ಕೊಪ್ಪಳ 23: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈಗಾಗಲೆ ನಿಗದಿಪಡಿಸಿದ ಕಾಮಗಾರಿಯನ್ನು ಅಥವಾ ಏಜೆನ್ಸಿಯನ್ನು ಬದಲಿಸುವ ಹಾಗಿದ್ದರೆ ಈ ಕುರಿತು ವರದಿ ಸಲ್ಲಿಸಿ, ಇದರಲ್ಲಿ ಹಂಚಿಕೆಯಾದ ಜಾಗದ ಬದಲಾವಣೆಯೂ ಒಳಗೊಂಡಿದ್ದು, ಯಾವುದೇ ಬದಲಾವಣೆ ಇದ್ದರೆ ಅದಕ್ಕೆ ತಕ್ಕ ಪ್ರಸ್ತಾವನೆಯನ್ನು ಬರುವ ಆಗಸ್ಟ್ 15ರೊಳಗೆ ಸಲ್ಲಿಸಿ ಮತ್ತು ಸೆಪ್ಟೆಂಬರ್ 1 ರಿಂದ ಕಡ್ಡಾಯವಾಗಿ ಕಾಮಗಾರಿಯನ್ನು ಆರಂಭಿಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಸುಬೋಧ್ ಯಾದವ್ ಅನುಷ್ಠಾನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು (ಜುಲೈ.23) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಹೈದರಾಬಾದ್ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಿಡುಗಡೆಯಾದ ಹಣ ಬಳಕೆ ಪ್ರಮಾಣ ಪತ್ರ ಕುರಿತ ಅನುಷ್ಠಾನ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಲ್ಪಾವಧಿ ಅಥವಾ ದೀಘರ್ಾವಧಿ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಾಗ ಸರಿಯಾದ ಮೊತ್ತವನ್ನು ನಮೂದಿಸಿ ನಿಗದಿತ ಕಾಲಮಿತಿಯೊಳಗೆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಕಾಮಗಾರಿ ಪೂರ್ಣಗೊಳಿಸಿ. ಆಥರ್ಿಕ ಹಾಗೂ ಭೌತಿಕ ಸಾಧನೆಯು ಸಮನಾಗಿರುವಂತೆ ಸರಿಯಾದ ದತ್ತಾಂಶಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಬೇಕು. ಹೈದರಾಬಾದ್ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2013-14 ರಿಂದ 2018-19 ರವರೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿವಿಧ ಹಂತದಲ್ಲಿ ಏಜೆನ್ಸಿಗಳನ್ನು ನೇಮಿಸಿ ಅನುಷ್ಠಾನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದರಂತೆ 2013-14 ನೇ ಸಾಲಿನಿಂದ 2018-19 ರವರೆಗೆ ಸಾಮಾನ್ಯ, ಎಸ್.ಸಿ.ಪಿ, ಟಿ.ಎಸ್.ಪಿ ವಿಭಾಗದಲ್ಲಿ ನಿದರ್ಿಷ್ಟ ಕಾಮಗಾರಿಗಳಿಗೆ ನಿದರ್ಿಷ್ಟ ಮೊತ್ತವನ್ನು ಸಹ ಬಿಡುಗಡೆ ಮಾಡಲಾಗಿದೆ. ಆದರೆ ಬಿಡುಗಡೆ ಆದ ಹಣವನ್ನು ಅನುಷ್ಠಾನ ಏಜೆನ್ಸಿಗಳು ಸಮರ್ಪಕವಾಗಿ ಬಳಕೆ ಮಾಡಿಲ್ಲ. ಅಭಿವೃದ್ಧಿ ಕಾಮಗಾರಿಗಳೂ ಅನುಷ್ಠಾನಗೊಂಡಿಲ್ಲ. ಇದಕ್ಕೆ ಸಂಬಂಧಿಸಿದ ಏಜೆನ್ಸಿಗಳ ಅನುಷ್ಠಾನ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಕರ್ಾರದ ಆದೇಶದಂತೆ ನಿದರ್ಿಷ್ಟ ಮೊತ್ತದ ಕಾಮಗಾರಿಗೆ ಅನುಮತಿ ಸಿಕ್ಕ ನಂತರ ನಿಗದಿ ಪಡಿಸಿದ ಕಾಲಮಿತಿಯೊಳಗೆ ಟೆಂಡರ್ ಪ್ರಕ್ರಿಯೆ ಸೇರಿದಂತೆ ಕಾಮಗಾರಿಯ ಎಲ್ಲ ಹಂತಗಳು ಪೂರ್ಣಗೊಳ್ಳಬೇಕು. 2019-20 ನೇ ಸಾಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಸಿದ್ಧಪಡಿಸಿದ ಕ್ರಿಯಾಯೋಜನೆಗೆ ವೇಳಾಪಟ್ಟಿ ಅನುಸಾರ ಕಾಯರ್ಾರಂಭ ಮಾಡಿ. 2018-19 ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯು ಉತ್ತಮ ಸಾಧನೆ ಮಾಡಿದೆ ಆದರೂ ಈ ಹಿಂದಿನ ಅವಧಿಯ ಕಾಮಗಾರಿಗಳು ಕೆಲವೆಡೆ ಇನ್ನೂ ಆರಂಭವಾಗಿಲ್ಲ. ಆರಂಭವಾದ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಗಳು ಬಾಕಿ ಇವೆ. ಅವುಗಳನ್ನು ಮುತುವಜರ್ಿ ವಹಿಸಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಎಂದು ಹೇಳಿದರು.
ಕೆಲ ತಾಲ್ಲೂಕುಗಳಲ್ಲಿ ಗ್ರಾಮಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ನೀಡಿದ ವರದಿಯಲ್ಲಿ ಒಟ್ಟು ಗ್ರಾಮಗಳ ವಿವಿಧ ಕಾಮಗಾರಿಗಳ ಕ್ರೋಢೀಕೃತ ವರದಿಯನ್ನು ನೀಡಿದ್ದೀರಿ. ಯಾವ ಕಾಮಗಾರಿ ಯಾವ ಗ್ರಾಮಕ್ಕೆ ಸಂಬಂಧಿಸಿದ್ದು ಎಂಬ ವಿವರಣೆ ಇಲ್ಲ. ಅದನ್ನು ಬದಲಾಯಿಸಿ ಗ್ರಾಮವಾರು ರಸ್ತೆ ಅಭಿವೃದ್ಧಿ, ಒಳ ಚರಂಡಿ ಕಾಮಗಾರಿ, ಸಿಸಿ ರಸ್ತೆ ನಿಮರ್ಾಣ ಯಾವ ಗ್ರಾಮಕ್ಕೆ ಯಾವ ಕಾಮಗಾರಿ ಮತ್ತು ಕಾಮಗಾರಿಯ ಪ್ರಗತಿ, ಮೊತ್ತ ಎಲ್ಲ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಸಲ್ಲಿಸಬೇಕು.
ವಸತಿ ನಿಲಯಗಳ ನಿಮರ್ಾಣ ಸೇರಿದಂತೆ ಸಕರ್ಾರಿ ಕಟ್ಟಡಗಳ ನಿಮರ್ಾಣಕ್ಕೆ ಕಳೆದ ವರ್ಷವೇ ಅನುಮತಿ ನೀಡಲಾಗಿದೆ. ಆದರೆ ಹಂಚಿಕೆಯಾದ ಜಾಗದಲ್ಲಿ ಕಟ್ಟಡ ನಿಮರ್ಾಣ ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ಈಗ ನೀಡುತ್ತಿದ್ದೀರಿ. ಹಂಚಿಕೆಯಾದ ಜಾಗದ ಕುರಿತು ಏನಾದರೂ ವ್ಯಾಜ್ಯಗಳು ಅಥವಾ ಗೊಂದಲಗಳು ಇದ್ದರೆ ಅಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿದ ಕಾರಣಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಆ ಕೂಡಲೇ ಒದಗಿಸಿ. ಇದರಿಂದ ಮುಂದೆ ಉಂಟಾಗುವ ಗೊಂದಲಗಳನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಮಂಡಳಿಯಿಂದ ಪ್ರದೇಶಾಭಿವೃದ್ಧಿಗೆ ಬಿಡುಗಡೆಯಾದ ಹಣದ ಸಮರ್ಪಕ ಬಳಕೆ ಹಾಗೂ ಕಾಮಗಾರಿಯ ಪ್ರಗತಿಯನ್ನು ತಿಳಿಯಲು ಮಂಡಳಿಯು 2 ನಮೂನೆಗಳನ್ನು ಸಿದ್ದಪಡಿಸಿದೆ. ನಮೂನೆ-1 ಅನುಷ್ಠಾನ ಏಜೆನ್ಸಿಗಳು ಹಾಗೂ ನಮೂನೆ-2 ಥಡರ್್ ಪಾಟರ್ಿಗಳಿಗೆ ಸಂಬಂಧಿಸಿದ್ದಾಗಿದೆ. ಈ ನಮೂನೆಗಳಲ್ಲಿ ನಿಗದಿ ಪಡಿಸಿದ ಕಾಲಂಗಳಲ್ಲಿ ಪ್ರತಿನಿತ್ಯದ ಕಾಮಗಾರಿ ಪ್ರಗತಿಯನ್ನು ಭರ್ತಿ ಮಾಡಿ ಪ್ರತಿದಿನ ಸಂಜೆ 5.30 ರ ಒಳಗಾಗಿ ಸಲ್ಲಿಸಬೇಕು. ಇದರಿಂದ ಕಾಮಗಾರಿಯ ಅನುಷ್ಠಾನ ಹಾಗೂ ಪ್ರಗತಿಯ ಕುರಿತು ಪ್ರತಿದಿನದ ಮಾಹಿತಿ ಲಭ್ಯವಾಗುತ್ತದೆ. ಅಂತಿಮ ವರದಿ ಸಲ್ಲಿಸಲೂ ಸುಲಭವಾಗುತ್ತದೆ ಎಂದು ಅವರು ಹೇಳಿದರು.
ಮುಂದಿನ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಹಾಜರಿರಬೇಕು ಹಾಗೂ ಕರ್ತವ್ಯ ನಿಮಿತ್ತ ಕೇಂದ್ರ ಸ್ಥಾನ ಬಿಟ್ಟು ತೆರಳುವ ಸಂದರ್ಭ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮತಿಯನ್ನು ಲಿಖಿತ ರೂಪದಲ್ಲಿ ಪಡೆದು ತೆರಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂತರ್ಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಅಪರ ಜಿಲ್ಲಧಿಕಾರಿ ಸೈಯಿದಾ ಅಯಿಷಾ ಸೇರಿದಂತೆ ಜಿಲ್ಲೆಯ ಅನéುಷ್ಠಾನ ಅಧಿಕಾರಿಗಳು, ವಿವಿಧ ವಿಭಾಗಗಳ ಅಭಿಯಂತರರು ಉಪಸ್ಥಿತರಿದ್ದರು.