ಉಚ್ಚನ್ಯಾಯಾಲಯ ಪೀಠದಲ್ಲಿ ಗಣರಾಜ್ಯೋತ್ಸವ ಆಚರಣೆ
ಧಾರವಾಡ 28: ಧಾರವಾಡ ಉಚ್ಚನ್ಯಾಯಾಲಯ ಪೀಠದಲ್ಲಿ ನ್ಯಾಯಮೂತರ್ಿ ನಾಗರತ್ನ ಬಿ.ವಿ ಯವರು ಗಣರಾಜ್ಯೋತ್ಸವದ ದ್ವಜಾರೋಹಣ ಮಾಡಿದರು.
ನ್ಯಾಯಮೂತರ್ಿ ನಾಗರತ್ನ ಬಿ.ವಿ ಅವರು ಮಾತನಾಡಿ, ಸಂವಿದಾನ ಸಮಿತಿ ಅದ್ಯಕ್ಷರಾದ ಡಾ ಬಿ.ಆರ್ ಅಂಬೆಡ್ಕರ ಮತ್ತು ಇತರ ಸ್ವಾತಂತ್ರ ಹೊರಾಟಗಾರರ ಕರ್ತವ್ಯಗಳನ್ನು ನೆನೆಸಿಕೊಂಡು ಸಂವಿದಾನದ ಶ್ರೇಷ್ಟತೆ ಬಗ್ಗೆ, ನಾಗರಿಕರ ಹಕ್ಕುಗಳ ಬಗ್ಗೆ ಮತ್ತು ಕತ್ರ್ರವ್ಯಗಳ ಬಗ್ಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಉತ್ತಮ ನಾಗರಿಕರನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.
ಸಾರ್ವಜನಿಕ ಸಂಸ್ಥಗಳಲ್ಲಿ ಕೆಲಸ ಮಾಡುವವರು ತಮ್ಮ ಅಧಿಕಾರಚನ್ನು ಸ್ವಂತ ಲಾಭಕ್ಕಾಗಿ ಉಪಯೋಗಿಸಬಾರದು ಹಾಗೂ ತಮ್ಮ ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡುವದು ಮತ್ತು ದೇಶದ ಹಿತಾಸಕ್ತಿಗೆ ಹೆಚ್ಚಿನ ಗಮನ ಕೋಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಪರಸ್ಪರ ತಮ್ಮ ಕರ್ತವ್ಯಗಳನ್ನು ಅರಿತು ಕೆಲಸ ಮಾಡಿದ್ದಲ್ಲಿ, ನ್ಯಾಯ ಬೇಡಿ ಬರುವ ಜನರಿಗೆ ಸೂಕ್ತ ನ್ಯಾಯ ಒದಗಿಸಬಹುದಾಗಿದೆ. ನಾವು ಪ್ರತಿಯೋಬ್ಬರು ಸಂವಿದಾನದ ಘನತೆ ಗೌರವಗಳನ್ನು ಎತ್ತಿ ಹಿಡಿದು ಅದರ ಮೌಲ್ಯಗಳ ಅಡಿಯಲ್ಲಿಯೆ ಜೀವಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಮೂತರ್ಿ ಬೆಳ್ಳುಂಕೆ ರಜಿಸ್ಟ್ರಾರ್ ವಟವಟಿ ಸೇರಿದಂತೆ ಧಾರವಾಡ ನಗರದ ಎಲ್ಲಾ ನ್ಯಾಯಾಧೀಶರು, ವಕಿಲರ ಸಂಘದ ಅದ್ಯಕ್ಷ ಚ.ಸ.ಪಾಟಿಲ ಮತ್ತು ಪದಾದಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 