ಕೇಂದ್ರ ಬರ ಅಧ್ಯಯನ ತಂಡದಿಂದ ಬರದ ತೀವ್ರತೆ ಪರಿಶೀಲನೆ ವಾರದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಕೆ: ಮಹೇಶ್

Center for Drought Study

ಬಾಗಲಕೋಟೆ 17: ಜಿಲ್ಲೆಯಲ್ಲಿ ಬರ ತೀವ್ರತೆಯನ್ನು ಪರಿಶೀಲಿಸಿದ ಕೇಂದ್ರ ಬರ ಅಧ್ಯಯನ ತಂಡ ಈ ಕುರಿತು ಒಂದು ವಾರದೊಳಗೆ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ತಂಡದ ಮುಖ್ಯಸ್ಥ ಹಾಗೂ ಪಶು ಸಂಗೋಪನೆ ಇಲಾಖೆಯ ನಿದರ್ೇಶಕ ಡಾ.ಮಹೇಶ ಹೇಳಿದರು.

ಬಾದಾಮಿ ತಾಲೂಕಿನ ಜಂಗವಾಡ, ಹವಳಖೋಡ, ಮಾಳಗಿ, ಕೆರೂರ ಮುಂತಾದ ಕಡೆಗಳ ವಿವಿಧ ಪ್ರದೇಶಗಳಲ್ಲಿ ಇರುವ ಹೊಲದಲ್ಲಿ ಹಾನಿಗೊಳಗಾಗಿರುವ ಈರುಳ್ಳಿ, ಮೆಕ್ಕೆಜೋಳ, ಸೂರ್ಯಕ್ರಾಂತಿ ಮತ್ತು ಸಜ್ಜೆ ಬೆಳೆಯನ್ನು ಪರಿಶೀಲಿಸಿ ಮಾತನಾಡಿದ ಅವರು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬೆಳೆಹಾನಿ ಪರಿಶೀಲಿಸಲಾಗಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯನ್ವಯ ಒಂದು ವಾರದಲ್ಲಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದೆಂದರು.

ಬೆಳೆಹಾನಿ ಕುರಿತು ಜಿಲ್ಲಾಧಿಕಾರಿಗಳು ನೀಡುವ ಸಮಗ್ರ ವರದಿ ಹಾಗೂ ಕ್ಷೇತ್ರ ಭೇಟಿ ವೇಳೆ ಅಧ್ಯಯನ ತಂಡ ಕಂಡುಕೊಂಡ ವಾಸ್ತವ ಪರಿಸ್ಥಿತಿಯನ್ನು ಆಧರಿಸಿ ವರದಿ ಸಿದ್ದಪಡಿಸಲಾಗುತ್ತಿದೆ. ರಾಜ್ಯದಲ್ಲಿ ಘೋಷಿಸಲಾದ ಬರ ಪೀಡಿತ ಪ್ರದೇಶಗಳ ಅಧ್ಯನ ನಡೆಸಿ ಅವುಗಳನ್ನೆಲ್ಲ ಕ್ರೋಢಿಕರಿಸಿ ಸಿದ್ದಪಡಿಸುವ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುತ್ತಿದೆ ಎಂದರು. ಜಿಲ್ಲೆಯ ಬಾದಾಮಿ ಮತ್ತು ಬಾಗಲಕೋಟ ತಾಲೂಕಿನ ವಿವಿಧ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿಯನ್ನು ಪರಿಶೀಲಿಸಿದರು. 

ಬಾದಾಮಿ ತಾಲೂಕಿನ ಜಂಗವಾಡ ಗ್ರಾಮದ ರೈತನಾದ ಮಹಮ್ಮದಸಾಬ ಪಿಂಜಾರ ಅವರ 5 ಎಕರೆ ಜಮೀನಿನಲ್ಲಿ ಒಣಗಿರುವ ಮೆಕ್ಕೆಜೋಳ ಬೆಳೆಯನ್ನು ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರು ಪರಿಶೀಲಿಸಿದರು. ಅವನಿಂದ ಮಾಹಿತಿ ಪಡೆದ ತಂಡದ ಸದಸ್ಯರು ಮೊದಲು ಪ್ರತಿ ಎಕರೆಗೆ 18 ರಿಂದ 20 ಕ್ವಿಂಟಲ್ ಬೆಳೆಯುತ್ತಿದ್ದೆ. ಸದ್ಯ ಪ್ರತಿ ಎಕರೆಗೆ 3 ಕ್ವಿಂಟಲ್ ಬೆಳೆ ಬರುತ್ತಿಲ್ಲ. ಕೊಳವೆಬಾವಿಯ ನೀರು ಕೂಡಾ ಬತ್ತಿದ್ದರಿಂದ 1 ಎಕರೆಯಲ್ಲಿ ಹಾಕಿದ ಈರುಳ್ಳಿ ಒಣಗಿ ಕೈಕೊಟ್ಟಿದೆ ಎಂದು ಗೋಳು ತೋಡಿಕೊಂಡರು.

ಜಂಗವಾಡ ಗ್ರಾಮದ ರೈತರಾದ ರಶ್ಮೀ ಗುರುಪಾದಪ್ಪ ಹೂಗಾರ 17.16 ಎಕರೆ ಪ್ರದೇಶದಲ್ಲಿ ಸೂರ್ಯಕ್ರಾಂತಿ ಬೆಳೆ ಒಣಗಿದೆ. ಹಿಂದೆ ಹೆಸರು, ಶೇಂಗಾ ಹಾಕುತ್ತಿದ್ದು ಚೆನ್ನಾಗಿ ಬೆಳೆ ಬರುತ್ತಿತ್ತು. ಆದರೆ 2009 ರಿಂದ ಮಳೆಯ ಅಭಾವದಿಂದ ಯಾವುದೇ ಬೆಳೆ ಸರಿಯಾಗಿ ಬಂದಿರುವುದಿಲ್ಲವೆಂದು ತಂಡದ ಸದಸ್ಯರಲ್ಲಿ ಅಳಲನ್ನು ತೋಡಿಕೊಂಡರು. ಅದೇ ರೀತಿ ಮುತ್ತಪ್ಪ ಪಕೀರಪ್ಪ ಸವದತ್ತಿ ಎಂಬ ರೈತ ತನ್ನ 5 ಎಕರೆ ಜಮೀನಿನಲ್ಲಿ ಹಾಗೂ ಸಿದ್ದಪ್ಪ ದೊಡಮನಿ ಅವರ 7.35 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದು, ಮಳೆಯ ಅಭಾವದಿಂದ ಬೆಳೆ ಒಣಗಿಹೋಗಿದೆ ಎಂದು ಅಳಲನ್ನು ತೋಡಿಕೊಂಡಾಗ ಕೃಷಿ ಹೊಂಡ ನಿಮರ್ಿಸಿಕೊಂಡು ಮಳೆಯಾದಾಗ ನೀರು ಸಂಗ್ರಹಿಸುವಂತೆ ಸಲಹೆ ನೀಡಿದರು.

ಕೆರೂರ ಗ್ರಾಮದ ರೈತ ರಂಗಪ್ಪ ಪಕೀರಪ್ಪ ಪಡಿಮನಿ ಅವರ 11 ಎಕರೆ ಜಮೀನಿನಲ್ಲಿ ಹಾನಿಗೊಳಗಾದ ಈರುಳ್ಳಿ ಬೆಳೆಯನ್ನು ಪರಿಶೀಲಿಸಿದ ಇದಕ್ಕೆ ತಗುಲಿದ ಖಚರ್ುವೆಚ್ಚದ ಮಾಹಿತಿಯನ್ನು ರೈತರಿಂದ ಪಡೆದುಕೊಂಡರು. ಜಿಲ್ಲೆಯ ಬರದ ವಾಸ್ತವ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಜಿಲ್ಲೆಯ 6 ತಾಲೂಕುಗಳಲ್ಲಿ ಒಟ್ಟು 117 ಕೋಟಿ ರೂ. ಹಾನಿಗೊಳಗಾದ ಮಾಹಿತಿಯನ್ನು ಕೇಂದ್ರ ಬರ ಅಧ್ಯಯನ ತಂಡಕ್ಕೆ ವಿವರಿಸಿದರು. 

ಬರ ಪರಿಶೀಲನಾ ವೇಳೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರಾದ ಸಿಡಬ್ಲೂಸಿಯ ನಿದರ್ೇಶಕ ಓ.ಆರ್.ಕೆ. ರೆಡ್ಡಿ ಮತ್ತು ಗ್ರಾಮೀಣಾಭಿವೃದ್ದಿ ಮಂತ್ರಾಲಯದ ಉಪ ಕಾರ್ಯದಶರ್ಿ ನೀತಾ ತಹಿಲಾನಿ, ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಉಪ ವಿಭಾಗಾಧಿಕಾರಿ ಎಚ್.ಜಯ ಸೇರಿದಂತೆ ಕೃಷಿ, ತೋಟಗಾರಿಕೆ, ಪಶು ಇಲಾಖೆ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಇದ್ದರು.