನವಾಡಿ ಶಾಲೆಯ ಕಾರ್ಯಕತರ್ೆಯರು, ಅಂಗನವಾಡಿ ಮಕ್ಕಳು,  ವಿವಿಧ ಶಾಲಾ ಕಾಲೇಜು  ಶಿಕ್ಷಕರುಗಳು, ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.  ಕು ಪೂಜಾ ಹಿರೇಮಠ  ಪ್ರಾಥರ್ಿಸಿದರು.   ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಜಿ.ಎಲ್. ಬಾರಾಟಕ್ಕೆ  ಸರ್ವರನ್ನು ಸ್ವಾಗತಿಸಿದರು.  ಶಿವಾನಂದ ಗೋಗೇರಿ ಕಾರ್ಯಕ್ರಮ ನಿರೂಪಿಸಿದರು.  ಅಂಗನವಾಡಿ ಮಕ್ಕಳು ಹಾಗೂ  ವಿವಿಧ ಶಾಲೆಯ  ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.