ಹಳಗನ್ನಡ ಓದು : ಬೋಧನಾ ವಿಧಾನ ಕುರಿತು ಅಧ್ಯಾಪಕರಿಗಾಗಿ ಕಾರ್ಯಾಗಾರ
Reading Old Kannada: A Workshop for Teachers on Teaching Methods
ಲೋಕದರ್ಶನ ವರದಿ
ಧಾರವಾಡ 09: ಹಳಗನ್ನಡದ ಓದು, ಅದನ್ನು ಸರಳೀಕರಿಸುವ ವಿಧಾನವನ್ನರಿಯುವುದು ನಮ್ಮ ಕನ್ನಡ ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಕನ್ನಡ ಭಾಷೆಯ ಒಳನೋಟವನ್ನರಿತು ಪ್ರತಿಯೊಂದು ವಾಕ್ಯದ, ಶಬ್ದದ ಅರ್ಥವನ್ನು ಪರಿಣಾಮಕಾರಿಯಾಗಿ ವಿವರಿಸುವುದು ಅವಶ್ಯವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಎಂ.ಖಾನ್ ಹೇಳಿದರು.
ಅವರು ಇಂದು (ಜು.09) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗ, ಬೆಳಗಾವಿ, ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕವಿವಿ ಕನ್ನಡ ಅಧ್ಯಾಪಕರ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ಕವಿವಿ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ “ವಿಶ್ವನಿಕೇತನ” ಸಭಾಂಗಣದಲ್ಲಿ ಏರಿ್ಡಸಿದ್ದ "ಹಳಗನ್ನಡ ಓದು: ಬೋಧನಾ ವಿಧಾನ" ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ, ಮಾನತಾಡಿದರು.
ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಗಮನಿಸಿದಾಗ, ಅವರ ಭಾವನೆಗಳನ್ನು ಅರ್ಥಮಾಡಿಕೊಂಡು, ಅವರು ಪ್ರಭಾವಗೊಳ್ಳುವಂತೆ ಪಾಠ ಮಾಡುವ ಸಾಮರ್ಥ್ಯವನ್ನು ಅಧ್ಯಾಪಕರು ಹೊಂದಬೇಕು. ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ವಿವಿಧ ಆಯಾಮಗಳಲ್ಲಿ ಚಿಂತನೆಗೆ ಹಚ್ಚುವ ಕಾರ್ಯಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ. ಶಾಂತಿನಾಥ ದಿಬ್ಬದ ಅವರು ಮಾತನಾಡಿ, ಸೌಂದರ್ಯದ ದೃಷ್ಟಿಯಿಂದ ಗದ್ಯಕ್ಕಿಂತ ಪದ್ಯ ಹೆಚ್ಚು ಆನಂದ ಕೊಡುತ್ತದೆ. ಸಾಹಿತ್ಯ ಹುಟ್ಟಬೇಕಾದರೆ ಭಾಷೆ ಮುಖ್ಯವಾಗುತ್ತದೆ. ಮನುಷ್ಯ ಸಂಶೋಧಿಸಿದರಲ್ಲಿ ಮುಖ್ಯವಾಗಿ ಭಾಷೆ, ಬೆಂಕಿ ಮತ್ತು ಚಕ್ರ ಅಥವಾ ಪ್ರಗತಿ ಪ್ರಮುಖವಾದುದಾಗಿದೆ.
ಭಾಷೆಯ ಮಹತ್ವ ತಿಳಿದಾಗ ಮಾತ್ರ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಾಗುತ್ತದೆ. ಒಳ್ಳೆಯ ಶಬ್ದಗಳ ಉತ್ತಮ ಜೋಡಣೆಯೇ ಕಾವ್ಯವಾಗಿದೆ. ಪ್ರಾಧ್ಯಾಪಕ ವೃತ್ತಿಗೆ ಬಂದಾಗ ಸಾಕಷ್ಟು ಪ್ರಬಲವಾದ ಆಸಕ್ತಿ, ಶ್ರದ್ಧೆ, ಸಾಕಷ್ಟು ಸಿದ್ಧತೆಯಿಂದ ವರ್ಗಕ್ಕೆ ತೆರಳಿದಾಗ ಮಾತ್ರ ವಿಷಯದಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ ಎಂದರು.
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ 